'ಬಾಹುಬಲಿ' ಬಳಿಕ ಪ್ರಭಾಸ್ ಬೇಡಿಕೆ ಹೆಚ್ಚಿದೆ, ಸಂಭಾವನೆ ಕಮ್ಮಿ ಆಗಿದೆ.!
Recommended Video
'ಬಾಹುಬಲಿ' ಸಿನಿಮಾ ನಂತರ ಸಿನಿಮಾ ಜಗತ್ತಿನಲ್ಲಿ ಪ್ರಭಾಸ್ ಹೆಸರು ಬಹಳ ಎತ್ತರಕ್ಕೆ ಹೋಗಿದೆ. ಬರಿ ತೆಲುಗಿಗೆ ಮಾತ್ರ ಸೀಮಿತವಾಗಿದ್ದ ನಟ, ಈಗ ವರ್ಲ್ಡ್ ವೈಡ್ ಸದ್ದು ಮಾಡ್ತಿದ್ದಾರೆ.
ಬಾಹುಬಲಿ ಬಳಿಕ ಸಾಹೋ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈಗಾಗಲೇ ಸಾಹೋ ಚಿತ್ರೀಕರಣ ಮುಗಿದಿದೆ. ಟ್ರೈಲರ್, ಮೇಕಿಂಗ್ ಮತ್ತು ಹಾಡುಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ಸಾಹೋ ಚಿತ್ರಕ್ಕೆ, ಪ್ರಭಾಸ್ ಭಾರಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಸಾಹೋ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಈ ಸುದ್ದಿಗೆ ಪ್ರಭಾಸ್ ಸ್ಪಷ್ಟನೆ ನೀಡಿದ್ದು, ನನ್ನ ಸಂಭಾವನೆ ಶೇಕಡಾ 20ರಷ್ಟು ಕಡಿಮೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ಹಾಗಿದ್ರೆ, ಪ್ರಭಾಸ್ ಸಂಭಾವನೆ ಎಷ್ಟಿರಬಹುದು?

100 ಕೋಟಿ ಸಂಭಾವನೆ ಸುಳ್ಳು
ಸಾಹೋ ಚಿತ್ರಕ್ಕೆ ನೂರು ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಪ್ರಭಾಸ್ 'ಆ ಸುದ್ದಿ ಸುಳ್ಳು' ಎಂದಿದ್ದಾರೆ. ಬಾಹುಬಲಿ ಹೆಚ್ಚು ರೇಟಿಂಗ್ ತಂದುಕೊಟ್ಟಿದೆ. ಆದ್ರೆ, ಸಾಹೋ ಸಿನಿಮಾದ ಬಜೆಟ್ 350 ಕೋಟಿ. ಸೋ, 100 ಕೋಟಿ ಸಂಭಾವನೆ ಸಾಧ್ಯವಿಲ್ಲ ಎಂಬುದು ನನಗೂ ತಿಳಿದಿದೆ'' ಎಂದು ಡಾರ್ಲಿಂಗ್ ತಿಳಿಸಿದ್ದಾರೆ.

ಶೇಕಡಾ 20ರಷ್ಟು ಕಡಿಮೆ
''ಬಾಹುಬಲಿ ಚಿತ್ರ ಬಳಿಕ ನನ್ನ ಸಂಭಾವನೆ ಅದೇ ಸ್ಥಿತಿಯಲ್ಲಿದೆ. ಅದಕ್ಕಿಂತ 20ರಷ್ಟು ಕಡಿಮೆ ಸಂಭಾವನೆ ಸಾಹೋ ಚಿತ್ರಕ್ಕೆ ತೆಗೆದುಕೊಂಡಿದ್ದೇನೆ. ನನ್ನ ಸ್ನೇಹಿತರು ಹೆಚ್ಚು ಸಂಭಾವನೆ ಕೊಡಲು ಸಿದ್ಧರಿದ್ದರು. ಆದ್ರೆ, ಸಾಹೋ ಎಷ್ಟು ಗಳಿಸಲಿದೆ ಎಂಬುದನ್ನ ನೋಡದೆ ನಾನು ಅಷ್ಟು ಸಂಭಾವನೆ ಪಡೆಯಲು ಸಾಧ್ಯವಿಲ್ಲ'' ಎಂದು ಪ್ರಭಾಸ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಲಾಭದ ಬಳಿಕ ಮತ್ತೆ ನೀಡಬಹುದು
ಸಾಹೋ ಚಿತ್ರಕ್ಕೆ ಪ್ರಭಾಸ್ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬುದು ಸದ್ಯಕ್ಕೆ ಮಾಹಿತಿ ಇಲ್ಲ. ಒಂದು ವೇಳೆ ಸಾಹೋ ಸಕ್ಸಸ್ ಆದರೆ, ಬಂದ ಲಾಭದಲ್ಲಿ ನಿರ್ಮಾಪಕರು ಪ್ರಭಾಸ್ ಗೆ ಮತ್ತಷ್ಟು ಸಂಭಾವನೆಯನ್ನ ಉಡುಗೊರೆ ನೆಪದಲ್ಲಿ ನೀಡಬಹುದು. ಇದು ಚಿತ್ರೋಧ್ಯಮದಲ್ಲಿ ಸಾಧ್ಯ.

ಲೆಕ್ಕಾಚಾರ ಬಹಳ ದೊಡ್ಡದಿದೆ
250 ಕೋಟಿ ಬಜೆಟ್ ನಲ್ಲಿ ಸಾಹೋ ಸಿನಿಮಾ ತಯಾರಾಗಿದೆ ಎಂದು ಹೇಳಲಾಗ್ತಿದೆ. ಬಾಹುಬಲಿ ನಂತರ ಪ್ರಭಾಸ್ ಬ್ಯ್ರಾಂಡ್ ವ್ಯಾಲ್ಯೂ ಕೂಡ ಹೆಚ್ಚಾಗಿದೆ. ಹಾಗಾಗಿ, ಸಾಹೋ ಚಿತ್ರದ ಬಿಡುಗಡೆಯೂ ದೊಡ್ಡ ಮಟ್ಟದಲ್ಲಿ ಆಗಲಿದ್ದು, ಗಳಿಕೆ ಕೂಡ ಅಷ್ಟೇ ದೊಡ್ಡಿರಬಹುದು ಎಂಬ ಅಂದಾಜಿದೆ. ಆಗಸ್ಟ್ 30 ರಂದು ವಿಶ್ವಾದ್ಯಂತ ಸಾಹೋ ಬರ್ತಿದ್ದು, ಬಾಕ್ಸ್ ಆಫೀಸ್ ಲೆಕ್ಕಾಚಾರ ಕಾದುನೋಡಬೇಕಿದೆ.


Click it and Unblock the Notifications











