ಪಿ ಆರ್ ರಾಮದಾಸ ನಾಯ್ಡು ಅವರಿಗೆ ರಾಜ್ಯ ಪ್ರಶಸ್ತಿ
ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಪಿ.ಆರ್.ರಾಮದಾಸ ನಾಯ್ಡು ಅವರದು ಚಿರಪರಿಚಿತ ಹೆಸರು. ಚಿತ್ರ ನಿರ್ದೇಶಕರಾಗಿ ಈಗಾಗಲೇ ಅವರು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ.
ಈಗ 2012ರ ಸಾಲಿನ ಕರ್ನಾಟಕ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಅವರು ರಚಿಸಿರುವ 'ವಿಶ್ವ ಸಿನಿಮಾ - ಮಾತು ಬರುವ ತನಕ' ಕೃತಿಗೆ ದೊರಕಿದೆ. ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ವಾರ್ತಾ ಇಲಾಖೆಯ ವಿಶುಕುಮಾರ್ ಅವರು ಪ್ರಶಸ್ತಿ ವಿಜೇತ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ಪಿ.ರಾಮದಾಸ ನಾಯ್ಡು ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ವಿಶ್ವ ಸಿನಿಮಾ ಅಧ್ಯಯನ ಕೇಂದ್ರದ ಸಂಚಾಲಕರೂ ಆಗಿರುವ ರಾಮದಾಸ ನಾಯ್ಡು ಅವರು ವಿಶ್ವ ಸಿನಿಮಾ ಸಮಗ್ರ ಅಧ್ಯಯನ ಮಾಲಿಕೆಯನ್ನು ಹೊರತಂದಿದ್ದಾರೆ. ಫಿಲ್ಮಿಬೀಟ್ ಕನ್ನಡದ ವತಿಯಿಂದ ಅವರಿಗೆ ಅಭಿನಂದನೆಗಳು. (ಫಿಲ್ಮಿಬೀಟ್ ಕನ್ನಡ)
More from Filmibeat
English summary
A state and national award winning director P Ramadas Naidu bags one more state award for his book 'Vishwa Cinema (Samagra Adhyayana Male) Maatu Baruva Tanaka' (a book on the silent era of cinema). Naidu is in the film and television media in the last four decades. Mr. Naidu worked with Kashinath, actor and director, who set a trend in Kannada cinema.


Click it and Unblock the Notifications











