ಭಾರಿ ನಿರೀಕ್ಷೆಯ 'ಸಲಾರ್ 2' ಬಿಡುಗಡೆ ಬಗ್ಗೆ ಅಪ್‌ಡೇಟ್ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು
ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ 'ಸಲಾರ್'. ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಭಾಗವಾಗಿರುವ 'ಸಲಾರ್' ಸಿನಿಮಾದ ಮುಂದಿನ ಸೀಕ್ವೆಲ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆ 'ಸಲಾರ್ 2' ಸಿನಿಮಾಗೆ ಬಿಡುಗಡೆ ಬಗ್ಗೆ ಅಪ್‌ಡೇಟ್ ಹೊರಬಂದಿದೆ.
ಸಲಾರ್ ಈಗಾಗಲೇ ವಿಶ್ವದಾದ್ಯಂತ 627.19 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇನ್ನು, ದಳಪತಿ ವಿಜಯ್ ಅವರ ಲಿಯೋ ವಿಶ್ವದಾದ್ಯಂತ 605.9 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು ಮತ್ತು ಜೈಲರ್ ಸುಮಾರು 604.5 ಕೋಟಿ ರೂಪಾಯಿಗಳನ್ನು ಗಳಿಸಿದೆ. ಹೀಗಾಗಿ ಸಲಾರ್ ಎರಡರ ದಾಖಲೆಗಳನ್ನು ಈ ಮೂಲಕ ಅಳಿಸಿಹಾಕಿದೆ.

ಸಲಾರ್ 2 ಬಿಡುಗಡೆ ಬಗ್ಗೆ ಕಾತುರ ಇರುವುದು ಪ್ರಶಾಂತ್ ನೀಲ್‌ಗೆ!
ಈ ಹಿಂದೆ ಸಲಾರ್ ಬಗ್ಗೆ ಪಿಂಕ್ವಿಲ್ಲಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, 'ಸಲಾರ್' ಕಥೆಯ ಕ್ಲೈಮ್ಯಾಕ್ಸ್ ಅನ್ನು ಪ್ರೇಕ್ಷಕರಿಗೆ ಹೇಳಲು ಎಷ್ಟು ಉತ್ಸಾಹರಾಗಿದ್ದಾರೆ ಎಂಬುದನ್ನು ವ್ಯಕ್ತಪಡಿಸಿದ್ದರು. ಜೊತೆಗೆ ಸಲಾರ್ 2 ಬಿಡುಗಡೆ ದಿನಾಂಕಕ್ಕಾಗಿ ತಾವು ಹೇಗೆ ಕಾಯುತ್ತಿರುವುದಾಗಿಯು ತಿಳಿಸಿದ್ದರು.
ಸಲಾರ್ 2 ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದೆ: ವಿಜಯ್ ಕಿರಗಂದೂರು
ಪಿಂಕ್ವಿಲ್ಲಾ ಜೊತೆಗಿನ ವಿಶೇಷ ಚಾಟ್‌ನಲ್ಲಿ ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಅವರು 2025 ರ ಅಂತ್ಯದ ವೇಳೆಗೆ ಸಲಾರ್ ಸೀಕ್ವೆಲ್ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದ್ದಾರೆ. "ಸಲಾರ್ 2 ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿದೆ. ನಾವು ಯಾವಾಗ ಬೇಕಾದರೂ ಚಿತ್ರವನ್ನು ಪ್ರಾರಂಭಿಸುತ್ತೇವೆ" ಎಂದು ಹೇಳಿದ್ದಾರೆ.
"ಪ್ರಭಾಸ್ 'ಸಲಾರ್ 2' ಸಿನಿಮಾವನ್ನು ಬೇಗ ಆರಂಭಿಸಲು ಬಯಸುತ್ತಾರೆ ಮತ್ತು ಪ್ರಶಾಂತ್ ನೀಲ್ ಕೂಡ ಅದನ್ನೇ ಮಾಡಲು ಬಯಸುತ್ತಾರೆ. ಕಳೆದ 2 ರಿಂದ 3 ದಿನಗಳಲ್ಲಿ ನಮ್ಮ ಚರ್ಚೆಯಾಗಿದೆ. ಮುಂದಿನ 15 ತಿಂಗಳಲ್ಲಿ ಸಿನಿಮಾವನ್ನು ನಿರ್ಮಿಸುವುದಾಗಿದೆ. ನಾವು ಖಂಡಿತವಾಗಿಯೂ ಸಲಾರ್ 2 ಅನ್ನು 2025 ರಲ್ಲಿ ಬಿಡುಗಡೆ ಮಾಡುತ್ತೇವೆ" ಎಂದು ಭರವಸೆ ನೀಡಿದ್ದಾರೆ.
