ಪುನೀತ್ ರಾಜ್​ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ನಟ ಪ್ರಭಾಸ್!

ನಟ ಪುನೀತ್ ರಾಜ್​ಕುಮಾರ್ ನಿಧನರಾಗಿ ಎರಡು ತಿಂಗಳು ತುಂಬಿದೆ. ಕರುನಾಡು ಈ ಆಘಾತದಿಂದ ಇನ್ನೂ ಹೊರಬಂದಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಇಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಪ್ಪು ಇಲ್ಲ ಎನ್ನುವ ನೋವು ಕೇವಲ ಅವರ ಕರುನಾಡಿಗೆ ಮಾತ್ರ ಸೀಮಿತ ಆಗಿಲ್ಲ. ಪ್ರಪಂಚದಾದ್ಯಂತ ಅಪ್ಪು ಬಗ್ಗೆ ಎಲ್ಲರೂ ಮಾತನಾಡಿದ್ದಾರೆ.

ಇನ್ನು ಅಪ್ಪುಗೆ ಪರಭಾಷೆ ಚಿತ್ರರಂಗದಲ್ಲಿ ಅಪಾರ ಸ್ನೇಹಿತರನ್ನು ಸಂಪಾದಿಸಿದ್ದಾರೆ. ಅಪ್ಪು ಇಲ್ಲವಾದ ವಿಚಾರ ಕೇಳಿ ಸ್ಟಾರ್‌ನಟರುಗಳು ಕಣ್ಣೀರು ಹಾಕಿದ್ದಾರೆ. ಬೆಂಗಳೂರಿಗೆ ಬಂದು ಅಪ್ಪು ಸಮಾಧಿಗೆ ಭೇಟಿ ನೀಡಿ ನಮಿಸಿದ್ದಾರೆ. ಅಷ್ಟೇ ಅಲ್ಲ ಅಪ್ಪು ಜೊತೆಗೆ ತಮಗೆ ಇರುವ ನಂಟು ಮತ್ತು ಒಡನಾಟದ ಬಗ್ಗೆ ಹಂಚಿಕೊಂಡಿದ್ದಾರೆ.

ಇನ್ನೂ ಕೂಡ ಪುನೀತ್‌ ರಾಜ್‌ಕುಮಾರ್ ಅವರನ್ನು ಎಲ್ಲರೂ ನಿತ್ಯ ಸ್ಮರಿಸುತ್ತಲೇ ಇದ್ದಾರೆ. ಟಾಲಿವುಡ್‌ ನಟ ಪ್ರಭಾಸ್ ಬೆಂಗಳೂರಿಗೆ ಬಂದು ಅಪ್ಪು ಅವರ ಮನೆಗೆ ಭೇಟಿ ಕೊಟ್ಟು, ಕುಟುಂಬದ ಜೊತೆಗೆ ಮಾತನಾಡಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಭಾಸ್!

ಪುನೀತ್‌ ರಾಜ್‌ಕುಮಾರ್‌ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಭಾಸ್!

ಅಪ್ಪು ಅಗಲಿ ಎರಡು ತಿಂಗಳು ಕಳೆದಿದೆ. ಆದರೆ ಅಪ್ಪು ಒಂದಲ್ಲಾ ಒಂದು ರೂಪದಲ್ಲಿ ಪ್ರತಿ ನಿತ್ಯ ಜನರ ನಡುವೆ ಅಪ್ಪು ಹೆಸರು ಓಡಾಡುತ್ತಲೇ ಇದೆ. ಇನ್ನು ಅವರನ್ನು ನಿತ್ಯ ಸ್ಮರಿಸುವ ಕಾರ್ಯವೂ ಸಾಗಿದೆ. ನಟ ಪ್ರಭಾಸ್‌ ಪುನೀತ್‌ ರಾಜ್‌ಕುಮಾರ್‌ ಮನೆಗೆ ಭೇಟಿ ನೀಡಿದ್ದಾರೆ. ನಿನ್ನೆ (ಡಿಸೆಂಬರ್ 28) ಅಪ್ಪು ಅವರ ಮನೆಗೆ ಪ್ರಭಾಸ್‌ ಭೇಟಿ ನೀಡಿ ಕುಟುಂಬಸ್ಥರ ಜೊತೆಗೆ ಮಾತು ಕಥೆ ನಡೆಸಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳಿ ಹೋಗಿದ್ದಾರೆ ಪ್ರಭಾಸ್.

ಪ್ರಭಾಸ್‌ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದ ಪುನೀತ್‌ ರಾಜ್‌ಕುಮಾರ್!

ಪ್ರಭಾಸ್‌ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದ ಪುನೀತ್‌ ರಾಜ್‌ಕುಮಾರ್!

