ಪುನೀತ್ ರಾಜ್‌ಕುಮಾರ್ ಡ್ಯಾನ್ಸ್ ಕಂಡು ದಂಗಾದ ಪ್ರಭುದೇವ!
ನಟ ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅದು ಅವರು ಹೀರೋ ಆಗಿ ಅಭಿಸಿರುವ ಕೊನೆಯ ಚಿತ್ರ. 'ಜೇಮ್ಸ್' ಜೊತೆಗೆ ಪುನೀತ್ ರಾಜ್‌ಕುಮಾರ್ ಡಾರ್ಲಿಂಗ್ ಕೃಷ್ಣ ಹೀರೋ ಆಗಿರುವ 'ಲಕ್ಕಿ ಮ್ಯಾನ್' ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.
ಈಗಾಗಲೇ 'ಲಕ್ಕಿ ಮ್ಯಾನ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿಯೂ ಅಪ್ಪು ಗಮನ ಸೆಳೆದಿದ್ದಾರೆ. ಈ ಪೋಸ್ಟರ್ ಬಳಿಕ ಈಗ ಅಪ್ಪು ಟೀಸರ್‌ನಲ್ಲಿ ಕೂಡ ಮಿಂಚಿದ್ದಾರೆ.
ಇನ್ನು ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಪುನೀತ್ ರಾಜ್‌ಕುಮಾರ್ ಈ ಚಿತ್ರದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿರುವು. ಇನ್ನು ಇದೇ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್ ಪ್ರಭುದೇವ ಜೊತೆಗೆ ಡಾನ್ಸ್ ಮಾಡಿದ್ದಾರೆ. ಪ್ರಭುದೇವ ಅಪ್ಪು ಅವ್ರ ಡ್ಯಾನ್ಸ್‌ಗೆ ಫಿದಾ ಆಗಿದ್ದಾರೆ.

ಪುನೀತ್ ರಾಜ್‌ಕುಮಾರ್, ಪ್ರಭುದೇವ ಒಟ್ಟಿಗೆ ಡಾನ್ಸ್!
ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಜೋಡಿ ಡ್ಯಾನ್ಸಿಂಗ್ ಝಲಕ್ ಕೂಡ ಟೀಸರ್‌ನಲ್ಲಿ ಬಹಿರಂಗಗೊಂಡಿದೆ. ಪುನೀತ್ ರಾಜ್‌ಕುಮಾರ್ ಕೂಡ ಡ್ಯಾನ್ಸ್ ಮಾಡೋದ್ರಲ್ಲಿ ಎಕ್ಸ್‌ಪರ್ಟ್. ಹಾಗಾಗಿ ಈ ಹಾಡನ್ನು ನೋಡಲು ಅಭಿಮಾನಿ ಬಳಗ ಕಾದಿದೆ. ಇನ್ನು ಟೀಸರ್ ಆರಂಭದಲ್ಲಿ ಪ್ರಭುದೇವ ಕೂಡ ಒಂದು ಡೈಲಾಗ್ ಹೇಳಿ, ಡಾನ್ಸ್ ಶುರುವಾಗುತ್ತಾರೆ.
ಅಪ್ಪು ಡ್ಯಾನ್ ಕಂಡು ದಂಗಾದ ಪ್ರಭುದೇವ!
ಪುನೀತ್ ರಾಜ್‌ಕುಮಾರ್ ಜೊತೆಗೆ ಈ ಚಿತ್ರದಲ್ಲಿ ಪ್ರಭುದೇವ ಕೂಡ ಕಾಣಿಸಕೊಂಡಿದ್ದಾರೆ. ಪ್ರಭುದೇವ ಅಪ್ಪು ಒಟ್ಟಿಗೆ ಡಾನ್ಸ್ ಮಾಡಿದ್ದಾರೆ. ಈ ಹಾಡಿಗೆ ಪ್ರಭುದೇವ ಮಾಸ್ಟರ್. ಇನ್ನು ಅಪ್ಪು ಡಾನ್ಸ್ ಬಗ್ಗೆ ಪ್ರಭುದೇವ ಮಾತನಾಡಿದ್ದಾರೆ. " ಎಲ್ಲರಿಗೂ ನಮಸ್ಕಾರ ಲಕ್ಕಿ ಮ್ಯಾನ್ ಟೀಸರ್ ಇಂಟ್ರಸ್ಟಿಂಗ್ ಆಗಿದೆ. ನಾನು ತುಂಬಾ ಕಾತರನಾಗಿದ್ದೇನೆ. ಪುನೀತ್ ರಾಜ್‌ಕುಮಾರ್ ತುಂಬಾ ಕೂಲ್ ವ್ಯಕ್ತಿತ್ವದವರು. ಯಾನೇ ಹೇಳಿದರೂ ಮಾಡುತ್ತಿದ್ದರು. ಅವರು ಉತ್ತಮ ಡ್ಯಾನ್ಸರ್" ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

'ಲಕ್ಕಿ ಮ್ಯಾನ್'ಗಾಗಿ ಅಪ್ಪು ದೇವರ ರೂಪ!
'ಲಕ್ಕಿ ಮ್ಯಾನ್' ಚಿತ್ರವನ್ನು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರ ತಮಿಳಿನ 'ಒ ಮೈ ಕಡವಳೆ' ಚಿತ್ರದ ರಿಮೇಕ್. ಹಾಗಾಗಿ ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಮಾಡಿದ್ದಾರೆ. ಚಿತ್ರದಲ್ಲಿ ಅಪ್ಪು ನಾಯಕ ನಟನಿಗೆ ಸರಿಯಾದ ದಾರಿ ತೋರಿಸುವ 'ದೇವರ' ಪಾತ್ರದಲ್ಲಿ ಅಭಿನಯಿಸಿದ್ದಾರೆ.
Recommended Video
ದೇವರಾಗಿ ಬಂದ ಪುನೀತ್ ರಾಜ್‌ಕುಮಾರ್!
ಸದ್ಯ ಲಕ್ಕಿ ಮ್ಯಾನ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಟೀಸರ್‌ಗಾಗಿ ಪ್ರೇಕ್ಷಕಕರು ಹೆಚ್ಚು ಕಾತರದಿಮದ ಕಾಯುತ್ತಿದ್ದರು. ಇದಕ್ಕೆ ಕಾರಣ ನಟ ಪುನೀತ್ ರಾಜ್‌ಕುಮಾರ್. ಲಕ್ಕಿ ಮ್ಯಾನ್ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಟೀಸರ್‌ನಲ್ಲಿ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎನ್ನು ಕುತೂಹಲ ಇತ್ತು. ಈಗ ಅಪ್ಪು ದೇವರ ರೂಪದಲ್ಲಿ ದರ್ಶನ ಕೊಟ್ಟಿದ್ದಾರೆ.


Click it and Unblock the Notifications











