ಸ್ವೀಟಿ ಅನುಷ್ಕಾ ಬಗ್ಗೆ ಡಾರ್ಲಿಂಗ್ ಪ್ರಭಾಸ್ ಪ್ರೀತಿ ಮಾತು

By Pavithra

ಟಾಲಿವುಡ್ ಅಂಗಳದ ಕ್ಯೂಟ್ ಮತ್ತು ರೊಮ್ಯಾಂಟಿಕ್ ಜೋಡಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್. ಈ ಇಬ್ಬರು ಸ್ಟಾರ್ ಗಳು ತಮ್ಮ ಬಗ್ಗೆ ಏನು ಹೇಳಿಕೊಳ್ಳದೇ ಇದ್ದರೂ ಕೂಡ ಅವರ ಅಭಿಮಾನಿಗಳು ಮಾತ್ರ ರೀಲ್ ನಲ್ಲಿ ಪೇರ್ ಆಗಿರುವ ಇವರಿಬ್ಬರು ರಿಯಲ್ ಲೈಫ್ ನಲ್ಲಿ ಒಂದಾದರೆ ಚೆಂದ ಅಂತ್ತಿದ್ದಾರೆ.

ಅನುಷ್ಕಾ ಹಾಗೂ ಪ್ರಭಾಸ್ ಇಬ್ಬರ ಬಗ್ಗೆ ಅಂತೆ-ಕಂತೆಯ ಮಧ್ಯೆದಲ್ಲಿ ಅನುಷ್ಕಾ ಶೆಟ್ಟಿ ಅಭಿನಯದ 'ಭಾಗಮತಿ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿರುವ ನಟ ಪ್ರಭಾಸ್ ಟಾಲಿವುಡ್ ಸ್ವೀಟಿ ಬಗ್ಗೆ ಪ್ರೀತಿ ಮಾತುಗಳನ್ನಾಡಿದ್ದಾರೆ.

ಇತ್ತ ಪ್ರಭಾಸ್ ಸ್ಟೇಟಸ್ ನೋಡಿ ಅಭಿಮಾನಿಗಳು ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಇಬ್ಬರಿಗೆ ಒಂದು ಸಲಹೆ ನೀಡಿದ್ದಾರೆ. ಹಾಗಾದರೆ ಪ್ರಭಾಸ್ ಈಗ ಅನುಷ್ಕಾ ಬಗ್ಗೆ ಹೇಳಿರುವ ಮಾತುಗಳೇನು.. ಅಭಿಮಾನಿಗಳಿಂದ ಇಬ್ಬರಿಗೂ ಸಿಕ್ಕ ಟಿಪ್ಸ್ ಏನು ಎಂಬುದು ಮುಂದೆ ಓದಿ...

'ಭಾಗಮತಿ'ಯನ್ನು ಮೆಚ್ಚಿದ ಬಾಹುಬಲಿ

'ಭಾಗಮತಿ'ಯನ್ನು ಮೆಚ್ಚಿದ ಬಾಹುಬಲಿ

ಮಂಗಳೂರಿನ ಚೆಲುವೆ ಅನುಷ್ಕಾ ಶೆಟ್ಟಿ ಅಭಿನಯದ 'ಭಾಗಮತಿ' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಪ್ರಭಾಸ್ ಈ ಟೀಸರ್ ಅನ್ನು ಫೇಸ್ ಬುಕ್ ನಲ್ಲಿ ಹಾಕಿ ''ಪ್ರತಿ ಸಿನಿಮಾಗಳಲ್ಲಿಯೂ ಹೊಸ ರೀತಿಯ ಪ್ರಯೋಗ ಮಾಡುವುದರಲ್ಲಿ ಅನುಷ್ಕಾ ಶೆಟ್ಟಿ ಯಾವಾಗಲೂ ಮೊದಲಿರುತ್ತಾಳೆ. ಗುಡ್ ಲಕ್ ಸ್ವೀಟಿ.. ಹಾಗೂ ಚಿತ್ರತಂಡಕ್ಕೆ ಶುಭವಾಗಲಿ'' ಎಂದು ಬರೆದುಕೊಂಡಿದ್ದಾರೆ.

