ಪ್ರಶಾಂತ್ ನೀಲ್ ಬರ್ತ್ ಡೇ: ಯಶ್, ಪ್ರಭಾಸ್ ಪಾರ್ಟಿಯ ಹೊಸ ಸಮಾಚಾರ ಇಲ್ಲಿದೆ!

ಕನ್ನಡದ ಸ್ಟಾರ್​ ಡೈರೆಕ್ಟರ್ ಪ್ರಶಾಂತ್ ನೀಲ್‌ಗೆ ಇಂದು (ಜೂನ್ 4) ಜನ್ಮ ದಿನದ ಸಂಭ್ರಮ. ಕೆಜಿಎಫ್ ಚಿತ್ರದ ಮೂಲಕ ಅಪಾರ ಖ್ಯಾತಿ ಪಡೆದ ಪ್ರಶಾಂತ್ ನೀಲ್, ಪ್ರಪಂಚವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಇಂದು ಪ್ರಶಾಂತ್ ನೀಲ್ 42ನೇ ವಸಂತಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳು ಮತ್ತು ಗಣ್ಯಾತಿಗಣ್ಯರು ಅವರ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ. ಜೊತೆಗೆ ಪ್ರಶಾಂತ್ ನಿಲ್ ಹುಟ್ಟು ಹಬ್ಬವನ್ನೂ ಕೂಡ ಅದ್ದೂರಿಯಾಗಿ ಆಚರಿಸಲಾಗಿದೆ. ಈ ಸಂಭ್ರಮದಲ್ಲಿ ಸಿನಿಗಣ್ಯರ ಟೀಂ ಒಂದಾಗಿದೆ.

Recommended Video

ಎರೆಡೆರೆಡು ಸಂಭ್ರಮಕ್ಕೆ ಸಾಕ್ಷಿಯಾದ ಪ್ರಭಾಸ್ ಮತ್ತು ಯಶ್ | #prashanthneel #yash #prabhas

ಪ್ರಶಾಂತ್ ಹುಟ್ಟು ಹಬ್ಬದಲ್ಲಿ ಕೆಜಿಎಫ್ ಟೀಂ ಕಾಣಿಸಿಕೊಂಡಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಕುಟುಂಬ, ಯಶ್ ಭಾಗಿ ಆಗಿದ್ದಾರೆ. ಅಷ್ಟೇ ಅಲ್ಲಾ, ಡಾರ್ಲಿಂಗ್ ಪ್ರಭಾಸ್ ಕೂಡ ಪ್ರಶಾಂತ್ ನೀಲ್ ಹುಟ್ಟು ಹಬ್ಬದಲ್ಲಿ ಭಾಗಿ ಆಗಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಪ್ರಶಾಂತ್ ನೀಲ್ ಬೆಂಗಳೂರಿಗೆ ಬಂದಿದ್ದರು.

Prabhas and Yash came together to celebrate Prashanth Neel birthday

ಇನ್ನು ವಿಶೇಷವಾದ ಕೇಕ್‌ಗಳನ್ನು ಕಟ್ ಮಾಡಿ ಸಂಭ್ರಮಿಸಲಾಗಿದೆ. ಕೆಜಿಎಫ್ ಮತ್ತು ಹೊಂಬಾಳೆ ಫಿಲ್ಮ್ಸ್ ಚಿಹ್ನೆಯಲ್ಲಿ ವಿ‍ಷೇಶವಾದ ಕೇಕ್ ತಯಾರಿಸಲಾಗಿತ್ತು. ಹುಟ್ಟುಹಬ್ಬದ ಜೊತೆಗೆ ಕೆಜಿಎಫ್ 2 ಚಿತ್ರದ 50ನೇ ದಿನದ ಸಂಭ್ರಮವನ್ನೂ ಕೂಡ ಆಚರಿಸಿದೆ ಸಿನಿಮಾ ತಂಡ.

ಪ್ರಶಾಂತ್ ನೀಲಕಂಠಪುರಂ ಅವರು 4 ಜೂನ್ 1980ರಲ್ಲಿ ಸುಭಾಷ್ ಮತ್ತು ಭಾರತಿ ದಂಪತಿಗಳಿಗೆ ಜನಿಸಿದರು. ಇವರು ಮೂಲತಃ ಆಂಧ್ರಪ್ರದೇಶದ ಮಡಕಸಿರಾ ಬಳಿಯ ನೀಲಕಂಠಪುರಂ ಗ್ರಾಮದಿಂದ ಬೆಂಗಳೂರಿಗೆ ಬಂದವರಾಗಿದ್ದಾರೆ. ಆದರೆ ಇದೀಗ ಕನ್ನಡವೇ ಮೆಚ್ಚುವಂತಹ ನಿರ್ದೇಶಕರಾಗಿದ್ದಾರೆ.

Prabhas and Yash came together to celebrate Prashanth Neel birthday

ಇನ್ನು, ಪ್ರಶಾಂತ್ ನೀಲ್ 2010 ರಲ್ಲಿ ಲಿಖಿತಾರನ್ನು ವಿವಾಹವಾದರು. ನೀಲ್​ಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇನ್ನು, ನೀಲ್​ ಸಹೋದರಿಯನ್ನು ಸ್ಯಾಂಡಲ್‌ವುಡ್​ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ಕೊಟ್ಟು ವಿವಾಹ ಮಾಡಿದ್ದಾರೆ.

ನೀಲ್ ಚೊಚ್ಚಲ ನಿರ್ದೇಶನ ಮಾಡಿದ್ದು, ಶ್ರೀಮುರುಳಿಗೆ. ಮೊದಲ ನಿರ್ದೇಶನ 'ಉಗ್ರಂ' ಚಿತ್ರದ ಮೂಲಕ ತಮ್ಮ ನಿರ್ದೇಶನದ ಜರ್ನಿಯನ್ನು ಆರಂಭಿಸಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದ ಮೂಲಕವೇ ಎಲ್ಲರೂ ತಿರುಗಿ ನೋಡುವಂತೆ ಮಾಡಿದರು. ನಂತರ ಇವರು ನಡೆದದ್ದು ಕೇವಲ ಚಿನ್ನದ ಹಾದಿಯಲ್ಲಿ.

Prabhas and Yash came together to celebrate Prashanth Neel birthday

ಸದ್ಯ ನಟ ಪ್ರಭಾಸ್‌ಗೆ ಸಿನಿಮಾ ಮಾಡುತ್ತಿದ್ದಾರೆ. ಬಳಿಕ ಸಾಲು, ಸಾಲು ತೆಲುಗು ನಟರ ಸಿನಿಮಾಗಳನ್ನು ಮಾಡಲಿದ್ದಾರೆ ಪ್ರಶಾಂತ್ ನೀಲ್. ಇವರ ಲಿಸ್ಟ್‌ನಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ತೇಜ ಇದ್ದಾರೆ. ಇನ್ನು ಪ್ರಶಾಂತ್ ನೀಲ್ ಮುಂದಿನ ಕನ್ನಡ ಸಿನಿಮಾ ಯಾವುದಾಗಿರಲಿದೆ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
Prabhas and Yash came together to celebrate Prashanth Neel birthday,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X