Saaho Day 1 Collection: ಅವೆಂಜರ್ ಉಡೀಸ್, ಬಾಹುಬಲಿ ಮುಟ್ಟದ ಸಾಹೋ

Recommended Video

Saaho movie : ಮೊದಲ ದಿನ ಸಾಹೋ ಗಳಿಸಿದ್ದೆಷ್ಟು ? | FILMIBEAT KANNADA

ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ನಟನೆಯ ಸಾಹೋ ಸಿನಿಮಾ ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಸುಮಾರು 10 ಸಾವಿರ ಸ್ಕ್ರೀನ್ ಎಂದು ಹೇಳಲಾಗ್ತಿದೆ. 350 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದ ಸಾಹೋ ಗಳಿಕೆಗೆ ಸಂಬಂಧಿಸಿದಂತೆ ಭಾರಿ ಲೆಕ್ಕಾಚಾರ ಹಾಕಲಾಗಿದೆ.

ಈ ಹಿಂದೆ ಬಾಹುಬಲಿ ಮಾಡಿದ್ದ ಗಳಿಕೆಯನ್ನ ಹಿಂದಿಕ್ಕಬಹುದು ಎಂಬ ನಿರೀಕ್ಷೆ ಇತ್ತು. ಇದೀಗ, ಸಾಹೋ ಚಿತ್ರದ ಮೊದಲ ದಿನದ ಗಳಿಕೆ ಬಹಿರಂಗವಾಗಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದರೂ ಬಾಕ್ಸ್ ಆಫೀಸ್ ನಲ್ಲಿ ಮಾತ್ರ ಸಾಹೋ ಅಬ್ಬರಿಸಿದೆ. ಕಲೆಕ್ಷನ್ ನಲ್ಲಿ ಪ್ರಭಾಸ್ ಮತ್ತೊಮ್ಮೆ ಕಿಂಗ್ ಎಂದು ಸಾಬೀತಾಗಿದೆ. ಹಾಗಿದ್ರೆ, ಮೊದಲ ಸಾಹೋ ಸಿನಿಮಾ ಗಳಿಸಿದ್ದೆಷ್ಟು? ಮುಂದೆ ಓದಿ...

ಹಿಂದಿಯಲ್ಲಿ 20 ಕೋಟಿಯಂತೆ

ಹಿಂದಿಯಲ್ಲಿ 20 ಕೋಟಿಯಂತೆ

ಬಾಲಿವುಡ್ ಇಂಡಸ್ಟ್ರಿಯ ಸಿನಿ ವಿಶ್ಲೇಷಕ ಗಿರೀಶ್ ಜೊಹರ್ ಸಾಹೋ ಚಿತ್ರದ ಗಳಿಕೆ ಬಗ್ಗೆ ಟ್ವೀಟ್ ಮಾಡಿದ್ದು, ಹಿಂದಿಯಲ್ಲಿ ಮಾತ್ರ ಮೊದಲ ದಿನ 20 ಕೋಟಿ ಗಳಿಸಿರುವುದಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಬಾಲಿವುಡ್ ನಲ್ಲೂ ಸಾಹೋಗೆ ಒಳ್ಳೆಯ ಒಪನಿಂಗ್ ಪಡೆದುಕೊಂಡಿದೆ.

70 ಕೋಟಿ ಎನ್ನಲಾಗುತ್ತಿದೆ

70 ಕೋಟಿ ಎನ್ನಲಾಗುತ್ತಿದೆ

ಹಿಂದಿಯಲ್ಲಿ 20 ಕೋಟಿ ಹಾಗೂ ದಕ್ಷಿಣ ಭಾರತದಲ್ಲಿ ಒಟ್ಟು 50 ಕೋಟಿ ಗಳಿಕೆ ಕಂಡಿದೆ ಎಂದು ವಿಶ್ಲೇಷಕ ಗಿರೀಶ್ ಜೊಹರ್ ಟ್ವೀಟ್ ಮಾಡಿದ್ದಾರೆ. ಅಲ್ಲಿಗೆ ಒಟ್ಟು ಸಾಹೋ ಸಿನಿಮಾ ಮೊದಲ ದಿನ 70 ಕೋಟಿ ಬಾಚಿಕೊಂಡಿದೆ. ಈ ಮೂಲಕ ಈ ಹಿಂದಿನ ಹಲವು ದಾಖಲೆ ಬ್ರೇಕ್ ಮಾಡಿದೆ.

'ಅವೆಂಜರ್' ಹಿಂದಿಕ್ಕಿದ 'ಸಾಹೋ'

'ಅವೆಂಜರ್' ಹಿಂದಿಕ್ಕಿದ 'ಸಾಹೋ'

ಹಾಲಿವುಡ್ ಸಿನಿಮಾ ಅವೆಂಜರ್ ಎಂಡ್ ಗೇಮ್ ಚಿತ್ರದ ಮೊದಲ ದಿನದ ಗಳಿಕೆಯನ್ನ ಸಾಹೋ ಸಿನಿಮಾ ಹಿಂದಿಕ್ಕಿದೆ. ಅವೆಂಜರ್ ಸಿನಿಮಾ ಮೊದಲ ದಿನ ಭಾರತದಲ್ಲಿ 53 ಕೋಟಿ ಗಳಿಸಿತ್ತು. ಸಾಹೋ ಸಿನಿಮಾ 70 ಕೋಟಿ ಗಳಿಕೆ ಕಂಡಿದೆ. ಹಾಗ್ನೋಡಿದ್ರೆ, ಮೊದಲ ದಿನ ಥಗ್ಸ್ ಆಫ್ ಹಿಂದೂಸ್ತಾನ್ 52 ಕೋಟಿ, ಹ್ಯಾಪಿ ನ್ಯೂ ಇಯರ್ 44 ಕೋಟಿ ಹಾಗೂ ಭಾರತ್ 42 ಕೋಟಿ ತನ್ನ ಖಾತೆಯಲ್ಲಿ ಹಾಕಿಕೊಂಡಿತ್ತು.

ಬಾಹುಬಲಿ ಮುಟ್ಟಲು ಸಾಧ್ಯವಾಗಿಲ್ಲ

ಬಾಹುಬಲಿ ಮುಟ್ಟಲು ಸಾಧ್ಯವಾಗಿಲ್ಲ

ಅವೆಂಜರ್, ಹ್ಯಾಪಿ ನ್ಯೂ ಇಯರ್, ಭಾರತ್ ಅಂತಹ ದೊಡ್ಡ ಚಿತ್ರಗಳ ಮೊದಲ ದಿನ ಗಳಿಕೆಯನ್ನ ಹಿಂದಿಕ್ಕಿದ ಸಾಹೋ, ಬಾಹುಬಲಿ ಚಿತ್ರದ ರೆಕಾರ್ಡ್ ಮುಟ್ಟಲು ಸಾಧ್ಯವಾಗಿಲ್ಲ. ಬಾಹುಬಲಿ ಕನ್ ಕ್ಲೂಷನ್ ಮೊದಲ ದಿನ 122 ಕೋಟಿ ಬಾಚಿಕೊಂಡಿತ್ತು.

More from Filmibeat

English summary
Prabhas and Shradda kapoor starrer saaho movie new record in indian box office. whats is the Day 1 Collection of saaho.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X