ಸಂಪೂರ್ಣೇಶ್ 2 ಲಕ್ಷ ಕೊಟ್ರು, ಉತ್ತರ ಕರ್ನಾಟಕಕ್ಕೆ ನೀವೇನು ಕೊಟ್ರಿ? ಪ್ರಭಾಸ್ ಹೇಳಿದ್ದೇನು?

Recommended Video

ಸಂಪೂರ್ಣೇಶ್ 2 ಲಕ್ಷ ಕೊಟ್ರು, ಉತ್ತರ ಕರ್ನಾಟಕಕ್ಕೆ ನೀವೇನು ಕೊಟ್ರಿ? ಪ್ರಭಾಸ್ ಹೇಳಿದ್ದೇನು?

ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಉಂಟಾಗಿ ಸಾವಿರಾರು ರೂಪಾಯಿ ಮೌಲ್ಯದ ಆಸ್ತಿ, ಪಾಸ್ತಿ ನಾಶವಾಗಿದೆ. ಅನೇಕ ಜನರು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ನೆರೆ ಸಂತ್ರಸ್ಥರಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಹಲವು ಕಲಾವಿದರು, ತಂತ್ರಜ್ಞರು ಮತ್ತು ಅಭಿಮಾನಿಗಳು ಸೇರಿ ಸಹಾಯ ಮಾಡಿದ್ದಾರೆ. ಈ ಮೂಲಕ ತಮ್ಮ ಮಾಡಿದ್ದಾರೆ.

ಅದೇ ಕರ್ತವ್ಯ ಪರಭಾಷೆ ನಟರಿಗೂ ಇರಬೇಕಿತ್ತು. ಯಾಕಂದ್ರೆ, ಅವರು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿ ದೊಡ್ಡ ಕಲೆಕ್ಷನ್ ಮಾಡುತ್ತೆ. ಇಲ್ಲಿಯೂ ಅವರ ಸಿನಿಮಾಗಳನ್ನ ನೋಡುವ ಅಭಿಮಾನಿಗಳಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿ ಆ ರಾಜ್ಯಗಳಲ್ಲಿ ನೈಸರ್ಗಿಕ ವಿಕೋಪ ಆದಾಗ ಸ್ಯಾಂಡಲ್ ವುಡ್ ಸ್ಟಾರ್ಸ್ ಸಹಾಯ ಮಾಡಿದ್ದಾರೆ. ಆದ್ರೆ, ಇಲ್ಲಿ ಆದಾಗ ಅವರ್ಯಾರು ಈ ಬಗ್ಗೆ ಗಮನ ಹರಿಸಿಲ್ಲ. ಈಗಲೂ ಉತ್ತರ ಕರ್ನಾಟಕ ವಿಚಾರದಲ್ಲೇ ಅದೇ ನಿರ್ಲಕ್ಷ್ಯ ಮಾಡಲಾಗಿದೆ.

ನಿನ್ನೆ ಬೆಂಗಳೂರಿಗೆ ಸಾಹೋ ಸಿನಿಮಾದ ಪ್ರಚಾರಕ್ಕೆ ಬಂದಿದ್ದ ತೆಲುಗು ನಟ ಪ್ರಭಾಸ್ ಬಳಿ ಇದೇ ಪ್ರಶ್ನೆ ಕೇಳಲಾಯಿತು. ಸಂಪೂರ್ಣೇಶ್ ಬಾಬು ಎಂಬ ಸಣ್ಣ ಕಲಾವಿದ 2 ಲಕ್ಷ ಕೊಟ್ಟಿದ್ದಾರೆ, ನೀವೇನು ಕೊಟ್ರಿ ಎಂದು ವರದಿಗಾರೊಬ್ಬರು ಕೇಳಿದ್ರು. ಅದಕ್ಕೆ ಪ್ರಭಾಸ್ ಏನಂದ್ರು ಗೊತ್ತಾ?

ನೀವೇನು ಕೊಟ್ರಿ ಪ್ರಭಾಸ್?

ನೀವೇನು ಕೊಟ್ರಿ ಪ್ರಭಾಸ್?

ಪ್ರಭಾಸ್ ಚಿತ್ರಗಳಿಗೆ ಕರ್ನಾಟಕದಲ್ಲಿ ಹೆಚ್ಚು ಮಾರುಕಟ್ಟೆ ಇದೆ. ಬಾಹುಬಲಿ ನಂತರ ಬರ್ತಿರುವ ಸಾಹೋ ಕ್ರೇಜ್ ಇಲ್ಲಿಯೂ ಜೋರಾಗಿದೆ. ಪರೆಭಾಷೆ ಸ್ಟಾರ್ ಗಳಿಗೆ ಬೆಂಗಳೂರು ನೆಚ್ಚಿನ ನಗರವಾಗಿದ್ದು, ಇಲ್ಲಿಂದ ಹೆಚ್ಚಿನ ಲಾಭ ನಿರೀಕ್ಷೆ ಮಾಡ್ತಾರೆ. ಕರ್ನಾಟಕದಿಂದ ಇಷ್ಟು ಅಭಿಮಾನಿ ಮತ್ತು ನಿಮ್ಮ ಸಿನಿಮಾಗಳಿಗೆ ಇಷ್ಟೊಂದು ಹಣ ಸಿಗುತ್ತೆ. ಆದ್ರೆ, ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ಪ್ರಭಾಸ್ ಕೊಟ್ಟಿದ್ದೇನು? ಎಂಬ ಪ್ರಶ್ನೆ ಎದುರಾಗಿದೆ.

