ಮೊಬೈಲ್ ಟವರ್ ಮೇಲೆ ಹತ್ತಿ ಪ್ರಭಾಸ್ ಅಭಿಮಾನಿ ಆತ್ಮಹತ್ಯೆಗೆ ಯತ್ನ
Recommended Video
ಕೆಲ ದಿನಗಳ ಹಿಂದೆ ನಟ ಪ್ರಬಾಸ್ ಅಭಿಮಾನಿ ವಿದ್ಯುತ್ ತಂತಿ ಮುಟ್ಟಿ ತಮ್ಮ ಪ್ರಾಣ ಕಳೆದುಕೊಂಡಿದ್ದ. ಈಗ ಇನ್ನೊಬ್ಬ ಮೊಬೈಲ್ ಟವರ್ ಮೇಲೆ ಹತ್ತಿ ತಮ್ಮ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.
ತೆಲಂಗಾಣದ ಜಂಗಮ್ ಎಂಬ ಪ್ರದೇಶದಲ್ಲಿ ಪ್ರಭಾಸ್ ಅಭಿಮಾನಿಯೊಬ್ಬ ಮೊಬೈಲ್ ಟವರ್ ಮೇಲೆ ಹತ್ತಿದ್ದಾನೆ. 'ಬಾಹುಬಲಿ' ಸ್ಟಾರ್ ಪ್ರಭಾಸ್ ನೋಡಲೇ ಬೇಕು ಎಂದು ಬೇಡಿಕೆ ಇಟ್ಟ ಅಭಿಮಾನಿ, ಅಲ್ಲದಿದ್ದರೆ ಅಲ್ಲಿಂದ ಕೆಳೆಗೆ ಬೀಳುತ್ತೇನೆ ಎಂದು ಇತರರಿಗೆ ಭಯ ಪಡಿಸಿದ್ದಾನೆ.
ಟವರ್ ಮೇಲೆ ಹತ್ತಿ ಪ್ರಭಾಸ್ ಬರಲೇ ಬೇಕು, ಹಾಗಿದ್ದರೆ ಮಾತ್ರ ಕಳೆಗೆ ಬರುತ್ತೇನೆ ಎಂದು ಬೇಡಿಕೆ ಇಟ್ಟಿದ್ದಾನೆ. ಅಲ್ಲೇ ಇದ್ದ ಜನರು ಕಳೆಗೆ ಇಳಿಯುವಂತೆ ಎಷ್ಟು ಕೇಳಿದರೂ ಕೇಳಲ್ಲ. ನಂತರ ಸ್ಥಳಕ್ಕೆ ಬಂದ ಪೊಲೀಸರು, ಆ ವ್ಯಕ್ತಿಯನ್ನು ಕೆಳಗೆ ಇಳಿಸಲು ಪ್ರಯತ್ನಪಡುತ್ತಿದ್ದಾರೆ.

ಪ್ರಭಾಸ್ ತಮ್ಮ ಈ ಹುಚ್ಚು ಅಭಿಮಾನಿಯನ್ನು ಭೇಟಿ ಮಾಡುವ ಭರವಸೆ ನೀಡಿದ್ದಾರೋ, ಇಲ್ವೋ ಎನ್ನುವುದು ತಿಳಿದಿಲ್ಲ. ಆದರೆ, ಆತ್ಮಹತ್ಯೆಗೆ ಮುಂದಾದ ಅಭಿಮಾನಿಯ ರಕ್ಷಣೆಗೆ ಪೊಲೀಸ್ ಬಂದಿದ್ದಾರೆ.
ಅಂದಹಾಗೆ, ಇತ್ತೀಚಿಗೆ ಬಿಡುಗಡೆಯಾದ ಪ್ರಭಾಸ್ ನಟನೆಯ 'ಸಾಹೋ' ಸಿನಿಮಾ ಹತ್ತು ದಿನದಲ್ಲಿ 450 ಕೋಟಿ ಕಲೆಕ್ಷನ್ ಮಾಡಿದೆ. ನೆಗೆಟಿವ್ ವಿಮರ್ಶೆ ಮತ್ತು ಪ್ರತಿಕ್ರಿಯೆಗಳ ನಡುವೆಯೂ ಸಿನಿಮಾದ ಗಳಿಕೆ ಚೆನ್ನಾಗಿ ಸಾಗಿದೆ.


Click it and Unblock the Notifications











