twitter
    For Quick Alerts
    ALLOW NOTIFICATIONS  
    For Daily Alerts

    ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಭುದೇವ ಸಾಧನೆಗಳೇನು ?

    |

    ನೃತ್ಯ ನಿರ್ದೇಶಕ, ನಟ, ನಿರ್ದೇಶಕ ಪ್ರಭುದೇವ ಅವರಿಗೆ ಈಗ ಮತ್ತೊಂದು ಅತ್ಯುನ್ನತ ಪ್ರಶಸ್ತಿ ಸಿಕ್ಕಿದೆ. ನಿನ್ನೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

    ಕೇಂದ್ರ ಸರ್ಕಾರವು 2019 ಸಾಲಿನ ಪದ್ಮ ಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಹಾಗೂ ಭಾರತ ರತ್ನ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಈ ಪೈಕಿ ಪ್ರಭುದೇವ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

    ಕ್ರಿಕೆಟಿಗ ಗೌತಮ್ ಗಂಭೀರ್, ಫುಟ್ಬಾಲಿಗ ಸುನಿಲ್ ಛೆಟ್ರಿಗೆ ಪದ್ಮಶ್ರೀ ಗೌರವ

    ಪ್ರಭುದೇವ ಸೇರಿದಂತೆ ಕರ್ನಾಟಕದ ಐದು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪ್ರಭುದೇವ ಮೂಲತಃ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಮೂಗೂರಿನವರು. ಅವರ ತಂದೆ ಮೂಗೂರು ಶ್ರೀನಿವಾಸ್ ಡ್ಯಾನ್ಸ್ ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.

    ತಂದೆಯ ರೀತಿ ನೃತ್ಯವನ್ನು ಬದುಕನ್ನಾಗಿ ಮಾಡಿಕೊಂಡ ಪ್ರಭುದೇವ ಇಂಡಿಯಾನ್ ಮೈಕಲ್ ಜಾಕ್ಸನ್ ಎಂಬ ಬಿರುದು ಪಡೆಯುವ ಮಟ್ಟಿಗೆ ಬೆಳೆದಿದ್ದಾರೆ. ಮುಂದೆ ಓದಿ....

    30 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ

    30 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ

    1986 ರಲ್ಲಿ ಬಿಡುಗಡೆಯಾದ 'ಮೌನರಾಗಂ' ಸಿನಿಮಾದ ಹಾಡಿನ ಮೂಲಕ ಪ್ರಭುದೇವ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಕೊಂಡರು. ಈ ಚಿತ್ರದ ಬಳಿಕ ಮೊದಲ ಬಾರಿಗೆ ನೃತ್ಯ ನಿರ್ದೇಶನ ಮಾಡಿದ್ದು ಕಮಲ್ ಹಾಸನ್ ಅವರ 'ವೆಟ್ರಿ ವಿಝಾ' ಸಿನಿಮಾಗೆ. ಅಲ್ಲಿಂದ ಶುರುವಾಗಿ ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

    ನಾಲ್ಕು ಭಾಷೆಗಳ ಸಿನಿಮಾಗಳು

    ನಾಲ್ಕು ಭಾಷೆಗಳ ಸಿನಿಮಾಗಳು

    ಪ್ರಭುದೇವ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೆಚ್ಚಾಗಿ ತಮಿಳು ಸಿನಿಮಾಗಳನ್ನು ಮಾಡುತ್ತಿದ್ದ ಪ್ರಭುದೇವ ಆಗಾಗ ಬೇರೆ ಬೇರೆ ಚಿತ್ರರಂಗದಲ್ಲಿಯೂ ಸಿನಿಮಾ ಮಾಡಿದ್ದಾರೆ. ಪ್ರಭುದೇವ ನಿರ್ದೇಶನ ತೆಲುಗಿನ 'ನುವ್ವು ವಸ್ತಾನಂಟೆ ನೇನು ವದ್ದಂಟಾನ' ಸಿನಿಮಾ ದೊಡ್ಡ ಹಿಟ್ ಆಗಿದೆ.

