For Quick Alerts
  ALLOW NOTIFICATIONS  
  For Daily Alerts

  ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಪುನೀತ್: ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ 'ಜೇಮ್ಸ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಹೊಸಪೇಟೆಯ ರೆಸಾರ್ಟ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಿನಿಮಾತಂಡ ಇದೀಗ ಕೊಪ್ಪಳದಲ್ಲಿ ಚಿತ್ರೀಕರಣ ಮಾಡುತ್ತಿದೆ.

  ಚಿತ್ರೀಕರಣ ನಡುವೆಯೂ ಬಿಡುವು ಮಾಡಿಕೊಂಡು ಪುನೀತ್, ಕೊಪ್ಪಳದ ಆನೆಗುಂದಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದಿದ್ದಾರೆ. ಪುನೀತ್ ಭೇಟಿ ನೀಡುತ್ತಿದಂತೆ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಾರೆ. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಿ ದೇವರ ದರ್ಶನಕ್ಕೆ ಅನುವುಮಾಡಿ ಕೊಟ್ಟಿದ್ದಾರೆ.

  'ಜೇಮ್ಸ್' ಚಿತ್ರೀಕರಣ ವೇಳೆ ಪುನೀತ್ ರಾಜ್ ಕುಮಾರ್ ಕೈಮುಗಿದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?'ಜೇಮ್ಸ್' ಚಿತ್ರೀಕರಣ ವೇಳೆ ಪುನೀತ್ ರಾಜ್ ಕುಮಾರ್ ಕೈಮುಗಿದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

  ಅಂಜನಾದ್ರಿ ಬೆಟ್ಟದಲ್ಲಿ ಸೇರಿದ್ದ ಅಭಿಮಾನಿಗಳ ಜೊತೆ ಪುನೀತ್ ಫೋಟೋಗೆ ಪೋಸ್ ನೀಡಿ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ. ಇನ್ನು ಇಂದು ಬೆಳಗ್ಗೆ ಕೊಪ್ಪಳ್ಳ ಪೊಲೀಸರು ನಟಿಸುತ್ತಿದ್ದ ಕೊರೊನಾ ಜಾಗೃತಿ ಕಾರ್ಯಕ್ರದಲ್ಲಿಯೂ ಪುನೀತ್ ಭಾಗಿಯಾಗಿ, ಕೊರೊನಾ ಜಾಗೃತಿ ಮೂಡಿಸಿದರು.

  Dhruva Sarja First Reaction For Chiru Baby | ಅಣ್ಣನ ಮಗು ನೋಡಿ ಧ್ರುವನಿಗೆ ಮೊದಲು ಅನ್ನಿಸಿದ್ದೇನು ಗೊತ್ತಾ

  ಪುನೀತ್ ಮೊನ್ನೆ ಮೊನ್ನೆಯಷ್ಟೆ ತುಂಗಭದ್ರಾ ಡ್ಯಾಂಗೆ ಭೇಟಿ ಕೊಟ್ಟಿದ್ದರು. ಚಿತ್ರೀಕರಣದ ಜೊತೆಗೆ ಸುಂದರ ಸ್ಥಳಗಳಿಗನ್ನು ನೋಡಿ ಆನಂದಿಸುತ್ತಿದ್ದಾರೆ. ಅಂದ್ಹಾಗೆ ಜೇಮ್ಸ್ ಸಿನಿಮಾದ ಚಿತ್ರೀಕರಣ ಆನೆಗುಂದಿ ಮತ್ತು ಹಂಪಿ ಸುತ್ತಮುತ್ತ ನಡೆಯುತ್ತಿದೆ. ಜೇಮ್ಸ್ ಸಿನಿಮಾದ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗುತ್ತಿದ್ದ ಹಿನ್ನಲೇ, ಚಿತ್ರ ಸೆರೆಹಿಡಿದು ಲೀಕ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಚಿತ್ರತಂಡ ಎಚ್ಚರಿಕೆ ನೀಡಿದೆ.

  English summary
  Power Star Puneeth Rajkumar visits Anjanadri hills in Koppal District.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X