For Quick Alerts
  ALLOW NOTIFICATIONS  
  For Daily Alerts

  ಆದಿಪುರುಷ್ ಚಿತ್ರದ ಫಸ್ಟ್‌ಲುಕ್ ಔಟ್; ಟೀಸರ್ ಬಿಡುಗಡೆ ಸಮಯ ಘೋಷಣೆ

  |

  ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ಆದಿಪುರುಷ್‌ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್‌ನ ಅಪ್‌ಡೇಟ್‌ ಅನ್ನು ಇಂದು ( ಸೆಪ್ಟೆಂಬರ್ 30 ) ಹಂಚಿಕೊಳ್ಳಲಿದ್ದೇವೆ ಎಂದು ಚಿತ್ರದ ನಿರ್ದೇಶಕ ಓಂ ರಾವತ್ ನಿನ್ನೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ಚಿತ್ರದ ಟೀಸರ್ ಕುರಿತಾಗಿ ಏನಾದರೂ ಅಪ್‌ಡೇಟ್ ಇರಬಹುದು ಎಂದು ಕಾಯುತ್ತಿದ್ದ ಸಿನಿ ಪ್ರೇಕ್ಷಕರಿಗೆ ಚಿತ್ರತಂಡ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡುವುದರ ಮೂಲಕ ಸರ್‌ಪ್ರೈಸ್ ನೀಡಿದೆ.

  ಪ್ರಭಾಸ್ ಸೇರಿದಂತೆ ಚಿತ್ರತಂಡದ ಹಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಿಗದಿಪಡಿಸಿದ್ದ ಸಮಯದಂತೆ ಇಂದು ( ಸೆಪ್ಟೆಂಬರ್ 30 ) ಬೆಳಗ್ಗೆ 7.11ಕ್ಕೆ ಸರಿಯಾಗಿ ಆದಿಪುರುಷ್ ಚಿತ್ರದ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಪೋಸ್ಟರ್‌ಗಳನ್ನು ಹಂಚಿಕೊಂಡರು. ಈ ಪೋಸ್ಟರ್‌ನಲ್ಲಿ ಪ್ರಭಾಸ್ ರಾಮನ ಅವತಾರದಲ್ಲಿ ಬಿಲ್ಲು ಬಾಣ ಹಿಡಿದು ಪೋಸ್ ನೀಡಿದ್ದು, ಅಭಿಮಾನಿಗಳು ಲುಕ್‌ಗೆ ಫುಲ್ ಫಿದಾ ಆಗಿದ್ದಾರೆ.

  ಇನ್ನು ಈ ಪೋಸ್ಟ್‌ನಲ್ಲಿ ಚಿತ್ರದ ಟೀಸರ್ ಅನ್ನು ಅಯೋಧ್ಯೆಯ ಸರಾಯು ನದಿಯ ತಟದಲ್ಲಿ ಅಕ್ಟೋಬರ್ 2ರ ಸಂಜೆ 7.11ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸದ್ಯ ಈ ಪೋಸ್ಟರ್‌ಗಳು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದ ತುಂಬಾ ಹರಿದಾಡ್ತಿದೆ. ಇನ್ನು ಈ ಪೋಸ್ಟರ್ ಕುರಿತು ಕೆಲವರು ಕೊಂಕನ್ನೂ ಸಹ ನುಡಿಯುತ್ತಿದ್ದು ಪ್ರಭಾಸ್ ಲುಕ್ ಆನಿಮೇಟೆಡ್‌ನಂತಿದೆ ಎಂದಿದ್ದಾರೆ ಹಾಗೂ ಪೋಸ್ಟ್ ಇಷ್ಟಪಟ್ಟ ಅಭಿಮಾನಿಗಳು ಪೋಸ್ಟ್ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

  ಆದಿಪುರುಷ್‌ನಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಕೃತಿ ಸನನ್ ಅಭಿನಯಿಸುತ್ತಿದ್ದು, ಚಿತ್ರ ಮುಂದಿನ ವರ್ಷದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಂದರೆ ಜನವರಿ 12ಕ್ಕೆ ತೆರೆಗೆ ಬರಲಿದೆ.

  English summary
  Prabhas and Adipurush team shared movie's firstlook poster on social media
  Friday, September 30, 2022, 10:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X