»   » ಹೊಸ ವರ್ಷದಂದು ಪವನ್ ಕಲ್ಯಾಣ್ ಮಾಡಿದ ರೆಸಲ್ಯೂಷನ್ ಏನು?

ಹೊಸ ವರ್ಷದಂದು ಪವನ್ ಕಲ್ಯಾಣ್ ಮಾಡಿದ ರೆಸಲ್ಯೂಷನ್ ಏನು?

Posted By:
Subscribe to Filmibeat Kannada

ಹೊಸ ವರ್ಷಕ್ಕೆ ಏನಾದರೊಂದು ರೆಸಲ್ಯೂಷನ್ ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯ. ಸ್ಟಾರ್ ಗಳು ಸಹ ಅಷ್ಟೇ, ತಾವು ತೆಳ್ಳಗಾಗಬೇಕು, ಒಳ್ಳೊಳ್ಳೇ ಸಿನಿಮಾಗಳಲ್ಲಿ ಅಭಿನಯಿಸಬೇಕು, ಈ ವರ್ಷ ಒಂದು ಸೂಪರ್ ಹಿಟ್ ಸಿನಿಮಾ ಕೊಡಲೇಬೇಕು ಅಂತ ಪ್ರತಿ ವರ್ಷ ರೆಸಲ್ಯೂಷನ್ ಮಾಡೇ ಮಾಡ್ತಾರೆ.

ಆದ್ರೆ, ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಈ ಬಾರಿ ತಮ್ಮ ಅಭಿಮಾನಿಗಳೊಂದಿಗೆ ಹೆಚ್ಚು ಹರಟುವ ರೆಸಲ್ಯೂಷನ್ ಮಾಡಿದಂತಿದೆ. ಅದಕ್ಕೆ ಸ್ಪಷ್ಟ ಸಾಕ್ಷಿ, ಹೊಸ ವರ್ಷದಂದೇ (ಜನವರಿ 1, 2015) ಪವನ್, ಅಧಿಕೃತವಾಗಿ ತೆರೆದಿರುವ ಟ್ವಿಟ್ಟರ್ ಅಕೌಂಟ್.

pawan kalyan

ಹೌದು, ತಮ್ಮನ್ನ ಆರಾಧಿಸುವ ಅಭಿಮಾನಿಗಳೊಂದಿಗೆ ಮಾತುಕತೆ ಮಾಡುವುದಕ್ಕೆ ಇತ್ತೀಚೆಗೆ ಸೆಲೆಬ್ರಿಟಿಗಳಿಗೆ ಉಪಯುಕ್ತವಾಗಿರುವುದು ಟ್ವಿಟ್ಟರ್ ಮತ್ತು ಫೇಸ್ ಬುಕ್ ಅಂತಹ ಸಾಮಾಜಿಕ ಜಾಲತಾಣಗಳು. ಈಗಾಗ್ಲೇ ಶಾರೂಖ್ ಖಾನ್, ಸಲ್ಮಾನ್ ಖಾನ್, ರಜನಿಕಾಂತ್, ಕಿಚ್ಚ ಸುದೀಪ್ ಅಂತಹ ದೊಡ್ಡ ದೊಡ್ಡ ಸ್ಟಾರ್ ಗಳೇ ಟ್ಟಿಟ್ಟರ್ ನಲ್ಲಿ ಕೋಟ್ಯಾಂತರ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. [ಆಮೀರ್ ಖಾನ್ ಜಾಗ ತುಂಬುತ್ತಾರಾ ಪವನ್ ಕಲ್ಯಾಣ್?]

ಇದೀಗ ಇದೇ ಲಿಸ್ಟ್ ಗೆ 2015 ರಲ್ಲಿ ಮೊದಲ ಎಂಟ್ರಿ ಕೊಟ್ಟಿರುವುದು ಪವರ್ ಸ್ಟಾರ್ ಪವನ್ ಕಲ್ಯಾಣ್. ಹೊಸ ವರ್ಷದಂದೇ ಟ್ವಿಟ್ಟರ್ ಖಾತೆ ತೆರೆದು, ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಹೇಳುವ ಮೂಲಕ ಪವನ್, ಮೊಟ್ಟ ಮೊದಲ ಟ್ವೀಟ್ ಮಾಡಿದ್ದಾರೆ.

ನಿನ್ನೆಯಷ್ಟೇ (ಜನವರಿ 1) ಪವನ್ ಕಲ್ಯಾಣ್ ಟ್ವಿಟ್ಟರ್ ಅಕೌಂಟ್ ತೆರೆದದ್ದು, ಕೇವಲ 14 ಗಂಟೆಗಳಲ್ಲಿ 57 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಫಾಲೋ ಮಾಡಿದ್ದಾರೆ. ಇನ್ನೂ ಅಚ್ಚರಿ ಅಂದ್ರೆ, ಪವನ್ ಮಾಡಿರುವ ಏಕೈಕ ಟ್ವೀಟ್ ನ 8 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ರೆ, 13 ಸಾವಿರಕ್ಕೂ ಹೆಚ್ಚು ಮಂದಿ ಅದನ್ನ ಫೇವರಿಟ್ ಮಾಡಿಕೊಂಡಿದ್ದಾರೆ. [ಪವನ್ ಕಲ್ಯಾಣ್ ಗೆ ಸಿಕ್ಕ ಅತ್ಯಮೂಲ್ಯ ಗಿಫ್ಟ್ ಯಾವ್ದು?]

ಇಲ್ಲಿವರೆಗೂ ಟ್ವಿಟ್ಟರ್ ನಲ್ಲಿ ಪವನ್ ಕಲ್ಯಾಣ್ ರನ್ನ ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಹೊಸ ವರ್ಷದ ದಿನ ಪವನ್ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಹಾಗಾದ್ರೆ ಇನ್ಯಾಕೆ ತಡ, ಪವನ್ ಗೆ ಸಂದೇಶ ಕಳುಹಿಸಬೇಕಂದ್ರೆ @PawanKalyan ಟ್ವಿಟ್ಟರ್ ಹ್ಯಾಂಡಲ್ ಗೆ ಟ್ವೀಟ್ ಮಾಡಿ. (ಫಿಲ್ಮಿಬೀಟ್ ಕನ್ನಡ)

English summary
Power Star Pawan Kalyan has opened his official Twitter Account.PawanKalyan is his Twitter Handle.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada