»   » ಪುನೀತ್ ರಾಷ್ಟ್ರಗೀತೆ ಹಾಡಿ ಕಬಡ್ಡಿ ಲೀಗ್ ಗೆ ಚಾಲನೆ

ಪುನೀತ್ ರಾಷ್ಟ್ರಗೀತೆ ಹಾಡಿ ಕಬಡ್ಡಿ ಲೀಗ್ ಗೆ ಚಾಲನೆ

Posted By:
Subscribe to Filmibeat Kannada

ಇದೀಗ ಎಲ್ಲೆಡೆ ಪ್ರೋ ಕಬಡ್ಡಿ ಹವಾ ಜೋರಾಗೇ ಇದೆ ಅಲ್ವಾ. ಅಂದಹಾಗೆ ಪ್ರೋ ಕಬಡ್ಡಿ ವಿಶೇಷ ಏನಪ್ಪಾ ಅಂದ್ರೆ ಇಂದು (ಆಗಸ್ಟ್ 12) ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಆಟ ಪ್ರೋ ಕಬಡ್ಡಿ ಲೀಗ್ ಕಾರ್ಯಕ್ರಮದಲ್ಲಿ ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ಅಪ್ಪು ಅಲಿಯಾಸ್ ಪುನೀತ್ ರಾಜ್ ಕುಮಾರ್ ಹಾಡುತ್ತಿದ್ದಾರೆ.

ನಮ್ಮ ರಾಜಧಾನಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಸಂಜೆ 7 ಗಂಟೆಗೆ ನಡೆಯಲಿರುವ ಪ್ರೋ ಕಬಡ್ಡಿ ಲೀಗ್ ಪಂದ್ಯಾಟಕ್ಕೆ ನಟ ಪುನೀತ್ ರಾಜ್ ಕುಮಾರ್ ಹಾಡಲಿದ್ದು, ಜೊತೆಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.[ಪ್ರೋ ಕಬಡ್ಡಿ ಲೀಗ್ ಸಮಗ್ರ ಸುದ್ದಿಗೆ ಕ್ಲಿಕ್ ಮಾಡಿ]

Power star Puneeth Rajkumar To sing National Anthem for Pro Kabbadi

'ಬೆಂಗಳೂರು ಬುಲ್ಸ್ ಹಾಗು ಯು ಮುಂಬ' ತಂಡಗಳ ನಡುವೆ ನಡೆಯುವ ಕಬಡ್ಡಿ ಲೀಗ್ ಪಂದ್ಯಾಟ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಹಾಡಲಿದ್ದಾರೆ. [ಮಂಡ್ಯದಲ್ಲಿ 'ದೊಡ್ಮನೆ ಹುಡುಗ' ಪುನೀತ್ ರ ದೊಡ್ಡತನ]

ಈಗಾಗಲೇ ಸುಮಾರು ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಅಪ್ಪು ಅಲಿಯಾಸ್ ಪುನೀತ್ ರಾಜ್ ಕುಮಾರ್ ಇದೀಗ ಪ್ರೋ ಕಬಡ್ಡಿ ಲೀಗ್ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಮತ್ತೆ ಕಮಾಲ್ ಮಾಡಲು ಹೊರಟಿದ್ದಾರೆ.

ಸದ್ಯಕ್ಕೆ 25ನೇ ಚಿತ್ರ 'ದೊಡ್ಮನೆ ಹುಡುಗ' ಹಾಗೂ 'ಚಕ್ರವ್ಯೂಹ' ಎನ್ನುವ ಎರಡು ಬಿಗ್ ಬಜೆಟ್ ನ ಚಿತ್ರಗಳಲ್ಲಿ ಪುನೀತ್ ರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ.[ಆಂಗ್ಲ ಪತ್ರಿಕೆ ವಿರುದ್ಧ ಪುನೀತ್ ರಾಜ್ ಕುಮಾರ್ ಸಖತ್ ಗರಂ]

ಒಟ್ನಲ್ಲಿ ಪುನೀತ್ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿದ್ದು, ಇದೀಗ ಹಾಡುವ ಮೂಲಕ ಸ್ಯಾಂಡಲ್ ವುಡ್ ಮಂದಿಯ ಹೃದಯ ಗೆಲ್ಲಲು ಹೊರಟಿದ್ದಾರೆ.

    English summary
    Powerstar Puneeth Rajkumar to sing National Anthem at Pro Kabbadi match Today, August 12 at Kanteerava Stadium, Bengaluru. The Pro Kabbadi match has just shifted to Bengaluru and the Rana Vikrama actor will inaugurate the event by signing National Anthem.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada