»   » ಹೊಸ ಲವರ್ ಗೆ ಭರ್ಜರಿ ಭೋಜನ ಏರ್ಪಡಿಸಿದ ಪ್ರಭಾಸ್

ಹೊಸ ಲವರ್ ಗೆ ಭರ್ಜರಿ ಭೋಜನ ಏರ್ಪಡಿಸಿದ ಪ್ರಭಾಸ್

Posted By:
Subscribe to Filmibeat Kannada

ಬಾಲಿವುಡ್ ನಟಿ ಶ್ರದ್ಧಾ ಕಪೂರ್ 'ಸಾಹೋ' ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾಳೆ. ಪ್ರಭಾಸ್ ನಾಯಕನಾಗಿರುವ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಹೀರೋಯಿನ್ ಆಗಿ ಅಭಿನಯಿಸುತ್ತಿದ್ದಾಳೆ. ಇದೆಲ್ಲಾ ಹಳೆ ಸುದ್ದಿ. ಆದ್ರೆ, ಲೇಟೆಸ್ಟ್ ನ್ಯೂಸ್ ಏನಪ್ಪಾ ಅಂದ್ರೆ, ತನ್ನ ಹೊಸ ಸಿನಿಮಾದಲ್ಲಿ ಲವರ್ ಆಗಿರುವ ನಟಿಗೆ ಪ್ರಭಾಸ್, ಭರ್ಜರಿ ಟ್ರೀಟ್ ಕೊಡಿಸಿದ್ದಾರೆ.

ಹೌದು, ಹೈದರಬಾದ್ ನಲ್ಲಿ 'ಸಾಹೋ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ತಮ್ಮ ಹೊಸ ನಾಯಕಿಗೆ ನಟ ಪ್ರಭಾಸ್ ಹೈದರಬಾದಿನ ಸ್ಪೆಷಲ್ ಊಟದ ರುಚಿ ತೋರಿಸಿದ್ದಾರೆ. ಬಗೆ ಬಗೆಯ ತಿಂಡಿ, ತಿನಿಸುಗಳನ್ನ ಮಾಡಿಸಿ ಅತಿಥಿ ಸತ್ಕಾರ ಮಾಡಿದ್ದಾರೆ.

ಒಂದೇ ಒಂದು ಫೈಟ್ ಸೀನ್ ಗೆ 25 ಕೋಟಿ ಖರ್ಚು ಮಾಡುತ್ತಿದೆ ಈ ಚಿತ್ರ

Prabhas treats Saaho co star Shraddha Kapoor

ಇನ್ನು ಶ್ರದ್ಧಾ ಕಪೂರ್ ಗಾಗಿ ನಟ ಪ್ರಭಾಸ್ ಏರ್ಪಡಿಸಿದ್ದ ಭೋಜನದ ಫೋಟೋವನ್ನ ತಮ್ಮ instagram ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಸಂತಸ ಹಂಚಿಕೊಂಡಿದ್ದಾರೆ.

Prabhas treats Saaho co star Shraddha Kapoor

ಇದಕ್ಕು ಮುಂಚೆ 'ಸಾಹೋ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಅನುಷ್ಕಾ ಈ ಚಿತ್ರದಿಂದ ಹೊರ ಬಂದರು. ಇದೀಗ, ಅನುಷ್ಕಾ ಜಾಗಕ್ಕೆ ಶ್ರದ್ಧಾಗೆ ಎಂಟ್ರಿಯಾಗಿದ್ದು, ಮೊದಲ ಭಾರಿಗೆ ತೆಲುಗು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

'ಬಾಹುಬಲಿ' ಪ್ರಭಾಸ್ ಗೆ ಕನ್ನಡದ ಈ ನಟರಂದ್ರೆ ಇಷ್ಟವಂತೆ.!

English summary
Prabhas treats Saaho co-star Shraddha Kapoor to some Hyderabadi cuisine. See photo. 'ಸಾಹೋ' ಚಿತ್ರದ ನಾಯಕಿ ಶ್ರದ್ಧಾ ಕಪೂರ್ ಗೆ ಹೈದರಬಾದ್ ಶೈಲಿಯ ವಿಶೇಷ ಭೋಜನ ತಿನಿಸಿದ ಪ್ರಭಾಸ್.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada