'ಸಲಾರ್' ಹೆಸರು ವಿವಾದ: ಸ್ಪಷ್ಟನೆ ಕೊಟ್ಟ ಪ್ರಶಾಂತ್ ನೀಲ್
ನಟ ಪ್ರಭಾಸ್ ನಾಯಕರಾಗಿ ನಟಿಸುತ್ತಿರುವ ಸಲಾರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲಮ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಸದ್ಯಕ್ಕೆ ಈ ಸಿನಿಮಾ ವಿಷಯವೇ ಗಾಂಧಿನಗರದ ಹಾಟ್ ಟಾಪಿಕ್.
Recommended Video
ಪ್ರಭಾಸ್ ನಟಿಸುತ್ತಿರುವ ಈ ಸಿನಿಮಾಕ್ಕೆ 'ಸಲಾರ್' ಎಂದು ಹೆಸರಿಡಲಾಗಿದೆ. ಪರಭಾಷೆ ಸಿನಿಮಾ ನಟನ ಸಿನಿಮಾ ನಿರ್ಮಾಣ ಮಾಡುತ್ತಿರುವುದಕ್ಕೆ ಈಗಾಗಲೇ ಹೊಂಬಾಳೆ ಫಿಲಮ್ಸ್ ಮತ್ತು ಪ್ರಶಾಂತ್ ನೀಲ್ ವಿರುದ್ಧ ಕೆಲವು ಅಪಸ್ವರಗಳು ಕೇಳಿಬರುತ್ತಿವೆ. ಈ ಮಧ್ಯದಲ್ಲಿ 'ಸಲಾರ್' ಹೆಸರಿನ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ.
'ಸಲಾರ್' ಎಂಬುದು ಅರಬ್ಬಿ ಹೆಸರು, ಅದನ್ನು ಏಕೆ ಸಿನಿಮಾಕ್ಕೆ ಇಟ್ಟಿರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ವಿವಾದಗಳಿಂದ ಸುದ್ದಿಯಾಗಿರುವ ಪ್ರಶಾಂತ್ ಸಂಬರ್ಗಿ ಸಹ ಇದೇ ಪ್ರಶ್ನೆಯನ್ನು ಕೇಳಿದ್ದಾರೆ. ಕೆಲವರಂತೂ 'ಸಲಾರ್' ಎಂದರೆ ಅರ್ಥವೇನು ಎಂದು ತಲೆ ಕೆಡಿಸಿಕೊಂಡಿದ್ದಾರೆ.

ಇದಕ್ಕೆ ಟ್ವಿಟ್ಟರ್‌ನಲ್ಲಿ ಉತ್ತರ ನೀಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. 'ಸಲಾರ್' ಎಂದರೆ ಅರಸನ ಬಲಗೈ ಇದ್ದಂತೆ. ಅಥವಾ ಸೇನಾಧಿಪತಿ. ಅರಸನ ನಂತರದ ಸ್ಥಾನದಲ್ಲಿರುವವನು ಎಂದರ್ಥವಂತೆ.
ಪ್ರಾಂತ್ ನೀಲ್ ಸಿನಿಮಾ ಹೆಸರಿನ ಅರ್ಥ ಹೇಳಿದ ಮೇಲೆ ಸಿನಿಮಾದ ಕತೆಯ ಎಳೆಯನ್ನು ಊಹಿಸಬಹುದು. ಯಾವುದೋ ಒಬ್ಬ ದೊಡ್ಡ ರೌಡಿ ಅಥವಾ ಡಾನ್‌ನ ಬಲಗೈ ಭಂಟನಾಗಿ ಪ್ರಭಾಸ್ ಇರುತ್ತಾರೆ. ಆ ದೊಡ್ಡ ರೌಡಿ ಅಥವಾ ಡಾನ್ ಹಾಗೂ ಆತನ ಬಲಗೈ ಬಂಟ ಪ್ರಭಾಸ್ ಸಂಬಂಧದ ಸುತ್ತಾ ಕತೆ ಸುತ್ತುತ್ತದೆ ಎಂದು ಅಂದಾಜಿಸಬಹುದು.
ಮಷಿನ್ ಗನ್ ಹಿಡಿದು ಆಂಗ್ರಿ ಲುಕ್‌ನಲ್ಲಿರುವ ಪ್ರಭಾಸ್ ಅವರ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. 'ಹಿಂಸಾಪ್ರವೃತ್ತಿಯ ಜನರ ಗುಂಪು ಒಬ್ಬ ವ್ಯಕ್ತಿಯನ್ನು ಅತ್ಯಂತ ಹಿಂಸಾತ್ಮಕ ವ್ಯಕ್ತಿ ಎಂದು ಕರೆಯುತ್ತಾರೆ' ಎಂಬರ್ಥ ನೀಡುವ ಟ್ಯಾಗ್‌ಲೈನ್ ಅನ್ನು ಸಿನಿಮಾಕ್ಕೆ ನೀಡಲಾಗಿದೆ.


Click it and Unblock the Notifications











