ಪ್ರಭಾಸ್ ಕೆನ್ನೆಗೆ ಪ್ರೀತಿಯಿಂದ ಹೊಡೆದ ಮಹಿಳಾ ಅಭಿಮಾನಿ

Recommended Video

ಸೆಲ್ಫಿ ಕೇಳಿ ಪ್ರಭಾಸ್ ಕಪಾಳಕ್ಕೆ ಹೊಡೆದ ಮಹಿಳಾ ಅಭಿಮಾನಿ! | FILMIBEAT KANNADA

ಪ್ರಭಾಸ್ ಸಿನಿಪ್ರಿಯರ ನೆಚ್ಚಿನ ನಟ. ಅದರಲ್ಲೂ ಹೆಣ್ಣುಮಕ್ಕಳ ಪಾಲಿನ ಡಾರ್ಲಿಂಗ್. 'ಬಾಹುಬಲಿ'ಯಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಸೌತ್ ಸಿನಿ ಇಂಡಸ್ಟ್ರಿಯ ಪ್ರಖ್ಯಾತ ನಟ. 'ಬಾಹುಬಲಿ' ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳೆ ಕಳೆದಿವೆ. ಇನ್ನೂ ದರ್ಶನ ನೀಡದ ಪ್ರಭಾಸ್ ಅನ್ನು ನೋಡಲು ಅಭಿಮಾನಿಗಳ ಮನ ಹಾತೊರೆಯುತ್ತಿದೆ..ಈ ಸಂದರ್ಭದಲ್ಲಿ ಪ್ರಭಾಸ್ ಅನ್ನು ನೇರವಾಗಿ ನೋಡಿದ ಅಭಿಮಾನಿಯೊಬ್ಬಳು ಪ್ರಭಾಸ್ ಅನ್ನು ನೋಡಿ ಕಪಾಳಕ್ಕೆ ಹೊಡೆದಿದ್ದಾಳೆ.

ಅಸಲಿಗೆ ಆ ಅಭಿಮಾನಿ ಪ್ರಭಾಸ್ ಕೆನ್ನೆಗೆ ಬಾರಿಸಲು ಕಾರಣವೇನು ಅಂತೀರಾ..? ಪ್ರಭಾಸ್ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದರು. ಆ ಸಮಯದಲ್ಲಿ ಪ್ರಭಾಸ್ ಅಭಿಮಾನಿಯೊಬ್ಬಳು ಸೆಲ್ಫಿ ತೆಗೆದುಕೊಳ್ಳಲು ಓಡೋಡಿ ಪ್ರಭಾಸ್ ಬಳಿ ಬರುತ್ತಾಳೆ. ಅದನ್ನು ಗಮನಿಸಿದ ಪ್ರಭಾಸ್ ಪ್ರೀತಿಯಿಂದ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಜೊತೆ ನಿಂತು ಫೋಟೊಗೆ ಪೋಸ್ ನೀಡಿ ಅಭಿಮಾನಿಯ ಆಸೆಯನ್ನು ಈಡೇರಿಸುತ್ತಾರೆ. ಆದ್ರೆ ನೆಚ್ಚಿನ ನಟ ಪ್ರಭಾಸ್ ಜೊತೆ ಸೆಲ್ಫಿ ತೆಗೆದುಕೊಂಡ ಖುಷಿಯ ನಶೆಯಲ್ಲಿ ಆ ಅಭಿಮಾನಿ ಮಾಡಿದ್ದೇನು ಗೊತ್ತಾ..? ಭಾರತೀಯ ಚಿತ್ರರಂಗದ ಮೋಸ್ಟ್ ಫೇವರಿಟ್ ನಟ ಪ್ರಭಾಸ್ ರನ್ನು ದಿಢೀರನೆ ತಮ್ಮ ಕಣ್ಣಮುಂದೆಯೇ ನೋಡಿದ್ದಲ್ಲದೆ ಫೋಟೊವನ್ನು ತೆಗೆದುಕೊಂಡಿದ್ದ ಆ ಅಭಿಮಾನಿ ಸಂತಸ ತಾಳಲಾರದೆ ಪ್ರಭಾಸ್ ಕೆನ್ನೆಗೆ ಬಾರಿಸಿ ಅಲ್ಲಿಂದ ಓಡಿಹೋಗಿದ್ದಾಳೆ.

prabhas slapped by an excited female fan

ಅಭಿಮಾನಿಯ ಈ ವಿಶೇಷ ಅಭಿಮಾನ ಕಂಡು ಒಮ್ಮೆಗೆ ಕಂಗಾಲಾದ ಪ್ರಭಾಸ್, ಪ್ರೀತಿಯಿಂದ ಅಭಿಮಾನಿ ನೀಡಿದ ಪೆಟ್ಟನ್ನು ತಿಂದು ಕೆನ್ನೆ ಸಾವರಿಸಿಕೊಳ್ಳುತ್ತ ನಗುತ್ತಲೆ, ಮತ್ತೋರ್ವ ಅಭಿಮಾನಿಯ ಜೊತೆ ನಿಂತು ಸೆಲ್ಫಿಗೆ ಫೋಸ್ ನೀಡುತ್ತಾರೆ. ಈ ವಿಡಿಯೋ ಈಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಯ ಈ ವಿಚಿತ್ರ ಅಭಿಮಾನದ ಪರಿ ಕಂಡು ಚಿತ್ರಾಭಿಮಾನಿಗಳು ಸಹ ಬೆರಗಾಗಿದ್ದಾರೆ.

ಪ್ರಭಾಸ್ ಸದ್ಯ, 'ಸಾಹೋ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮತ್ತು ಟ್ರೈಲರ್ ಮೂಲಕ ಅಭಿಮಾನಿಗಳ ಆಸೆಯನ್ನು ದುಪ್ಪಟ್ಟು ಮಾಡಿದ್ದಾರೆ. ಇಡೀ ಜಗತ್ತನ್ನೆ ಸೆಳೆದ 'ಬಾಹುಬಲಿ'ಯಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ಪ್ರಭಾಸ್ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಸಹಜವಾಗಿಯೆ ಹೆಚ್ಚಾಗಿದೆ..ಸಾಹೋ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಬಾಲಿವುಡ್ ನಟಿ ಶ್ರದ್ದಾ ಕಪೂರ್ ಅಭಿನಯಿಸುತಿದ್ದಾರೆ.

More from Filmibeat

English summary
Tollywood actor, 'Bahubali' fame Prabhas slapped by an excited female fan in airport. This video has gone viral now. Prabhas is currently busy in shooting upcoming film Saaho.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X