ಇನ್ನು ನಟ ಪ್ರಭಾಸ್ ಅವರ ಹುಟ್ಟು ಹಬ್ಬಕ್ಕೆ ನಟ ಪುನೀತ್‌ ರಾಜ್‌ಕುಮಾರ್ ಶುಭ ಕೋರಿದ್ದರಂತೆ. ಅವರಿಗೆ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರಂತೆ ಅಪ್ಪು. ಈ ವಿಚಾರವನ್ನು ಕೂಡ ಪ್ರಭಾಸ್, ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ ಎನ್ನುವುದು ತಿಳಿದು ಬಂದಿದೆ. ಬೇರೆ ನಟರ ಹಾಗೆ ಪ್ರಭಾಸ್‌ಗೂ ಅಪ್ಪು ಹತ್ತಿರ ಆಗಿದ್ದರು. ಹಾಗಾಗಿ ಪ್ರಭಾಸ್ ಸಮಯ ಮಾಡಿಕೊಂಡು ಬೆಂಗಳೂರಿನಲ್ಲಿ ಇರುವ ಅಪ್ಪು ಮನೆಗೆ ಭೇಟಿ ನೀಡಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ.

ಅಪ್ಪು ಮನೆಗೆ ಭೇಟಿ ನೀಡುವುದಾಗಿ ಹೇಳಿದ ಅಲ್ಲು ಅರ್ಜುನ್!

ಅಪ್ಪು ಮನೆಗೆ ಭೇಟಿ ನೀಡುವುದಾಗಿ ಹೇಳಿದ ಅಲ್ಲು ಅರ್ಜುನ್!

ತಮಿಳು ಮತ್ತು ತೆಲುಗು ಚಿತ್ರರಂಗದ ಬಹುತೇಕ ನಟರು ಅಪ್ಪು ಮನೆಗೆ, ಸಮಾಧಿಗೆ ಭೇಟಿ ನೀಡಿದ್ದಾರೆ. ಪ್ರಭಾಸ್‌ ಮತ್ತು ಅಲ್ಲು ಅರ್ಜುನ್‌ಗೆ ಸಾಧ್ಯ ಆಗಿರಲಿಲ್ಲ. ಇತ್ತೀಚೆಗೆ 'ಪುಷ್ಪ' ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು ಅಲ್ಲು ಅರ್ಜುನ್, ಈ ವೇಳೆ ಅಲ್ಲು ಅರ್ಜುನ್‌ ಅಪ್ಪು ಬಗ್ಗೆ ಮಾತನಾಡಿದರು. ಅಪ್ಪು ಮನೆಗೆ ಒಂದು ದಿನ ಪ್ರತ್ಯೇಕವಾಗಿ ಭೇಟಿ ನೀಡುತ್ತೇನೆ ಎಂದು ಹೇಳಿದ್ದರು.

ಅಪ್ಪು ಮನೆಗೆ ಭೇಟಿ ನೀಡಿದ್ದ ನಾಗಾರ್ಜುನ್, ರಾಮ್‌ ಚಾರಣ್ ತೇಜ, ವಿಶಾಲ್!

ಅಪ್ಪು ಮನೆಗೆ ಭೇಟಿ ನೀಡಿದ್ದ ನಾಗಾರ್ಜುನ್, ರಾಮ್‌ ಚಾರಣ್ ತೇಜ, ವಿಶಾಲ್!

ಪುನೀತ್‌ರಾಜ್‌ಕುಮಾರ್‌ ಅವರು ಇಲ್ಲ ಎನ್ನುವ ನೋವಿನಲ್ಲೇ, ಕುಟುಂಬಕ್ಕೆ ಸಾಂತ್ವನ ಹೇಳಲು ಹಲವು ತಾರೆರ ದಂಡೇ ಹರಿದು ಬಂದಿತ್ತು. ನಟ ರಾಮ್‌ ಚರಣ್‌ ತೇಜ, ನಾಗಾರ್ಜುನ, ರಾಮ್‌ ಚಾರಣ್ ತೇಜ, ವಿಶಾಲ್, ವಿಜಯ್‌ ಸೇತುಪತಿ, ಶಿವಕಾರ್ತಿಕೇಯನ್ ಸೇರಿದಂತೆ ಹಲವು ತಾರೆಯರು ಪುನೀತ್‌ ರಾಜ್‌ಕುಮಾರ್‌ ನಿವಾಸಕ್ಕೆ ಭೇಟಿ ನೀಡಿದ್ದಾರೆ.

More from Filmibeat

English summary
Prabhas Visited Puneeth Rajkumar House, And Talk To His Family
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X