    ಪದ್ಮಪ್ರಶಸ್ತಿ ಪಡೆದ ಗಣ್ಯರಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ಎರಡು ರಾಷ್ಟ್ರ ಪ್ರಶಸ್ತಿ

    ಎರಡು ರಾಷ್ಟ್ರ ಪ್ರಶಸ್ತಿ

    ಪ್ರಭುದೇವ ಈಗಾಗಲೇ ಎರಡು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 1996 ಹಾಗೂ 2004 ರಲ್ಲಿ ತಮ್ಮ ಉತ್ತಮ ನೃತ್ಯ ಸಂಯೋಜನೆಗಾಗಿ ಈ ಪ್ರಶಸ್ತಿ ಅವರಿಗೆ ಸಿಕ್ಕಿತ್ತು. ಅದರ ಜೊತೆಗೆ ನಂದಿ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಕೂಡ ಅವರ ಪಾಲಾಗಿದೆ. ಪ್ರಭುದೇವ ನಟಿಸಿದ್ದ 'ಕಾದಲನ್' ಸಿನಿಮಾಗೆ ನಾಲ್ಕು ರಾಷ್ಟ್ರ ಪ್ರಶಸ್ತಿ ಬಂದಿತ್ತು.

    ಎಲ್ಲ ವಿಭಾಗದಲ್ಲಿ ಕೆಲಸ

    ಎಲ್ಲ ವಿಭಾಗದಲ್ಲಿ ಕೆಲಸ

    ನೃತ್ಯ ನಿರ್ದೇಶಕ, ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಗೀತ ರಚನೆ ಹೀಗೆ ಎಲ್ಲ ವಿಭಾಗಳಲ್ಲಿ ಪ್ರಭುದೇವ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಉಪೇಂದ್ರ ಜೊತೆಗೆ 'ಹೆಚ್ ಟು ಓ' ಹಾಗೂ 'ಒನ್ ಟು ತ್ರೀ' ಸಿನಿಮಾಗಳಲ್ಲಿ ಪ್ರಭುದೇವ ನಟಿಸಿದ್ದಾರೆ.

    ಇಂಡಿಯನ್ ಮೈಕಲ್ ಜಾಕ್ಸನ್

    ಇಂಡಿಯನ್ ಮೈಕಲ್ ಜಾಕ್ಸನ್

    ಪ್ರಭುದೇವ ನೃತ್ಯ ಪ್ರತಿಭೆ ಬಗ್ಗೆ ಯಾರೂ ಕೆಮ್ಮುವ ಹಾಗಿಲ್ಲ. ಅದರ ಡ್ಯಾನ್ಸ್ ನೋಡುವುದು ಸಖತ್ ಮಜಾ ನೀಡುತ್ತದೆ. ತಮ್ಮದೆ ಸ್ಟೈಲ್ ನಲ್ಲಿ ನೃತ್ಯ ನಿರ್ದೇಶನ ಮಾಡುವ ಪ್ರಭುದೇವ ಇಂಡಿಯನ್ ಮೈಕಲ್ ಜಾಕ್ಸನ್ ಎಂಬ ಖ್ಯಾತಿ ಪಡೆದಿದ್ದಾರೆ. ವೇದಿಕೆ ಕಾರ್ಯಕ್ರಮಗಳಲ್ಲಿ ಪ್ರಭುದೇವ ಡ್ಯಾನ್ಸ್ ನೋಡುಗರಿಗೆ ಸಖತ್ ಕಿಕ್ ನೀಡುತ್ತದೆ. ಇತ್ತೀಚಿಗೆ ಹಿಟ್ ಆದ 'ರೌಡಿ ಬೇಬಿ..'ಗೆ ಸಹ ಪ್ರಭುದೇವ ನೃತ್ಯ ಸಂಯೋಜನೆ ಮಾಡಿದ್ದರು.

    English summary
    Indian Mikal Johnson Prabhu Deva honored Padmashree award by central government of india.
    Saturday, January 26, 2019, 13:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X