ತೆಲುಗಿಗೆ ಎಂಟ್ರಿಕೊಟ್ಟ 'ಯುವರತ್ನ': ಖುಷಿಯಿಂದ ಸ್ವಾಗತಿಸಿದ ಪುರಿ ಜಗನ್ನಾಥ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯಲ್ಲಿ ತಯಾರಾಗುತ್ತಿರುವ 'ಯುವರತ್ನ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಚಿತ್ರದ ಮೊದಲ ಹಾಡು ರಿಲೀಸ್ ಮಾಡಲು ಸಜ್ಜಾಗಿದೆ.
Recommended Video
ಕೆಜಿಎಫ್ ನಿರ್ಮಿಸಿದ್ದ ವಿಜಯ್ ಕಿರಗಂದೂರು ಯುವರತ್ನ ಸಿನಿಮಾಗೆ ಬಂಡವಾಳ ಹಾಕಿದ್ದು, ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಮಾಡಲಿದ್ದಾರೆ ಎಂಬ ಸುದ್ದಿ ಕುತೂಹಲ ಮೂಡಿಸಿತ್ತು. ಆದ್ರೆ, ಈವರೆಗೂ ಈ ಕುರಿತು ಎಲ್ಲಿಯೂ ಅಧಿಕೃತವಾಗಿ ಹೇಳಿರಲಿಲ್ಲ. ಇದೀಗ, ಯುವರತ್ನ ಬಿಡುಗಡೆ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ತೆಲುಗಿನಲ್ಲಿ ಯುವರತ್ನ ಸಿನಿಮಾ ಬರ್ತಿರುವುದು ಖಚಿತವಾಗಿದೆ. ಮುಂದೆ ಓದಿ....

ತೆಲುಗಿಗೆ ಎಂಟ್ರಿ ಕೊಟ್ಟ ಯುವರತ್ನ
ಯುವರತ್ನ ಸಿನಿಮಾ ಬಹುಭಾಷೆಯಲ್ಲಿ ರಿಲೀಸ್ ಆಗಬಹುದು ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದರು. ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಬಗ್ಗೆ ಕುತೂಹಲ ಮೂಡಿಸಿ ಕಾದು ನೋಡಿ ಎಂದಿದ್ದರು. ಇದೀಗ, ತೆಲುಗಿನಲ್ಲಿ ಯುವರತ್ನ ತೆರೆಕಾಣುವುದು ಖಚಿತವಾಗಿದೆ. ಈ ಕುರಿತು ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಪೋಸ್ಟ್ ಸಹ ಹಾಕಿದ್ದಾರೆ.

ಅಪ್ಪುವನ್ನು ಸ್ವಾಗತಿಸಿದ ಪುರಿ ಜಗನ್ನಾಥ್
ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಸಂತಸ ವ್ಯಕ್ತಪಡಿಸಿದ್ದಾರೆ. ''ಕನ್ನಡ ಕಂಠೀರವ ಶ್ರೀ ರಾಜ್ ಕುಮಾರ್ ಅವರ ವಾರಸ್ದಾರ, ನನ್ನ ಹೀರೋ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಪ್ರೀತಿಸುತ್ತೇನೆ. ತೆಲುಗು ಚಿತ್ರರಂಗಕ್ಕೆ ಸ್ವಾಗತ'' ಎಂದು ಟ್ವಿಟ್ಟರ್‌ನಲ್ಲಿ ತೆಲುಗು ಪೋಸ್ಟರ್ ಹಂಚಿಕೊಂಡಿದ್ದಾರೆ.

ಅಪ್ಪು ಚಿತ್ರ ನಿರ್ದೇಶಿಸಿದ್ದ ಪುರಿ
ಅಂದ್ಹಾಗೆ, ಪುರಿ ಜಗನ್ನಾಥ್ ಕನ್ನಡದಲ್ಲಿ ನಿರ್ದೇಶಿಸಿದ ಎರಡನೇ ಸಿನಿಮಾಗೆ ಪುನೀತ್ ರಾಜ್ ಕುಮಾರ್ ಹೀರೋ. ಪುನೀತ್ ನಾಯಕರಾಗಿ ನಟಿಸಿದ್ದ ಚೊಚ್ಚಲ ಚಿತ್ರ 'ಅಪ್ಪು' ನಿರ್ದೇಶಿಸಿದ್ದು ಪುರಿ ಜಗನ್ನಾಥ್. ಬಳಿಕ ಈ ಚಿತ್ರವನ್ನು ತೆಲುಗಿನಲ್ಲಿ ಅವರೇ ನಿರ್ದೇಶಿಸಿದ್ದರು.

ಕನ್ನಡ-ತೆಲುಗು ಮಾತ್ರನಾ?
ಪುನೀತ್ ರಾಜ್ ಕುಮಾರ್‌ಗೆ ಸಯೇಶಾ ನಾಯಕಿಯಾಗಿದ್ದಾರೆ. ಧನಂಜಯ್, ವಸಿಷ್ಠ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್ ತಮನ್ ಸಂಗೀತ ನೀಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಯುವರತ್ನ ರಿಲೀಸ್ ಆಗುವುದು ಪಕ್ಕಾ ಆಗಿದೆ. ಈ ಎರಡು ಭಾಷೆ ಮಾತ್ರನಾ ಅಥವಾ ಬೇರೆ ಭಾಷೆಯಲ್ಲೂ ಯುವರತ್ನ ಬರುತ್ತಾ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.


Click it and Unblock the Notifications











