Don't Miss!
- News
'ಹರ್ ಘರ್ ತಿರಂಗಾ': ಬಿಜೆಪಿ ನಾಯಕರ ಮನೆ ಮೇಲೆ ಧ್ವಜ
- Lifestyle
ಕಂಕುಳಡಿಯಲ್ಲಿ ಮೊಡವೆಗಳು: ಕಾರಣ ಮತ್ತು ನಿವಾರಿಸುವ ವಿಧಾನ ಇಲ್ಲಿದೆ
- Technology
ಈ ಫೋನ್ಗಳಲ್ಲಿ 50 ಮೆಗಾಪಿಕ್ಸಲ್ ಕ್ಯಾಮೆರಾ ಇದೆ!..ಫೋನ್ ಬೆಲೆಯೂ ಕಡಿಮೆ!
- Sports
ರಿಷಭ್ ಪಂತ್ ಪೋಸ್ಟ್ಗೆ ತಿರುಗೇಟು ನೀಡಿದ ಊರ್ವಶಿ ರೌಟೇಲಾ: 'ಸಹೋದರ ಅಡ್ವಾಂಟೇಜ್ ತೆಗೆದುಕೊಳ್ಳಬೇಡ' ಎಂದ ಬಾಲಿವುಡ್ ನಟಿ
- Finance
ಕಾರು ವಿಮೆ: ಪ್ರೀಮಿಯಂಗಳ ಶೇ.25 ಕ್ಲೇಮ್ಗೆ ಎಚ್ಡಿಎಫ್ಸಿ ಅವಕಾಶ
- Automobiles
ಅಗಸ್ಟ್ 20ರಂದು ಬಿಡುಗಡೆಯಾಗಲಿದೆ ಹೊಸ ಸೌಲಭ್ಯ ಒಳಗೊಂಡ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
'ರಾಜಕುಮಾರ'ನ ನಿವಾಸ ತೊರೆದ ಗನ್‌ಮ್ಯಾನ್ ಚಲಪತಿ: ಈಗ ಏನು ಮಾಡುತ್ತಿದ್ದಾರೆ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಎಲ್ಲಿಗೆ ಹೋದರೂ ಅಲ್ಲಿ ಅವರ ಗನ್‌ಮ್ಯಾನ್ ಚಲಪತಿ ಇದ್ದೇ ಇರುತ್ತಿದ್ದರು. ಕನ್ನಡ ಚಿತ್ರರಂಗಕ್ಕೆ, ಅಪ್ಪು ಅಭಿಮಾನಿಗಳಿಗೆ ಚಲಪತಿ ಹೆಸರು ಹೊಸದೇನು ಅಲ್ಲ. ಸದಾ ಪವರ್‌ಸ್ಟಾರ್ ಹಿಂದೆ ನಿಂತಿರುತ್ತಿರುದ್ದ ಆಜಾನುಬಾಹು ವ್ಯಕ್ತಿ. ಅಪ್ಪು ವ್ಯಕ್ತಿತ್ವದಂತೆಯೇ ಗನ್‌ಮ್ಯಾನ್ ಚಲಪತಿ ವ್ಯಕ್ತಿತ್ವವೂ ಮಾರ್ಪಾಡಾಗಿತ್ತು.
ಪುನೀತ್ ರಾಜ್‌ಕುಮಾರ್ ಅಗಲಿದ ದಿನದಿಂದ ಚಲಪತಿ ಕೂಡ ನೋವಿನಲ್ಲಿಯೇ ಕಾಲಕಳೆಯುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ನೆನಪನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಚಲಪತಿ ದಿಢೀರನೇ ಅಪ್ಪು ಅರಮನೆಯನ್ನು ತೊರೆದಿದ್ದಾರೆ. ಕೆಲಸ ಬಿಟ್ಟು ಊರು ಸೇರಿದ್ದಾರೆ.
Exclusive:
ಉಮಾಪತಿ
ಕೈಯಲ್ಲಿ
ಶಿವಣ್ಣನ
ಟೈಟಲ್:
'ದೊರೆ'
ಆಗಬೇಕಿತ್ತು
ಪುನೀತ್!
ಪುನೀತ್ ರಾಜ್‌ಕುಮಾರ್‌ಗೆ ಹಲವು ವರ್ಷಗಳಿಂದ ಚಲಪತಿ ಗನ್ ಮ್ಯಾನ್ ಆಗಿದ್ದರು. ಅಪ್ಪು ಎಲ್ಲಿಗೆ ಹೋದರೂ, ಅವರಿಗೆ ಬೆಂಗಾವಲಾಗಿ ಚಲಪತಿ ಇರುತ್ತಿದ್ದರು. ಚಲಪತಿ ಇದ್ದಾರೆ ಅಂದರೆ, ಅಪ್ಪು ಕೂಡ ಆರಾಮಾಗಿ ಇವೆಂಟ್‌ಗಳಲ್ಲಿ, ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿರುತ್ತಿದ್ದರು. ಈಗ ಅಪ್ಪುನೇ ಇಲ್ಲ. ಅದಕ್ಕೆ ನೋವಿನಿಂದಲೇ ಅನ್ನ ಕೊಟ್ಟ ಅರಮನೆಯನ್ನು ಒಲ್ಲದ ಮನಸ್ಸಿನಿಂದ ತೊರೆದಿದ್ದಾರೆ.

