Shocking News: ನಟ ಪುನೀತ್ ರಾಜ್‌ಮಾರ್ ಇನ್ನಿಲ್ಲ!
ಕನ್ನಡದ ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ. ಪುನೀತ್ ರಾಜ್‌ಕುಮಾರ್ ಇಹ ಲೋಕವನ್ನು ತ್ಯಜಿಸಿ ಬಾರದ ಲೋಕಕ್ಕೆ ಹೋಗಿದ್ದಾರೆ. ಒಲ್ಲದ ಮನಸ್ಸಿನಲ್ಲೇ ಈ ಕಹಿ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಾದ ಸಂದರ್ಭ ಇದು. ಹೃದಾಯಘಾತದಿಂದಾಗಿ ಪುನೀತ್ ರಾಜ್‌ಕುಮಾರ್ ಕೊನೆಯ ಉಸಿರು ಎಳೆದಿದ್ದಾರೆ. ಈ ವಿಚಾರವನ್ನು ಕರುನಾಡು ಅರಗಿಸಿ ಕೊಳ್ಳಲು ಸಾಧ್ಯವಿಲ್ಲ. ಅಪ್ಪು ಅಗಲಿಕೆ ಕರುನಾಡಿನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಹೃದಯಾಘಾತದಿಂದ ಕೊನೆ ಉಸಿರು!
ನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇಂದು ಬೆಳಗ್ಗೆ ಹೃದಾಯಘಾತ ಆದ ಬಳಿಕಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಚಿಕಿತ್ಸೆ ಫಲಿಸದೇ ಪುನೀತ್ ರಾಜ್‌ಕುಮಾರ್ ಸಾವನ್ನಪ್ಪಿದ್ದಾರೆ. ಸದಾ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಹೃದಯಾಘಾತ ಬಾರದ ಲೋಕಕ್ಕೆ ಹೊತ್ತು ಕೊಂಡು ಹೋಗಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಅನ್ನುವ ಸುದ್ದಿ ಸುಳ್ಳಾಗಲಿ ಅಂತ ಸಾವಿರಾರು ಮನಸ್ಸುಗಳು ಪ್ರಾರ್ಥಿಸುತ್ತಿವೆ. ಆದ್ರೆ ಅದು ನಿಜವಾಗಲಿಲ್ಲ. ಪುನೀತ್‌ರಾಜ್‌ಕುಮಾರ್ ತಮ್ಮ 46ನೇ ವಯಸ್ಸಿಗೆನೆ ಜೀವನ ಪಯಣ ಮುಗಿಸಿದ್ದಾರೆ.

ಇದು ದೊಡ್ಡ ಆಘಾತಕಾರಿ ಸುದ್ದಿ. ಪುನೀತ್‌ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂದಾಗ, ಅವ್ರು ಚಿಕಿತ್ಸೆ ಪಡೆದು ಹೊರ ಬರುತ್ತಾರೆ ಅನ್ನೋ ನಿರೀಕ್ಷೆ ಇತ್ತು. ಹಂಬಲ ಇತ್ತು. ಆದ್ರೆ ಯಾರ ಪ್ರಾರ್ಥನೆಯೂ ಆ ದೇವರಿಗೆ ಕೇಳಲಿಲ್ಲ ಎನಿಸುತ್ತೆ. ಅಪ್ಪು ಎಲ್ಲರ ಹಂಬವನ್ನೂ ಸುಳ್ಳು ಮಾಡಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕೇಲವ 46ನೇ ವಯಸ್ಸಿಗೆ ಪುನೀತ್ ರಾಜ್‌ಕುಮಾರ್ ತಮ್ಮ ಜೀವನ ಯಾವನ್ನ ಮುಗಿಸಿ ಹೋಗಿದ್ದಾರೆ.


Click it and Unblock the Notifications











