»   » ಒಂದೇ ಒಂದು ಫೈಟ್ ಸೀನ್ ಗೆ 25 ಕೋಟಿ ಖರ್ಚು ಮಾಡುತ್ತಿದೆ ಈ ಚಿತ್ರ

ಒಂದೇ ಒಂದು ಫೈಟ್ ಸೀನ್ ಗೆ 25 ಕೋಟಿ ಖರ್ಚು ಮಾಡುತ್ತಿದೆ ಈ ಚಿತ್ರ

Posted By:
Subscribe to Filmibeat Kannada

'ಬಾಹುಬಲಿ' ನಂತರ ಪ್ರಭಾಸ್ ಅಭಿನಯಿಸುತ್ತಿರುವ ಬಹುಕೋಟಿ ವೆಚ್ಚದ ಚಿತ್ರ 'ಸಾಹೋ'. ಈ ಚಿತ್ರದ ಬಜೆಟ್ ಸುಮಾರು 150 ಕೋಟಿ ಎಂದು ಅಂದಾಜಿಸಲಾಗಿದೆ. ಈಗ ಚಿತ್ರದ ಒಂದೇ ಒಂದು ಫೈಟ್ ಗೆ 25 ಕೋಟಿ ಖರ್ಚು ಮಾಡುತ್ತಿದೆಯಂತೆ ಪ್ರಭಾಸ್ ಸಿನಿಮಾ.

ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗುತ್ತಿರುವ 'ಸಾಹೋ' ಸಿನಿಮಾ ಆಕ್ಷನ್ ಕಮ್ ಲವ್ ಸ್ಟೋರಿ. ಅದಕ್ಕಾಗಿಯೇ, ಹಾಲಿವುಡ್ ಮಟ್ಟದಲ್ಲಿ ಸಾಹಸ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತಿದೆ. ಇದಕ್ಕಾಗಿ ಹಾಲಿವುಡ್ ಫೈಟ್ ಮಾಸ್ಟರ್ ನ ಕರೆತರಲಾಗಿದೆ.

'ಬಾಹುಬಲಿ' ಪ್ರಭಾಸ್ ಗೆ ಕನ್ನಡದ ಈ ನಟರಂದ್ರೆ ಇಷ್ಟವಂತೆ.!

Prabhas' Saaho action sequences cost Rs 25 crore

ಹಾಲಿವುಡ್ ಖ್ಯಾತ ಸಾಹಸ ನಿರ್ದೇಶಕ ಕೆನ್ನಿ ಬೇಟ್ಸ್ ಈ 25 ಕೋಟಿಯ ಸಾಹಸ ದೃಶ್ಯವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ವಿಶೇಷ ಅಂದ್ರೆ ನಾಯಕಿ ಶ್ರದ್ಧಾ ಕಪೂರ್ ಕೂಡ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದು, ಈಕೆ ಕೂಡ ತರಬೇತಿ ಪಡೆಯುತ್ತಿದ್ದಾಳಂತೆ.

ಪ್ರಭಾಸ್ 'ಸಾಹೋ' ಚಿತ್ರಕ್ಕೆ ಎಂಟ್ರಿ ಕೊಟ್ಟ ಸರ್ಪ್ರೈಸ್ 'ವಿಲನ್' ಯಾರು?

ಸುಜೀತ್ ನಿರ್ದೇಶನ ಮಾಡುತ್ತಿರುವ 'ಸಾಹೋ' ಚಿತ್ರ, ಈಗಾಗಲೇ ಟೀಸರ್ ಬಿಡುಗಡೆ ಮಾಡಿದ್ದು, ಮೇಕಿಂಗ್ ಮೂಲಕ ಹೆಚ್ಚು ಗಮನ ಸೆಳೆಯುತ್ತಿದೆ.

English summary
Prabhas Saaho is being helmed with a huge budget of Rs 150 crore, and the action sequences alone with cost Rs 25 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada