ಲಂಡನ್ ಗೆ ಪ್ರಭಾಸ್-ಅನುಷ್ಕಾ: ಟ್ರಿಪ್ ಪ್ಲಾನ್ ಮಾಡಿದ ರಾಜಮೌಳಿ.!
ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಜೋಡಿ ಅನುಷ್ಕಾ ಶೆಟ್ಟಿ ಮತ್ತು ಡಾರ್ಲಿಂಗ್ ಪ್ರಭಾಸ್. ಮದುವೆ ವಿಷ್ಯಕ್ಕೆ ಇವರಿಬ್ಬರು ಹೆಚ್ಚು ಸುದ್ದಿಯಲ್ಲಿದ್ದರು. ಪ್ರೀತಿ, ಸ್ನೇಹ, ಮದುವೆ ಇದ್ಯಾವುದರ ಬಗ್ಗೆಯೂ ಯಾವುದೇ ಸ್ಪಷ್ಟನೆ ನೀಡಿದ ಈ ಜೋಡಿ ಭಾರಿ ಕುತೂಹಲ ಮೂಡಿಸಿದೆ.
ಈ ಕಡೆ ಅನುಷ್ಕಾ ಬೇರೆ ಸಿನಿಮಾದಲ್ಲಿ ಬ್ಯುಸಿ ಆದರು. ಆ ಕಡೆ ಪ್ರಭಾಸ್ ಗೆ ಬೇರೆ ಹುಡುಗಿಯನ್ನ ಹುಡುಕುತ್ತಿದ್ದರು. ಈ ಮಧ್ಯೆ 'ಸಾಹೋ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಹೀಗಿರುವಾಗ ಮತ್ತೊಂದು ಸುದ್ದಿ ವೈರಲ್ ಆಗಿದೆ.
ಅನುಷ್ಕಾ ಮತ್ತು ಪ್ರಭಾಸ್ ಲಂಡನ್ ಗೆ ಹೋಗ್ತಿದ್ದಾರೆ. ನಿರ್ದೇಶಕ ರಾಜಮೌಳಿ ಇವರಿಬ್ಬರನ್ನ ಲಂಡನ್ ಗೆ ಕಳುಹಿಸುವ ಪ್ಲಾನ್ ಮಾಡಿದ್ದಾರಂತೆ. ಇಂತಹದೊಂದು ಸುದ್ದಿ ಈಗ ಟಾಲಿವುಡ್ ವಲಯದಲ್ಲಿ ಚರ್ಚೆಯಾಗ್ತಿದೆ. ಇದಕ್ಕೆ ಕಾರಣ ಬಾಹುಬಲಿ ಸಿನಿಮಾ.
ಹೌದು, ಲಂಡನ್ ನಲ್ಲಿರುವ ರಾಯಲ್ ಆಲ್ಬರ್ಟ್ ಹಾಲ್ ನಲ್ಲಿ ಬಾಹುಬಲಿ-2 ಸಿನಿಮಾ ಪ್ರದರ್ಶನವಾಗ್ತಿದೆ. ಈ ವಿಶೇಷವಾಗಿ ನಟ ಪ್ರಭಾಸ್, ಅನುಷ್ಕಾ ಶರ್ಮಾ ಮತ್ತು ರಾಣಾ ದಗ್ಗುಬಾಟಿ ಲಂಡನ್ ಗೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಕೂಡ ಲಂಡನ್ ಗೆ ಪ್ರಯಾಣ ಬೆಳಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಅಕ್ಟೋಬರ್ ತಿಂಗಳಲ್ಲಿ ಬಾಹುಬಲಿ ಸಿನಿಮಾ ಪ್ರದರ್ಶನವಾಗಲಿದೆ. ಬಹುದಿನಗಳ ನಂತರ ಅನುಷ್ಕಾ ಮತ್ತು ಪ್ರಭಾಸ್ ವೇದಿಕೆ ಹಂಚಿಕೊಳ್ಳಲಿದ್ದು, ಇವರಿಬ್ಬರನ್ನ ಒಟ್ಟಿಗೆ ನೋಡುವುದು ಅಭಿಮಾನಿಗಳಿಗೆ ಹಬ್ಬವೇ ಸರಿ.
ಅಂದ್ಹಾಗೆ, ಬಾಹುಬಲಿ-2 ಸಿನಿಮಾ 2017ರ ಏಪ್ರಿಲ್ 28 ರಂದು ತೆರೆಕಂಡಿತ್ತು. ಸುಮಾರು 250 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 1800ಕ್ಕೂ ಅಧಿಕ ಕೋಟಿ ಗಳಿಸಿದೆ ಎಂಬ ವರದಿಯಾಗಿದೆ. ಬಾಹುಬಲಿ ದಿ ಬಿಗಿನಿಂಗ್ ಸಿನಿಮಾ 2015ರಲ್ಲಿ ತೆರೆಕಂಡಿತ್ತು.


Click it and Unblock the Notifications











