'ಸಾಹೋ' ಚಿತ್ರದಲ್ಲಿ ಪ್ರಭಾಸ್ ಬಳಸಿದ ಬೈಕ್ ಬೆಲೆ 10.55 ಲಕ್ಷ.! ಯಾವುದು ಆ ಬೈಕ್?

ಬಾಹುಬಲಿ ನಂತರ ನಟ ಪ್ರಭಾಸ್ ಸಾಹೋ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರುವ ಈ ಸಿನಿಮಾ ಅತಿ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಕೇವಲ ಒಂದು ಆಕ್ಷನ್ ದೃಶ್ಯಕ್ಕಾಗಿಯೇ 100 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

ತೆಲುಗು ಮತ್ತು ಹಿಂದಿಯಲ್ಲಿ ಬರ್ತಿರುವ ಈ ಸಿನಿಮಾ ಹಾಲಿವುಡ್ ಮಟ್ಟದಲ್ಲಿ ತಯಾರಾಗಿದೆ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಟೀಸರ್, ಮೇಕಿಂಗ್ ದೃಶ್ಯಗಳು ಸಿನಿ ಪ್ರೇಕ್ಷಕರ ಕಾತುರತೆ ಹೆಚ್ಚಿಸಿದೆ.

ಹೀಗೆ, ಪ್ರತಿಯೊಂದು ವಿಷ್ಯದಲ್ಲೂ ಸದ್ದು ಮಾಡ್ತಿರುವ ಸಾಹೋ ಈಗ ಬೈಕ್ ವಿಚಾರದಲ್ಲಿ ಭಾರಿ ಚರ್ಚೆಯಾಗ್ತಿದೆ. ಹೌದು, ಪ್ರಭಾಸ್ ಈ ಚಿತ್ರದಲ್ಲಿ ದುಬಾರಿ ಬೈಕ್ ಬಳಿಸಿದ್ದು, ಅದರ ಬೆಲೆ 10.55 ಲಕ್ಷ ಅಂತೆ. ಹಾಗಿದ್ರೆ, ಆ ಬೈಕಿನ ವಿಶೇಷತೆ ಏನು? ಮುಂದೆ ಓದಿ....

ಟ್ರಿಂಪ್ ಸ್ಟ್ರೀಟ್ ಟ್ರಿಪಲ್ ಆರ್ಎಸ್

ಟ್ರಿಂಪ್ ಸ್ಟ್ರೀಟ್ ಟ್ರಿಪಲ್ ಆರ್ಎಸ್

ಸಾಹೋ ಚಿತ್ರದಲ್ಲಿ ಬಹಳ ಗಮನ ಸೆಳೆಯುತ್ತಿರುವುದು ಪ್ರಭಾಸ್ ಬೈಕ್. ಪ್ರಭಾಸ್ ಗಾಗಿ ಈ ಬೈಕ್ ಗೆ ಸ್ಪೆಷಲ್ ಟಚ್ ನೀಡಿದ್ದು, ಕಥೆಗೆ ಮತ್ತು ಚಿತ್ರಕ್ಕೆ ತಕ್ಕಂತೆ ಮೇಕ್ ಓವರ್ ಮಾಡಲಾಗಿದೆ. ಅಂದ್ಹಾಗೆ, ಈ ಬೈಕಿನ ಹೆಸರು 'ಟ್ರಿಂಪ್ ಸ್ಟ್ರೀಟ್ ಟ್ರಿಪಲ್ ಆರ್ಎಸ್'.

