For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಮುಹೂರ್ತ; ಒಂದೇ ಫ್ರೇಮಿನಲ್ಲಿ ಸೆರೆಯಾದ ಯಶ್ ಮತ್ತು ಪ್ರಭಾಸ್ ಫೋಟೋ ವೈರಲ್

  |

  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್ ನ ಬಹುನಿರೀಕ್ಷೆಯ ಸಲಾರ್ ಸಿನಿಮಾದ ಮುಹೂರ್ತ ಇಂದು ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಪ್ರಭಾಸ್ ಸಲಾರ್ ಮುಹೂರ್ತದಲ್ಲಿ ರಾಕಿಂಗ್ ಸ್ಟಾರ್ ಯಶ್ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದಾರೆ.

  ಸಲಾರ್ ಸಿನಿಮಾಗೆ ಇಂದು ಅದ್ದೂರಿಯಾಗಿ ಪೂಜೆ ಮಾಡುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಪೂಜಾ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶೇಷ ಎಂದರೆ ಪ್ರಭಾಸ್ ಮತ್ತು ಯಶ್ ಒಂದೇ ಫ್ರೇಮಿನಲ್ಲಿ ಸೆರೆಯಾಗಿರುವ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರದುಬರುತ್ತಿದೆ.

  ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಅನುಷ್ಕಾ, 'ಇದು ಪ್ರಭಾಸ್ ಕುರ್ತಾ' ಎಂದ ನೆಟ್ಟಿಗರು

  ಸಲಾರ್ ಮುಹೂರ್ತದಲ್ಲಿ ಪ್ರಶಾಂತ್ ನೀಲ್ ತಂಡ

  ಸಲಾರ್ ಮುಹೂರ್ತದಲ್ಲಿ ಪ್ರಶಾಂತ್ ನೀಲ್ ತಂಡ

  ಸಲಾರ್ ಸಿನಿಮಾ ಅನೌನ್ಸ್ ಆದಾಗಿನಿಂದ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಇಂದು ಅಧಿಕೃತವಾಗಿ ಚಾಲನೆ ನೀಡುವ ಮೂಲಕ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ಸಲಾರ್ ಸಿನಿಮಾ ತಂಡದವರಾದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಪ್ರಭಾಸ್ ಮತ್ತು ವಿಶೇಷ ಅತಿಥಿ ಯಶ್ ಸೇರಿದಂತೆ ಅನೇಕರು ಹಾಜರಿದ್ದರು.

  ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಪ್ರಭಾಸ್ ಉತ್ಸುಕ

  ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಪ್ರಭಾಸ್ ಉತ್ಸುಕ

  ಸಲಾರ್ ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಭಾಸ್, 'ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಬಹಳ ಉತ್ಸುಕನಾಗಿದ್ದೇನೆ. ಸಿನಿಮಾದಲ್ಲಿ ಭಿನ್ನ ಲುಕ್‌ನಲ್ಲಿ ನಾನು ಕಾಣಿಸಿಕೊಳ್ಳಲಿದ್ದು, ಅದನ್ನು ಅಭಿಮಾನಿಗಳಿಗೆ ತೋರಿಸಲು ಕಾತರದಿಂದಿದ್ದೇನೆ' ಎಂದಿದ್ದಾರೆ.

  ಕೆಜಿಎಫ್ ಮುಗಿಸಿ ಹೈದರಾಬಾದ್‌ಗೆ ಬಂದಿಳಿದ ಪ್ರಶಾಂತ್ ನೀಲ್

  ತಿಂಗಳ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭ ಸಾಧ್ಯತೆ

  ತಿಂಗಳ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭ ಸಾಧ್ಯತೆ

  ಇಂದು ಮುಹೂರ್ತ ಮಾಡಿರುವ ಸಿನಿಮಾತಂಡ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ. ಪ್ರಶಾಂತ್ ನೀಲ್ ಕೆಜಿಎಫ್-2 ಸಿನಿಮಾದ ಕೊನೆಯ ಹಂತದ ಕೆಲಸದಲ್ಲಿ ನಿರತಾಗಿದ್ದಾರೆ. ಇನ್ನೂ ಪ್ರಭಾಸ್ ಸಹ ಈಗಾಗಲೇ ರಾಧೆ ಶ್ಯಾಮ್ ಚಿತ್ರೀಕರಣ ಮುಗಿಸಿದ್ದಾರೆ.

  ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಸಲಾರ್ ಮುಹೂರ್ಥ | Filmibeat Kannada
  ಸಲಾರ್ ಗೆ ಕೇಳಿಬರುತ್ತಿರುವ ಕಲಾವಿದರ ಹೆಸರುಗಳು

  ಸಲಾರ್ ಗೆ ಕೇಳಿಬರುತ್ತಿರುವ ಕಲಾವಿದರ ಹೆಸರುಗಳು

  ಸಲಾರ್ ಸಿನಿಮಾಗೆ ಈಗಾಗಲೇ ಅನೇಕ ಕಲಾವಿದರ ಹೆಸರುಗಳು ಕೇಳಿಬರುತ್ತಿದೆ. ಚಿತ್ರದಲ್ಲಿ ಮಲಯಾಳಂ ನಟ ಮೋಹನ್ ಲಾಲ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬಾಲಿವುಡ್ ನಟ ಜಾನ್ ಅಬ್ರಹಾಂ ವಿಲನ್ ಆಗಿ ಕಾಣಿಸಿಕೊಳ್ಳದ್ದಾರೆ, ನಾಯಕಿಯಾಗಿ ದಿಶಾ ಪಟಾಣಿ ನಟಿಸಲಿದ್ದಾರೆ ಸುದ್ದಿಗಳು ಹರಿದಾಡುತ್ತಿದೆ. ಆದರೆ ಸಿನಿಮಾತಂಡ ಇದ್ಯಾವುದರ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ. ಸದ್ಯಕ್ಕೆ ಸಲಾರ್ ಸಿನಿಮಾಗೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ಛಾಯಾಗ್ರಾಹಕ ಭುವನ್ ಗೌಡ ಸೇರ್ಪಡೆಯಾಗಿದ್ದಾರೆ.

  English summary
  Tollywood Actor Prabhas and Sandalwood Actor Yash pose together at Salaar Muhurta in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X