ಪ್ರಭಾಸ್ ಹೇಳಿದ್ದು ಸಮಾಧಾನ ತಂದಿಲ್ಲ

ಪ್ರಭಾಸ್ ಹೇಳಿದ್ದು ಸಮಾಧಾನ ತಂದಿಲ್ಲ

ಸಂಪೂರ್ಣೇಶ್ ಬಾಬು ಅವರು 2 ಲಕ್ಷ ನೀಡಿದ್ದಾರೆ, ನಿಮ್ಮ ಸಿನಿಮಾಗಳಿಗೆ ಇಲ್ಲಿ ಹೆಚ್ಚು ಡಿಮ್ಯಾಂಡ್ ಇದೆ, ಉತ್ತರ ಕರ್ನಾಟಕದ ಜನತೆಗೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನೆ ನಿನ್ನೆ ಸಾಹೋ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾಸ್ ''ಐ ವಿಲ್ ಡೂ ಮೈ ಲವೆಲ್ ಬೆಸ್ಟ್, ನಾನು ಖಂಡಿತಾ ಮಾಡುತ್ತೇನೆ'' ಎಂದಷ್ಟೇ ಹೇಳಿದ್ರು.

ಪ್ರಚಾರಗಳಿಗೆ ಸೀಮಿತವಾದ್ರು ಪರಭಾಷೆ ಸ್ಟಾರ್ಸ್

ಪ್ರಚಾರಗಳಿಗೆ ಸೀಮಿತವಾದ್ರು ಪರಭಾಷೆ ಸ್ಟಾರ್ಸ್

ಉತ್ತರ ಕರ್ನಾಟದಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಾನಿಯಾಗಿ ಇಷ್ಟು ದಿನ ಕಳೆದರೂ, ಇದುವರೆಗೂ ಒಬ್ಬರೋ ಅಥವಾ ಇಬ್ಬರನ್ನ ಬಿಟ್ಟು ಬೇರೆ ಯಾವ ಪರಭಾಷೆ ಸ್ಟಾರ್ ಗಳನ್ನ ಈ ಬಗ್ಗೆ ಮಾತನಾಡಿಲ್ಲ. ಸಿನಿಮಾ ಶೂಟಿಂಗ್ ಮತ್ತು ಪ್ರಚಾರಕ್ಕೆ ಮಾತ್ರ ಬೆಂಗಳೂರು ಅಥವಾ ಕರ್ನಾಟಕ ಪರಭಾಷೆ ಸ್ಟಾರ್ ಗಳಿಗೆ ಫೆವರೇಟ್ ಆಗಿದೆ. ಅದನ್ನ ಬಿಟ್ಟು ಬೇರೆ ಏನಾದರೂ ಕರ್ನಾಟಕದ ಬಗ್ಗೆ ಅವರು ಯಾರೂ ಯೋಚಿಸಿಲ್ಲ ಎಂಬ ಅಭಿಪ್ರಾಯ ಮೂಡುತ್ತಿದೆ.

ಇದೇ ಅಭಿಪ್ರಾಯ ಹೇಳಿದ್ದರು ರಾಜ್ ಮೊಮ್ಮಗ

ಇದೇ ಅಭಿಪ್ರಾಯ ಹೇಳಿದ್ದರು ರಾಜ್ ಮೊಮ್ಮಗ

ಉತ್ತರ ಕರ್ನಾಟಕದ ಇಂತಹ ಪರಿಸ್ಥಿತಿಯಲ್ಲಿ ಯಾವ ಪರೆಭಾಷೆ ಸ್ಟಾರ್ ಗಳು ನೆರವು ನೀಡದ ಬಗ್ಗೆ ಡಾ ರಾಜ್ ಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್ ಕೂಡ ಫೇಸ್ ಬುಕ್ ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ''ಎಲ್ಲಾ ಹೊರಗಿನ ಸೆಲೆಬ್ರಿಟಿಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು, ತಮ್ಮ ಬ್ರಾಂಡ್ ಅನ್ನು ಉತ್ತೇಜಿಸಲು ಇಲ್ಲಿ ಬರೋದು , ಸಹಾಯ ಮಾಡೋದ್ ಇರಲಿ, ನನಗೆ ಯಾರ ಟ್ವೀಟ್, ಪೋಸ್ಟ್ ನೋಡಿದ ನೆನಪು ಆಗುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದರು.

More from Filmibeat

English summary
Bengaluru news channel reporter asked Question to Prabhas 'what you contributed to uttara karnataka flood'. He replied i will do my level best'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X