ಈ ಬೈಕ್ ಬೆಲೆ 10.55 ಲಕ್ಷ

ಈ ಬೈಕ್ ಬೆಲೆ 10.55 ಲಕ್ಷ

ಟ್ರಿಂಪ್ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಬೈಕ್ ಬೆಲೆ 10.55 ಲಕ್ಷ (ಎಕ್ಸ್ ಶೋರೂಂ). ಆನ್ ರೋಡ್ ಬೆಲೆ ಹೆಚ್ಚು ಕಡಿಮೆ 11 ಲಕ್ಷ ದಾಟಬಹುದು. 776 ಸಿಸಿ ತ್ರಿ ಸಿಲಿಂಡರ್ ಇಂಜಿನ್ ಹೊಂದಿರುವ ಈ ಬೈಕ್ ಅತಿ ಹೆಚ್ಚು ಪವರ್ ಹೊಂದಿದೆ. ಡ್ಯುಯಲ್ ಡಿಸ್ಕ್ ಬ್ರೇಕ್ ಆಯ್ಕೆ ಇರುವ ಈ ಬೈಕ್ 166 ಕೆಜಿ ತೂಕ ಇದೆ.

ಆಕ್ಷನ್ ದೃಶ್ಯಕ್ಕೆ 100 ವೆಚ್ಚ

ಆಕ್ಷನ್ ದೃಶ್ಯಕ್ಕೆ 100 ವೆಚ್ಚ

ಬರಿ ಆಕ್ಷನ್ ದೃಶ್ಯಕ್ಕಾಗಿ 100 ಕೋಟಿ ವೆಚ್ಚ ಮಾಡಿದ್ದಾರೆ ಎಂಬ ಸುದ್ದಿ ಈ ಹಿಂದೆ ವರದಿಯಾಗಿತ್ತು. ಸುಮಾರು 300 ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಆಕ್ಷನ್ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆಯಂತೆ. ಇನ್ನಿ ಇಂಟರ್ ವಲ್ ದೃಶ್ಯಕ್ಕೂ ಬರೊಬ್ಬರಿ 30 ಕೋಟಿ ಖರ್ಚು ಮಾಡಲಾಗಿದೆಯಂತೆ.

ಪ್ರಭಾಸ್ ಮನೆ ಸೇರಿಕೊಂಡ್ವ ಕಾರು, ಬೈಕ್

ಪ್ರಭಾಸ್ ಮನೆ ಸೇರಿಕೊಂಡ್ವ ಕಾರು, ಬೈಕ್

ಸಾಹೋ ಚಿತ್ರಿಕರಣದಲ್ಲಿ ಬಳಸಿರುವ ಈ ಬೈಕ್ ಮತ್ತು ಕಾರನ್ನ ಪ್ರಭಾಸ್ ಖಾಸಗಿಯಾಗಿ ಉಪಯೋಗಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಶೋ ರೂಂನಲ್ಲಿ ಕಾರು, ಬೈಕ್ ಖರೀದಿಸಿದರೂ, ಶೂಟಿಂಗ್ ಗೆ ತಕ್ಕಂತೆ ಅದನ್ನ ರೆಡಿ ಮಾಡಲಾಗಿದೆಯಂತೆ.

ಆಗಸ್ಟ್ 15ಕ್ಕೆ ಗ್ರ್ಯಾಂಡ್ ಎಂಟ್ರಿ

ಆಗಸ್ಟ್ 15ಕ್ಕೆ ಗ್ರ್ಯಾಂಡ್ ಎಂಟ್ರಿ

ಸುಜೀತ್ ನಿರ್ದೇಶನ ಮಾಡ್ತಿರುವ ಸಾಹೋ ಚಿತ್ರ ಆಗಸ್ಟ್ 15 ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಪ್ರಭಾಸ್ ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ನಟಿಸಿದ್ದು, ನೀಲ್ ನಿತೀನ್ ಮುಖೇಶ್, ಅರುಣ್ ವಿಜಯ್, ಜಾಕಿ ಶ್ರಾಫ್, ಮಂದಿರಾ ಬೇಡಿ, ಆದಿತ್ಯ ಶ್ರೀಸ್ತವ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಕರಣ್ ಜೋಹರ್, ವಂಶಿ ಕೃಷ್ಣ ರೆಡ್ಡಿ, ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Telugu actor Prabhas rides triumph street triple bike in saaho movie. this bike price is 10.55 lakh (ex showroom price). movie will releasing on august 15th.
Read more about: prabhas ಪ್ರಭಾಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X