ಮದುವೆ ಆಗುವಂತೆ ಮನವಿ ಮಾಡಿದ ಫ್ಯಾನ್ಸ್

ಮದುವೆ ಆಗುವಂತೆ ಮನವಿ ಮಾಡಿದ ಫ್ಯಾನ್ಸ್

ಪ್ರಭಾಸ್ ಸ್ಟೇಟಸ್ ನೋಡಿದ ತಕ್ಷಣ ಕುಡ್ಲ ಕುವರಿ ಅನುಷ್ಕಾ ಅವರನ್ನ ರಿಯಲ್ ಲೈಫ್ ನಲ್ಲಿ ಮದುವೆ ಆಗುವಂತೆ ಪ್ರಭಾಸ್ ಅವರಿಗೆ ಅಭಿಮಾನಿಗಳು ಮನವಿ ಮಾಡಿದ್ದಾರೆ. ''ನೀವಿಬ್ಬರು ಒಳ್ಳೆ ಜೋಡಿ ಆಗುತ್ತೀರಾ'' ಎನ್ನುವ ಟಿಪ್ಸ್ ನೀಡಿದ್ದಾರೆ.

ದೇವಸೇನಾ ಈಗ ರಾಣಿ ಭಾಗಮತಿ

ದೇವಸೇನಾ ಈಗ ರಾಣಿ ಭಾಗಮತಿ

ಅನುಷ್ಕಾಶೆಟ್ಟಿ ಅಭಿನಯದ 'ಭಾಗಮತಿ' ಚಿತ್ರದ ಟೀಸರ್ ಇಂದು(ಡಿಸೆಂಬರ್ 20) ಬಿಡುಗಡೆಯಾಗಿದೆ. 'ಬಾಹುಬಲಿ' ಚಿತ್ರದಲ್ಲಿ ರಾಜಕುಮಾರಿ ದೇವಸೇನಾ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾ, ರಾಣಿ 'ಭಾಗಮತಿ' ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಪೋಸ್ಟರ್ ಬಳಿಕ ಬಿಡುಗಡೆಯಾಗಿರುವ ಟೀಸರ್ ತುಂಬಾ ಕುತೂಹಲ ಮೂಡಿಸುತ್ತಿದೆ.

ಜನವರಿಯಲ್ಲಿ ರಾಣಿ 'ಭಾಗಮತಿ' ದರ್ಶನ

ಜನವರಿಯಲ್ಲಿ ರಾಣಿ 'ಭಾಗಮತಿ' ದರ್ಶನ

ಚಿತ್ರೀಕರಣ ಮುಗಿಸಿರುವ 'ಭಾಗಮತಿ' ಸಿನಿಮಾ ಜನವರಿ( 2018) 26 ರಂದು ತೆರೆಗೆ ಬರುತ್ತಿದೆ. ತೆಲುಗು, ತಮಿಳು ಸೇರಿದಂತೆ ಮಲೆಯಾಳಂ ನಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಈ ಹಿಂದೆ ಪ್ರಭಾಸ್ ಮತ್ತು ಅನುಷ್ಕಾ ಅಭಿನಯದ 'ಮಿರ್ಚಿ' ಸಿನಿಮಾ ನಿರ್ಮಾಣ ಮಾಡಿದ್ದ 'ಯುವಿ ಕ್ರಿಯೇಷನ್ಸ್' ಸಂಸ್ಥೆ 'ಭಾಗಮತಿ' ಚಿತ್ರವನ್ನ ಪ್ರೊಡ್ಯೂಸ್ ಮಾಡಿದೆ.

More from Filmibeat

English summary
Actress Anushka Shetty starring Bhaagamathie, cinema Teaser released today (december 20th), Anushka shetty playing queen Bhaagamathie character in this movie, Actor Prabhas update his status about 'Bhaagamathie' Teaser and Anushka Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X