20 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಭಾಸ್ ಅನ್ನು ಹೀಗೆ ನೋಡಿದ್ದಾರೆ
"ಸಲಾರ್ ಪ್ರಪಂಚದಾದ್ಯಂತದ ಪ್ರಭಾಸ್ ಅಭಿಮಾನಿಗಳಿಗೆ ಒಂದು ಹಬ್ಬವಾಗಿದೆ. ನಾವು ಸಿನಿಮಾದ ಕಲೆಕ್ಷನ್ ಮತ್ತು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳಿಂದ ಹೆಚ್ಚು ಖುಷಿಯಾಗಿದ್ದೇವೆ. ಕೆಲವು ನೆಗೆಟಿವ್ ಟೀಕೆಗಳಿವೆ. ಆದರೆ ಮೇಕಿಂಗ್ ಮತ್ತು ಸಿನಿಮಾದ ಬಗ್ಗೆ ಯಾರೂ ದೂರು ನೀಡಿಲ್ಲ. ಜನರು 20 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಭಾಸ್‌ರನ್ನು ಆಂಗ್ರಿ ಯಂಗ್ ಮ್ಯಾನ್ ಆಗಿ ನೋಡಿದ್ದಾರೆ. ಭಾಸ್ ಕೂಡ ಸಿನಿಮಾ ಸಕ್ಸಸ್ ಮೋಡ್‌ನಲ್ಲಿದ್ದಾರೆ. ಯಾವಾಗ ಭಾಗ ಎರಡು ಎಂದು ಶೆಡ್ಯೂಲ್ ಬಗ್ಗೆ ಕೇಳುತ್ತಿದ್ದಾರೆ." ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.
'ಸಲಾರ್ 2' ಗೇಮ್ ಆಫ್ ಥ್ರೋನ್ಸ್‌ನಂತೆ ಇರಲಿದೆ: ವಿಜಯ್ ಕಿರಗಂದೂರು
"ಸಲಾರ್ ಭಾಗ ಒಂದು ಕೇವಲ ಭಾಗ ಎರಡರ ಒಂದು ಲುಕ್ ಅಷ್ಟೇ. ನೀವು ಇದನ್ನು ಟ್ರೇಲರ್ ಎಂದು ಪರಿಗಣಿಸಬಹುದು. ಭಾಗ ಎರಡು ಆಕ್ಷನ್ ಮತ್ತು ಸ್ಕೇಲ್‌ಗೆ ಸಂಬಂಧಿಸಿದಂತೆ ಇನ್ನು ದೊಡ್ಡದಾಗಿರುತ್ತದೆ. ಪ್ರಶಾಂತ್ ನೀಲ್ ಮೊದಲ ಭಾಗದಲ್ಲಿ ಎಲ್ಲಾ ಪಾತ್ರಗಳನ್ನು ಪರಿಚಯಿಸಿದ್ದಾರೆ. ಈಗ, ಸಲಾರ್ 2 ಸಾಕಷ್ಟು ಡ್ರಾಮಾ, ರಾಜಕೀಯ ಮತ್ತು ಆಕ್ಷನ್‌ನೊಂದಿಗೆ ಗೇಮ್ ಆಫ್ ಥ್ರೋನ್ಸ್‌ನಂತೆ ಇರಲಿದೆ. ಇಬ್ಬರು ಆತ್ಮೀಯ ಗೆಳೆಯರಾದ ಪ್ರಭಾಸ್ ಮತ್ತು ಪೃಥ್ವಿರಾಜ್ ಅವರು ದೊಡ್ಡ ಶತ್ರುಗಳಾಗಿ ಬದಲಾಗುವುದರಿಂದ ಖಾನ್ಸಾರ್‌ನಲ್ಲಿನ ರಾಜಕೀಯ ಸನ್ನಿವೇಶದ ಮೇಲೆ ಬೀಳುವ ಪ್ರಭಾವವನ್ನು ಸಲಾರ್ 2 ತಿಳಿಸಲಿದೆ" ಎಂದಿದ್ದಾರೆ.


Click it and Unblock the Notifications











