ಹಳ್ಳಿ ಹೈದ ರಾಜೇಶ್ ಭೇಟಿ ಮಾಡಿದ ನಟ ಪುನೀತ್

'ಹಳ್ಳಿ ಹೈದ ಪ್ಯಾಟೇಗ್ ಬಂದ' ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಗೆದ್ದು ಕರ್ನಾಟಕದ ತುಂಬೆಲ್ಲ ಮನೆಮಾತಾಗಿದ್ದ ರಾಜೇಶ್ ಈಗ ಮಾನಸಿಕ ಸ್ಥಿಮಿತ ಕಳೆದುಕೊಂಡು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಮೈಸೂರಿನ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಇದು ಕರ್ನಾಟಕದ ತುಂಬೆಲ್ಲಾ ಸುದ್ದಿಯಾಗಿದೆ. ಅವರನ್ನು ಆಸ್ಪತ್ರೆಯಲ್ಲಿ ನಟ ಪುನೀತ್ ರಾಜ್ ಕುಮಾರ್ ಭೇಟಿ ಮಾಡಿ ಆರೋಗ್ಯ ಸ್ಥಿತಿ ವಿಚಾರಿಸಿ ಸಾಂತ್ವನ ಹೇಳಿದ್ದಾರೆ.

ಈಗಾಗಲೇ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ ರಾಜೇಶ್ ಅವರನ್ನು ಭೇಟಿ ಮಾಡಿ ಅವರ ಚಿಕಿತ್ಸೆಯ ವೈದ್ಯಕೀಯ ವೆಚ್ಚವನ್ನು ತಾವು ಭರಿಸುವುದಾಗಿ ಹೇಳಿದ್ದು ಎಲ್ಲರಿಗೂ ಗೊತ್ತು. ಇದೀಗ ಪವರ್ ಸ್ಟಾರ್ ಪುನೀತ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ರಾಜೇಶ್ ಜೊತೆ ಐದು ನಿಮಿಷ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಜೊತೆಗೆ, ರಾಜೇಶ್ ಅವರನ್ನು ಬೇಗ ಗುಣಪಡಿಸುವಂತೆ ವೈದ್ಯರಲ್ಲಿ ಮನವಿ ಮಾಡಿದ್ದಾರೆ.

ರಾಜೇಶ್ ಚಿಕಿತ್ಸೆ ಪಡೆಯುತ್ತಿರುವ ಮೈಸೂರಿನ ಆಸ್ಪತ್ರೆಗೆ ಇಂದು (17 ಜುಲೈ 2012) ಬೆಳಿಗ್ಗೆ 9-30ರ ಸುಮಾರಿಗೆ ಹೋಗಿದ್ದ ನಟ ಪುನೀತ್, ರಾಜೇಶ್ ಅವರ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ. ರಾಜೇಶ್, ಪುನೀತ್ ಅವರ ಭಾರೀ ಫ್ಯಾನ್ ಆಗಿದ್ದು ತಮ್ಮ ಮೆಚ್ಚಿನ ನಟನ ದರ್ಶನದಿಂದ ಸಹಜವಾಗಿ ಖುಷಿಯಾಗಿರಬಹುದು. ಐದು ನಿಮಿಷ ಜೊತೆಗಿದ್ದ ಪುನೀತ್ ರೊಡನೆ ರಾಜೇಶ್ ಮಾಡಿದ ಪ್ರತಿಕ್ರಿಯೆ ಏನೆಂಬುದು ಗೊತ್ತಾಗಿಲ್ಲ.

ರಿಯಾಲಿಟಿ ಶೋದ ವೇಳೆಯಲ್ಲೇ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದ ರಾಜೇಶ್, ನೀವೇ ನನ್ನ ಮೆಚ್ಚಿನ ಸ್ಟಾರ್ ಎಂದಿದ್ದರು. ಅದನ್ನು ನೆನಪಿನಲ್ಲಿಟ್ಟುಕೊಂಡು ಇದೀಗ ಹಾಸಿಗೆ ಹಿಡಿದಿರುವ ರಾಜೇಶ್ ಅವರನ್ನು ನೋಡಲು ಪುನೀತ್ ಹೋಗಿದ್ದು ಅವರ ಮಾನವೀಯತೆಗೆ ಹಿಡಿದ ಕನ್ನಡಿ ಎನಿಸಿದೆ.

ರಿಯಾಲಿಟಿ ಶೋ ನಂತರ 'ಜಂಗಲ್ ಜಾಕಿ' ಎಂಬ ಸಿನಿಮಾದಲ್ಲಿ ರಾಜೇಶ್ ನಟಿಸಿದ್ದಾರೆ. ಇದು ರಾಜೇಶನಿಗೆ ಮೊದಲ ಸಿನಿಮಾ ಆಗಿದ್ದರಿಂದ ಸಹಜವಾಗಿಯೇ ಅವರಿಗೆ ಭಾರೀ ನಿರೀಕ್ಷೆ ಉಂಟಾಗಿತ್ತು. ಆದರೆ ಸಿನಿಮಾ ಬಿಡುಗಡೆ ಇನ್ನೂ ಆಗದಿರುವ ಹಿನ್ನೆಲೆಯಲ್ಲಿ ಅವರು ಮಾನಸಿಕ ರೋಗಿಯಾಗಿದ್ದಾರೆ ಎಂಬುದು ಅವರ ಪೋಷಕರ ಅಳಲು.

ರಾಜೇಶ್ ಅವರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರ ಪ್ರಕಾರ, "ರಾಜೇಶ ದೈಹಿಕವಾಗಿ ಆರೋಗ್ಯವಾಗಿದ್ದೇನೆ. ಆದರೆ ಮಾನಸಿಕವಾಗಿ ಖಿನ್ನತೆ ಅನುಭವಿಸುತ್ತಿದ್ದಾನೆ, ಸ್ಥಿಮಿತ ಕಳೆದುಕೊಂಡಿದ್ದಾನೆ. ವರ್ತನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಚಿಕಿತ್ಸೆ ನಡೆಯುತ್ತಿದೆ. ಸದ್ಯ ರಾಜೇಶ್, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ತಮ್ಮ ಮೆಚ್ಚಿನ ನಟ ಪುನೀತ್ ಭೇಟಿಯಿಂದ ಮುಂದೆ ರಾಜೇಶ್ ಬೇಗ ಗುಣಹೊಂದಿದರೂ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)

More from Filmibeat

English summary
Power Star Puneeth Rajkumar visited Halli Hyda Rajesh in Mysore Hospital, who is taking treatment for his mental dis-order. Rajesh, who won in the 'Halli Hyda Pyateg Banda' Reality Show, acted in a movie called 'Jangle Jackie'. Now he has admitted and is taking treatment in Mysore Hospital. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X