ಬಾಹುಬಲಿ 'ಪ್ರಭಾಸ್' ಅವರ ಇನ್ನೊಂದು ಮುಖವೇ ಈ ವ್ಯಕ್ತಿ.!
'ಬಾಹುಬಲಿ' ಚಿತ್ರ ಇಂದು ಜಗತ್ತಿನಾದ್ಯಂತ ದಾಖಲೆಗಳು ಮಾಡಿ ಯಶಸ್ಸಾಗಿದೆ. ಇದಕ್ಕಾಗಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ನಾಯಕ ನಟ ಪ್ರಭಾಸ್ ಸುಮಾರು 5 ವರ್ಷಗಳ ಕಾಲ ತಮ್ಮ ವೃತ್ತಿ ಬದುಕನ್ನ ಈ ಚಿತ್ರಕ್ಕಾಗಿ ಮುಡಿಪಾಗಿಟ್ಟಿದ್ದರು.
ಈ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕಿರುವ ಮತ್ತೊಂದು ವಿಷ್ಯವಿದೆ. ಅದೇನಪ್ಪಾ ಅಂದ್ರೆ, 'ಬಾಹುಬಲಿ' ಚಿತ್ರದಲ್ಲಿ ನಟ ಪ್ರಭಾಸ್ ಗೆ ಜೊತೆಯಾಗಿದ್ದ ಜೂನಿಯರ್ ಪ್ರಭಾಸ್. ಹೌದು, ಇವರು ಪ್ರಭಾಸ್ ಅವರ ಇನ್ನೊಂದು ಮುಖ.
ಇವರನ್ನ ಇಂಡಸ್ಟ್ರಿಯಲ್ಲಿ ಎರಡನೇ ಪ್ರಭಾಸ್ ಅಂತಾನೇ ಕರೆಯುತ್ತಾರಂತೆ. ಸ್ವತಃ ಪ್ರಭಾಸ್ ಕೂಡ ಈ ಕಲಾವಿದನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತನ್ನ ಚಿತ್ರಗಳಿಗೆ ಇವರನ್ನೇ ಡ್ಯೂಪ್ ಆರ್ಟಿಸ್ಟ್ ಆಗಿ ಬಳಸಿಕೊಳ್ಳುತ್ತಾರಂತೆ. ಈ ನಟನ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.....

ಜೂನಿಯರ್ ಪ್ರಭಾಸ್
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅವರಿಗೆ ಡ್ಯೂಪ್ ಆರ್ಟಿಸ್ಟ್ ಆಗಿ ಈ ಕಲಾವಿದ ಕಾಣಿಸಿಕೊಳ್ಳುತ್ತಾರೆ. ಇಲ್ಲಿಯವರೆಗೂ 'ಛತ್ರಪತಿ', 'ಮಿರ್ಚಿ', 'ಬಿಲ್ಲಾ', ಹಾಗೂ ಇತ್ತೀಚಿನ 'ಬಾಹುಬಲಿ' ಚಿತ್ರದಲ್ಲೂ ಈತ ಕೆಲಸ ಮಾಡಿದ್ದಾರಂತೆ.

ಪಕ್ಕಾ ಪ್ರಭಾಸ್ ಅಭಿಮಾನಿ
ಹೆಸರು ಕಿರಣ್ ರಾಜ್. ನೋಡಲು ಪ್ರಭಾಸ್ ಅವರನ್ನೇ ಹೋಲುವ ಇವರು ಪ್ರಭಾಸ್ ಗೆ ಪಕ್ಕಾ ಅಭಿಮಾನಿ. ಅವರ ಪ್ರತಿಯೊಂದು ಚಿತ್ರಗಳಲ್ಲಿಯೂ ಹೇಗೆ ಕಾಣಿಸಿಕೊಳ್ಳುತ್ತಾರೋ ಅದೇ ರೀತಿ ಇವರು ಕೂಡ ಫಾಲೋ ಮಾಡ್ತಾರೆ.

ಪ್ರಭಾಸ್ ಪ್ರೋತ್ಸಾಹ
ಇನ್ನು ಕಿರಣ್ ರಾಜ್ ಅವರು ಪ್ರತಿಭೆಯನ್ನ ಗುರುತಿಸಿದ ನಟ ಪ್ರಭಾಸ್ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಚಿತ್ರಗಳಲ್ಲಿ ಇವರನ್ನೇ ಡ್ಯೂಪ್ ಆಗಿ ಬಳಸಿಕೊಳ್ಳಲು ಸಹಾಯ ಮಾಡಿದ್ದಾರಂತೆ.

ಜೂನಿಯರ್ ಪ್ರಭಾಸ್ ಈಗ ಹೀರೋ
ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನ ಮಾಡುತ್ತಿದ್ದ ಕಿರಣ್ ರಾಜ್ ಈಗ ಪೂರ್ತಿ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. 'ಕರಾಳಿ' ಎಂಬ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ಚಿತ್ರವೂ ಕೂಡ ಸೆಟ್ಟೇರಿದೆ. ಕಿರಣ್ ಎಂಬ ನವನಿರ್ದೇಶಕ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಮಲ್ಲಿಕಾರ್ಜುನ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