ಯಾರಿಗೂ ಗನ್‌ಮ್ಯಾನ್ ಆಗಲ್ಲ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಗನ್‌ಮ್ಯಾನ್ ಅನ್ನು ಎಂದಿಗೂ ಕೆಲಸಗಾರರಂತೆ ನೋಡಿದ್ದಿಲ್ಲ. ತಮ್ಮ ಮನೆಯವರಂತೆಯೇ ನೋಡಿಕೊಂಡಿದ್ದರು. ಈಗ ಆ ಮನೆಯಲ್ಲಿ ಅಪ್ಪುನೇ ಇಲ್ಲ. ಹೀಗಿದ್ದರೂ, ಕಳೆದ 6 ತಿಂಗಳಿನಿಂದ ನೋವಿನಿಂದಲೇ ಕೆಲಸ ಮಾಡುತ್ತಿದ್ದರು. ಅದ್ರೀಗ ಆ ಮನೆಯನ್ನು ತೊರೆದಿದ್ದು, ಮುಂದೆ ಕನ್ನಡದ ಯಾವುದೇ ಹೀರೊ ಜೊತೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಅಪ್ಪು
ಅಗಲಿ
8
ತಿಂಗಳ
ಬಳಿಕ
ಶಿವಣ್ಣನ
ಸಿನಿಮಾ
ರಿಲೀಸ್
:
ದೊಡ್ಮನೆ
ಫ್ಯಾನ್ಸ್‌ಗೆ
ಸರ್ಪ್ರೈಸ್!

ಅಶ್ವಿನಿಯವ್ರಿಗೆ ಅಂಗರಕ್ಷಕನಾಗಿದ್ದ ಚಲಪತಿ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳನ್ನು ಅಗಲಿ 7 ತಿಂಗಳಾಗಿವೆ. ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ನೋವಿನಿಂದಲೇ ಊರು ಸೇರಿದ್ದಾರೆ. ಅವರ ನೆನಪಿನಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.

ಅಪ್ಪು ನಿವಾಸ ತೊರೆಯಲು ಕಾರಣವೇನು?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಚಲಪತಿ ಅವರ ಮನೆ ತೊರೆದಿದ್ದೇಕೆ? ಅನ್ನುವ ಪ್ರಶ್ನೆ ಹುಟ್ಟುವುದು ಸಹಜ. ಅದಕ್ಕೆ ಗನ್‌ಮ್ಯಾನ್ ಚಲಪತಿ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. " ಅಪ್ಪು ಸರ್ ನಿಧನದ ಬಳಿಕ ನನಗೆ ಅಲ್ಲಿ ಕೆಲಸ ಇರಲಿಲ್ಲ. ಪ್ರತಿ ದಿನ ಕೂತು ಎದ್ದು ಬರೆಬೇಕಿತ್ತು. ಆ ಕಾರಣಕ್ಕೆ ನಾನು ಕೆಲಸ ಬಿಟ್ಟೆ. ಆದರೆ, ಮುಂದೆ ಯಾವುದೇ ಹೀರೊ ಜೊತೆ ಕೆಲಸ ಮಾಡಲ್ಲ. ಅಪ್ಪು ಸರ್ ನೆನಪು ನನ್ನಲ್ಲಿ ಜೀವಂತವಾಗಿ ಉಳಿಯಬೇಕು." ಎಂದು ಪ್ರತಿಕ್ರಿಯಿಸಿದ್ದಾರೆ.
ಅಪ್ಪು
ಅಗಲಿ
8
ತಿಂಗಳ
ಬಳಿಕ
ಶಿವಣ್ಣನ
ಸಿನಿಮಾ
ರಿಲೀಸ್
:
ದೊಡ್ಮನೆ
ಫ್ಯಾನ್ಸ್‌ಗೆ
ಸರ್ಪ್ರೈಸ್!


ಎರಡು ತಿಂಗಳು ಎಲ್ಲೂ ಕೆಲಸ ಮಾಡಲ್ಲ
ಪುನೀತ್ ರಾಜ್‌ಕುಮಾರ್ ಗನ್‌ಮ್ಯಾನ್ ಕಳೆದ ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದು,ಬೇರೆ ಎಲ್ಲೂ ಕೆಲಸ ಮಾಡಿಲ್ಲ. ಕೋಲಾರದ ಭಾಗೇಪಲ್ಲಿಯಲ್ಲಿ ಇದ್ದಾರೆ. ಮುಂದಿನ ತಿಂಗಳು ಯಾವ ಕೆಲಸ ಮಾಡಬೇಕು? ಅನ್ನುವ ನಿರ್ಧಾರ ಮಾಡಲಿದ್ದಾರೆ.