ಪ್ರಭಾಸ್ ಅಭಿನಯದ 'ಸಾಹೋ' ಚಿತ್ರದ ರಿಲೀಸ್ ಡೇಟ್ ಫಿಕ್ಸ್
ಟಾಲಿವುಡ್ ಸ್ಟಾರ್ ರೆಬೆಲ್ ಸ್ಟಾರ್ ಪ್ರಭಾಸ್ ಸೂಪರ್ ಹಿಟ್ ಬಾಹುಬಲಿ ಚಿತ್ರದ ನಂತರ ಮತ್ತೆ ಅಭಿಮಾನಿಗಳ ಮುಂದೆ ಬಂದಿಲ್ಲ. ಬಾಹುಬಲಿ ರಿಲೀಸ್ ಆಗಿ ಸುಮಾರು ಎರಡು ವರ್ಷಗಳೆ ಕಳೆದಿವೆ. ಬಾಹುಬಲಿ ಸಿನಿಮಾ ಮೂಲಕ ದೇಶ ವಿದೇಶದಾದ್ಯಂತ ಸದ್ದು ಮಾಡಿದ್ದ ಪ್ರಭಾಸ್ ಮುಂದಿನ ಸಿನಿಮಾಗಾಗಿ ಚಿತ್ರಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
'ಬಾಹುಬಲಿ' ಚಿತ್ರದ ನಂತರ ಪ್ರಭಾಸ್ ಅಭಿಮಾನಿ ಬಳಗ ಕೂಡ ದ್ವಿಗುಣಗೊಂಡಿದೆ. 'ಬಾಹುಬಲಿ' ಚಿತ್ರದ ನಂತರ ಪ್ರಭಾಸ್ ಸಿನಿಮಾ ಹೇಗಿರಲಿದೆ ಎನ್ನುವ ನಿರೀಕ್ಷೆ ಕೂಡ ಹೆಚ್ಚಾಗಿದೆ. 'ಸಾಹೋ' ಸಿನಿಮಾ ಸೆಟ್ಟೇರಿ ವರ್ಷವೆ ಆಗಿದೆ. ಟೀಸರ್ ಮತ್ತು ಟ್ರೈಲರ್ ಮೂಲಕ ಚಿತ್ರಾಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿದ್ದ 'ಸಾಹೋ' ಈಗ ಮೊತ್ತೊಂದು ಹೊಸ ಪೋಸ್ಟರ್ ಜೊತೆಗೆ ರಿಲೀಸ್ ಡೇಟ್ ಅನ್ನು ರಿವೀಲ್ ಮಾಡಿದೆ.
ಹೌದು, ಇಂದು(ಮೇ-21)ಚಿತ್ರದ ಹೊಸ ಲುಕ್ ರಿವೀಲ್ ಆಗಿದೆ. ಪ್ರಭಾಸ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. 'ಸಾಹೋ' ಪತ್ತೆದಾರಿ ಥ್ರಿಲ್ಲರ್ ಸಿನಿಮಾ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಕನ್ನಡಕ ಹಾಕಿಕೊಂಡಿರುವ ಪ್ರಭಾಸ್ ಗಂಭೀರ ಲುಕ್ ನಲ್ಲಿ ಪೋಸ್ ನೀಡಿದ್ದಾರೆ.

ಅಂದ್ಹಾಗೆ 'ಸಾಹೋ' ರಿಲೀಸ್ ಬಗ್ಗೆ ಇದ್ದ ಕುತೂಹಲಕ್ಕು ತೆರೆ ಎಳೆದಿದ್ದಾರೆ ಪ್ರಬಾಸ್. ಇಡೀ ದೇಶವೆ ಎದುರುನೋಡುತ್ತಿರುವ ಪ್ರಬಾಸ್ ಮುಂದಿನ ಸಿನಿಮಾ ಆಗಸ್ಟ್ 15 ಸ್ವಾತಂತ್ರ ದಿನಾಚರಣೆ ದಿನ ತೆರೆಗೆ ಬರುತ್ತಿದೆ. ಈ ಬಗ್ಗೆ ಸ್ವತಃ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಹೇಳಿಕೊಂಡಿದ್ದಾರೆ.
ಅಭಿಮಾನಿಗಳಿಗೆ ಏನೋ ಸರ್ಪೈಸ್ ಕೊಡುವುದಾಗಿ ಹೇಳಿ ಕುತೂಹಲ ಮೂಡಿಸಿದ್ದರು ಪ್ರಭಾಸ್. ರೆಬೆಲ್ ಸ್ಟಾರ್ ನೀಡುವ ಸರ್ಪೈಸ್ ಏನಿರಬಹುದು ಎಂದು ಅನೇಕರು ತಲೆಕೆಡಿಸಿಕೊಂಡಿದ್ದರು. ಆದ್ರೀಗ ಫಸ್ಟ್ ಮತ್ತು ರಿಲೀಸ್ ಡೇಟನ್ನು ಬಹಿರಂಗಪಡಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.


Click it and Unblock the Notifications











