For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್‌ಕುಮಾರ್ ಅನ್ನು ತೆಲುಗಿಗೆ ಸ್ವಾಗತಿಸಿದ ಬಾಹುಬಲಿ

  |

  ಈಗಿನದ್ದು ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನಾ. ಬಹುತೇಕ ಸ್ಟಾರ್ ನಟರ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗುತ್ತಿವೆ. ಇತರ ಭಾಷೆಯ ನಟರು ನೆರೆ ರಾಜ್ಯದ ಸಿನಿಮಾಗಳನ್ನು ತಮ್ಮ-ತಮ್ಮ ಭಾಷೆಗೆ ಸ್ವಾಗತಿಸುತ್ತಿದ್ದಾರೆ.

  Salaar ಫಸ್ಟ್ ಲುಕ್ ನೋಡಿ ಥ್ರಿಲ್ ಆದ Puneeth Rajkumar | Filmibeat Kannada

  ನಟ ಪುನೀತ್ ರಾಜ್‌ಕುಮಾರ್ ಅವರ ಹೊಸ ಸಿನಿಮಾ 'ಯುವರತ್ನ' ಸಹ ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿಯೂ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಹಾಗೂ ನಟ ಪುನೀತ್ ರಾಜ್‌ಕುಮಾರ್ ಅವರನ್ನು ನಟ ಪ್ರಭಾಸ್ ತೆಲಗು ಸಿನಿರಂಗಕ್ಕೆ ಸ್ವಾಗತಿಸಿದ್ದಾರೆ.

  'ಪುನೀತ್ ರಾಜ್‌ಕುಮಾರ್ ಅವರನ್ನು ತೆಲುಗು ಸಿನಿಮಾರಂಗಕ್ಕೆ ಸ್ವಾಗತಿಸುತ್ತಿದ್ದೇನೆ. ಯುವರತ್ನ ಸಿನಿಮಾದ ತಂಡಕ್ಕೆ ಶುಭಹಾರೈಕೆಗಳು' ಎಂದು ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ಯುವರತ್ನ ಸಿನಿಮಾದ ತೆಲುಗು ಭಾಷೆಯ ಹಾಡನ್ನು ಹಂಚಿಕೊಂಡಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್, ಪುನೀತ್ ರಾಜ್‌ಕುಮಾರ್ ಅವರನ್ನು ತೆಲುಗು ಸಿನಿಮಾರಂಗಕ್ಕೆ ಸ್ವಾಗತಿಸಿದ್ದರು. ವಿಶೇಷವೆಂದರೆ ಪುನೀತ್, ನಾಯಕನಾಗಿ ನಟಿಸಿದ್ದ ಮೊದಲ ಸಿನಿಮಾ ಅಪ್ಪು ನಿರ್ದೇಶಿಸಿದ್ದು ಇದೇ ಪುರಿ ಜಗನ್ನಾಥ್.

  ಇದೇ ದಿನ, ವಿಜಯ್ ಕಿರಗಂದೂರು ನಿರ್ಮಾಣದ ಮುಂದಿನ ಸಿನಿಮಾ ಘೋಷಣೆ ಆಗಿದ್ದು, ಆ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾಕ್ಕೆ ಸಲಾರ್ ಎಂದು ಹೆಸರಿಡಲಾಗಿದೆ.

  ಪುನೀತ್ ರಾಜ್‌ಕುಮಾರ್ ಅವರೂ ಸಹ ಪ್ರಭಾಸ್ ಅನ್ನು ಕನ್ನಡಕ್ಕೆ ಸ್ವಾಗತಿಸಿ ಟ್ವೀಟ್ ಮಾಡಿದ್ದು, 'ತೆರೆದ ಹೃದಯದೊಂದಿಗೆ ನಿಮ್ಮನ್ನು ಕನ್ನಡ ನಾಡಿಗೆ ಸ್ವಾಗತಿಸುತ್ತಿದ್ದೇನೆ' ಎಂದು ಹೇಳಿದ್ದಾರೆ. ಸಾಲಾರ್ ಸಿನಿಮಾದ ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ ಪುನೀತ್.

  English summary
  Actor Prabhas welcomed Puneeth Rajkumar to Tollywood. He posted Yuvarathna movie poster in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X