»   » ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಸದ್ಯದಲ್ಲೇ ಶುರು ಕಣ್ರೀ.!

ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಸದ್ಯದಲ್ಲೇ ಶುರು ಕಣ್ರೀ.!

Posted By:
Subscribe to Filmibeat Kannada

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಖ್ಯಾತಿಯ 'ಸಿಂಪಲ್ ಹುಡುಗ' ರಕ್ಷಿತ್ ಶೆಟ್ಟಿ ಈಗ ನಟ ಹಾಗೂ ನಿರ್ದೇಶಕ ಮಾತ್ರ ಅಲ್ಲ, ನಿರ್ಮಾಪಕ ಕೂಡ ಹೌದು ಎಂಬ ಸುದ್ದಿ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನೀವೆಲ್ಲಾ ಓದಿದ್ದೀರಾ.

ಹೋಮ್ ಬ್ಯಾನರ್ PARAMVAH STUDIOS ಅಡಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸುತ್ತಿರುವ ಚೊಚ್ಚಲ ಸಿನಿಮಾ 'ಕಿರಿಕ್ ಪಾರ್ಟಿ'.

ರಕ್ಷಿತ್ ಶೆಟ್ಟಿಗಾಗಿ 'ರಿಕ್ಕಿ' ಸಿನಿಮಾ ನಿರ್ದೇಶನ ಮಾಡಿದ್ದ ರಿಶಬ್ ಶೆಟ್ಟಿ, 'ಕಿರಿಕ್ ಪಾರ್ಟಿ' ಚಿತ್ರಕ್ಕೂ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ.['ಕಿರಿಕ್ ಪಾರ್ಟಿ' ಮಾಡ್ತಾರೆ ರಿಶಬ್ ಮತ್ತು ರಕ್ಷಿತ್ ಶೆಟ್ಟಿ.!]

Poster out; Rakshit Shetty's new venture 'Kirik Party'

ಈಗಷ್ಟೇ ತಮ್ಮ ನೂತನ ಸಂಸ್ಥೆ PARAMVAH STUDIOS ಗೆ ಚಾಲನೆ ನೀಡಿರುವ ರಕ್ಷಿತ್ ಶೆಟ್ಟಿ, 'ಕಿರಿಕ್ ಪಾರ್ಟಿ' ಪೋಸ್ಟರ್ ರಿಲೀಸ್ ಮಾಡಿ ಪ್ರೀ ಪ್ರೊಡಕ್ಷನ್ ವರ್ಕ್ ನಲ್ಲಿ ತೊಡಗಿದ್ದಾರೆ.

ಮಾಡಿರುವ ಪ್ಲಾನ್ ಪ್ರಕಾರ, ಎಲ್ಲವೂ ಸಲೀಸಾಗಿ ನಡೆದರೆ ಸದ್ಯದಲ್ಲೇ ಗಾಂಧಿನಗರದಲ್ಲಿ 'ಕಿರಿಕ್ ಪಾರ್ಟಿ' ಶುರುವಾಗಲಿದೆ.

'ಕಿರಿಕ್ ಪಾರ್ಟಿ' ಯಲ್ಲಿ ಯಾರ್ಯಾರು ಇರಲಿದ್ದಾರೆ ಅನ್ನೋದು ಸದ್ಯಕ್ಕಿನ್ನೂ ಕನ್ಫರ್ಮ್ ಆಗಿಲ್ಲ. ಪಕ್ಕಾ ಆದ ತಕ್ಷಣ ನಾವೇ ನಿಮಗೆ ಮೊದಲು ತಿಳಿಸುತ್ತೇವೆ.

English summary
Kannada Actor Rakshit Shetty is all set to become Producer for Rishab Shetty directorial 'Kirik Party'. Check out 'Kirik Party' movie poster here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada