'ರಾಧೆ ಶ್ಯಾಮ್' ಸೋಲಿನಿಂದ ಬೇಸತ್ತ ಪ್ರಭಾಸ್ ಫ್ಯಾನ್ಸ್ ಚಿತ್ತ ಈಗ 'ಕೆಜಿಎಫ್ 2'ನತ್ತ!

ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ನಟನೆಯ 'ರಾಧೆ ಶ್ಯಾಮ್‌' ಸಿನಿಮಾ ಅತಿ ಹೆಚ್ಚು ಕಲೆಕ್ಷನ್‌ ಮಾಡುವ ಸಿನಿಮಾವಾಗಲಿದೆ ಎಂಬ ನಿರೀಕ್ಷೆ ಮೂಡಿಸಿತ್ತು. ಅದರಲ್ಲೂ ಇದು ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಲಿದೆ ಎನ್ನಲಾಗಿತ್ತು.

ಆದರೆ ಈ ನಿರೀಕ್ಷೆಗಳನ್ನು ಈ ಸಿನಿಮಾ ಹುಸಿ ಮಾಡಿದ್ದು, ಎಲ್ಲಾ ಕಡೆಯಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್‌ ಪ್ರೇಕ್ಷಕರಂತೂ ಈ ಸಿನಿಮಾವನ್ನು ತಿರಸ್ಕರಿಸಿದ್ದು, ಮುಂಬಯಿಯ ಚಿತ್ರಮಂದಿರಗಳಲ್ಲಿ ಹಲವು ಶೋಗಳನ್ನು ಕ್ಯಾನ್ಸಲ್‌ ಮಾಡಲಾಗಿದೆ.

ಎಲ್ಲರೂ ಅಂದುಕೊಂಡ ಮಟ್ಟಕ್ಕೆ 'ರಾಧೆ ಶ್ಯಾಮ್' ಸಿನಿಮಾ ಮೂಡಿ ಬಂದಿಲ್ಲ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ, ದೊಡ್ಡಮಟ್ಟದಲ್ಲಿ ತೆರೆಕಂಡಿದ್ದ 'ರಾಧೆ ಶ್ಯಾಮ್' ಚಿತ್ರದ ಗಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ. ಹೀಗಾಗಿ ಪ್ರಭಾಸ್ ಫ್ಯಾನ್ಸ್ ಸಧ್ಯ ಕೆಜಿಎಫ್ 2 ಚಿತ್ರದ ಮೊರೆ ಹೋಗಿದ್ದಾರೆ.

ರಾಧೆ ಶ್ಯಾಮ್ ಸೋಲು ಫ್ಯಾನ್ಸ್‌ಗೆ ದೊಡ್ಡ ನಿರಾಸೆ.

ರಾಧೆ ಶ್ಯಾಮ್ ಸೋಲು ಫ್ಯಾನ್ಸ್‌ಗೆ ದೊಡ್ಡ ನಿರಾಸೆ.

'ಬಾಹುಬಲಿ' ನಂತರ ಪ್ರಭಾಸ್ ಅವರು 'ಸಾಹೋ' ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರ ಕೂಡ ವೀಕ್ಷಕರ ಮೆಚ್ಚುಗೆ ಪಡೆಯಲಿಲ್ಲಾ. ಹೀಗಾಗಿ ಕಲೆಕ್ಷನ್‌ನಲ್ಲೂ ಮಕಾಡೆ ಮಲಗಿತ್ತು. ಈಗ ರಾಧೆ ಶ್ಯಾಮ್ ಚಿತ್ರದ ಕಥೆಯೂ ಹಾಗೆ ಆಗಿದೆ. ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದ್ದ ಈ ಸಿನಿಮಾದಲ್ಲಿ ಪ್ರಭಾಸ್‌ರನ್ನು ಬೇರೆಯದೇ ರೀತಿಯಲ್ಲಿ ನೋಡಬಹುದು ಎಂದುಕೊಂಡಿದ್ದರು ಅಭಿಮಾನಿಗಳು. ಆದರೆ ಗಟ್ಟಿ ಕಥೆ, ಚಿತ್ರಕಥೆ ಇಲ್ಲದೆ ಸಿನಿಮಾ ಎಲ್ಲರ ನಿರೀಕ್ಷೆಯನ್ನು ಸುಳ್ಳು ಮಾಡಿದೆ. ಹೀಗಾಗಿ ಪ್ರಭಾಸ್ ಫ್ಯಾನ್ಸ್‌ಗೂ ದೊಡ್ಡ ನಿರಾಸೆ ಮತ್ತು ಬೇಸರ ಎದುರಾಗಿದೆ. ಇದಕ್ಕಾಗಿ ಫ್ಯಾನ್ಸ್ ಈಗ ಒಂದು ಉಪಾಯ ಕಂಡುಕೊಂಡಿದ್ದಾರೆ.

ಕೆಜಿಎಫ್2 ನಿಂದ ಬದಲಾಗುತ್ತಾ ಪ್ರಭಾಸ್ ಲಕ್?

ಕೆಜಿಎಫ್2 ನಿಂದ ಬದಲಾಗುತ್ತಾ ಪ್ರಭಾಸ್ ಲಕ್?

ರಾಧೆ ಶ್ಯಾಮ್ ಸೋಲು ಪ್ರಭಾಸ್ ಫ್ಯಾನ್ಸ್‌ನ ಅತೀಯಾಗಿ ಕಾಡುತ್ತಿದೆ. ಸಾಲು ಸಾಲು ಸೋಲಿನಿಂದ ಬೆಂಡಾಗಿರುವ ಪ್ರಭಾಸ್‌ರನ್ನು ಹೇಗಾದರು ಪಾರು ಮಾಡಬೇಕು ಅಂತ ಫ್ಯಾನ್ಸ್ ಪಣ ತೊಟ್ಟಿದ್ದಾರೆ. ಹೀಗಾಗಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಅಭಿಮಾನಿಗಳು ದೊಡ್ಡ ನಿರಾಶೆಯಲ್ಲಿದ್ದಾರೆ. ಹೀಗಾಗಿ ಅವರೆಲ್ಲರ ನಿರೀಕ್ಷೆ ಈಗ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದ ಮೇಲಿದೆ. ಜೊತೆಗೆ 'ಕೆಜಿಎಫ್2' ಚಿತ್ರದಿಂದ ಪ್ರಭಾಸ್ ಚಾರ್ಮ್ ಹೆಚ್ಚಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಪ್ರಶಾಂತ್ ನೀಲ್ ಬಳಿ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ಪ್ರಭಾಸ್ ಅಭಿಮಾನಿಗಳ ಐಡಿಯಾ ವರ್ಕ್‌ಔಟ್ ಆಗುತ್ತಾ?

ಪ್ರಭಾಸ್ ಅಭಿಮಾನಿಗಳ ಐಡಿಯಾ ವರ್ಕ್‌ಔಟ್ ಆಗುತ್ತಾ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿದೆ. ಸಿನಿಮಾದ ಪ್ರಚಾರಗಳು ಶೀಘ್ರದಲ್ಲೆ ಪ್ರಾರಂಭವಾಗಲಿದೆ. ಈಗ, ಪ್ರಭಾಸ್ ಅಭಿಮಾನಿಗಳು ಪ್ರಶಾಂತ್ ನೀಲ್ ಅವರಿಗೆ ಪ್ರಾಮಾಣಿಕ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. ರಾಧೆ ಶ್ಯಾಮ್ ಚಿತ್ರದ ಸೋಲಿಗೆ ಪರಿಹಾರವಾಗಿ ಥಿಯೇಟರ್‌ಗಳಲ್ಲಿ ಕೆಜಿಎಫ್ 2 ಪ್ರಸಾರಗೊಳ್ಳುವಾಗ ಸಿನಿಮಾದ ಜೊತೆಗೆ 'ಸಲಾರ್'‌ನ ಸಣ್ಣ ತುಣುಕುಗಳನ್ನು ಪ್ರದರ್ಶನ ಮಾಡುವಂತೆ ನೀಲ್‌ಗೆ ವಿನಂತಿಸುತ್ತಿದ್ದಾರೆ. ಈ ರೀತಿ ಮಾಡೋದ್ರಿಂದ ಪ್ರಭಾಸ್ ನಟನೆಯ 'ಸಲಾರ್' ಚಿತ್ರವನ್ನು ಜನ ಹೆಚ್ಚೆಚ್ಚು ನೋಡುತ್ತಾರೆ ಎಂಬುದು ಅಭಿಮಾನಿಗಳ ಯೋಚನೆ. ಈ ಮೂಲಕವಾದರೂ ಸಲಾರ್ ಚಿತ್ರವನ್ನು ಗೆಲ್ಲಿಸಿ, ಪ್ರಭಾಸ್‌ರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಅಂದುಕೊಂಡಿದ್ದಾರೆ ಅಭಿಮಾನಿಗಳು.

ಪ್ರಶಾಂತ್ ನೀಲ್ ನಿರ್ದೇಶನದ ಮೇಲೆ ನಂಬಿಕೆ ಇಟ್ಟಿರುವ ಅಭಿಮಾನಿಗಳು

ಪ್ರಶಾಂತ್ ನೀಲ್ ನಿರ್ದೇಶನದ ಮೇಲೆ ನಂಬಿಕೆ ಇಟ್ಟಿರುವ ಅಭಿಮಾನಿಗಳು

ಇನ್ನು ಸಲಾರ್ ಸಿನಿಮಾದ ಒಂದು ಚಿಕ್ಕ ಮೋಷನ್ ಪೋಸ್ಟರ್ ಬಂದರೆ ಸಾಕು ಎನ್ನುತ್ತಿದ್ದಾರೆ ಕೆಲ ಅಭಿಮಾನಿಗಳು. ಪ್ರಶಾಂತ್ ನೀಲ್ ಖಂಡಿತವಾಗಿಯೂ ಪ್ರಭಾಸ್ ಅವರನ್ನು ಸಲಾರ್ ಚಿತ್ರದಿಂದ ಮತ್ತೆ ಮೇಲಕ್ಕೆ ಎತ್ತುತ್ತಾರೆ ಎಂಬ ನಂಬಿಕೆ ಇದೀಗ ಅಭಿಮಾನಿಗಳಲ್ಲಿ ಇದೆ. 'ಕೆಜಿಎಫ್ 2' ಭಾರತದಾದ್ಯಂತ ರಿಲೀಸ್‌ಗೆ ಸಜ್ಜಾಗಿದೆ. ಪ್ರದರ್ಶನಗೊಳ್ಳುವ ಪ್ರತಿ ಶೋನಲ್ಲು ಸಲಾರ್ ಚಿತ್ರದ ಸಣ್ಣ ತುಣುಕು ಪ್ರದರ್ಶಿಸಿದರೇ ಖಂಡಿತ ಸಲಾರ್ ಚಿತ್ರ ಗೆಲ್ಲೋದರ ಜೊತೆಗೆ ಪ್ರಭಾಸ್ ಚಾರ್ಮ್ ಕೂಡ ಹೆಚ್ಚುತ್ತೆ ಅನ್ನೊದು ಫ್ಯಾನ್ಸ್ ಲೆಕ್ಕಾಚಾರ. ಸದ್ಯಕ್ಕೆ ಪ್ರಭಾಸ್ ಮೌನವಾಗಿದ್ದು, ಇದುವರೆಗೂ ರಾಧೆ ಶ್ಯಾಮ್ ಸೋಲಿನ ಬಗ್ಗೆ ಏನೂ ಮಾತನಾಡಿಲ್ಲ.

More from Filmibeat

English summary
Fans of Prabhas are in big disappointment mode since Radhe Shyam release. So, all their hopes are now on Salaar that is being directed by Prashanth Neel of KGF fame.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X