For Quick Alerts
  ALLOW NOTIFICATIONS  
  For Daily Alerts

  ಯೋಗರಾಜ್ ಭಟ್ಟರ ಸಿನಿಮಾದಲ್ಲಿ ಖ್ಯಾತ ನಟ ಪ್ರಭುದೇವ?

  |

  ಬಹುಭಾಷ ನಟ, ನಿರ್ದೇಶಕ, ಖ್ಯಾತ ನೃತ್ಯಗಾರ ಪ್ರಭುದೇವ ಮತ್ತೆ ಕನ್ನಡಕ್ಕೆ ಬರ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಯೋಗರಾಜ್ ಭಟ್ ಮತ್ತು ತಂಡ ಪ್ರಭುದೇವರನ್ನ ಭೇಟಿಯಾಗಿ ಮಾತುಕಥೆ ನಡೆಸಿದ್ದಾರೆ. ಯೋಗರಾಜ್ ಭಟ್, ನಿರ್ಮಾಪಕ ಮಹೇಶ್ ಧನ್ವೀರ್ ಇಬ್ಬರು ಪ್ರಭುದೇವರನ್ನ ಭೇಟಿಯಾಗಿ ಫೊಟೋವನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  ಯೋಗರಾಜ್ ಭಟ್ ಸದ್ಯ ಬಹು ನಿರೀಕ್ಷೆಯ ಗಾಳಿಪಟ-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಕ್ಕೆ ಬಹುಭಾಷೆಯ ನಟ ಪ್ರಭುದೇವ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಯೋಗರಾಜ್ ಭಟ್ ಮುಂಬೈಗೆ ತೆರಳಿ ಪ್ರಭುದೇವ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

  ಸ್ಯಾಂಡಲ್‌ವುಡ್ ಸ್ಟಾರ್ಸ್ ಕನ್ನಡದ ಕೋಟ್ಯಾಧಿಪತಿಯಲ್ಲಿ ಗೆದ್ದ ಹಣ ಎಷ್ಟು ನೋಡಿ..! Filmibeat Kannada

  'ದಬಾಂಗ್' ಚಿತ್ರಕ್ಕೆ ಸುದೀಪ್ ಅವರನ್ನ ಸೂಚಿಸಿದ್ದು ಯಾರು ಗೊತ್ತಾ?'ದಬಾಂಗ್' ಚಿತ್ರಕ್ಕೆ ಸುದೀಪ್ ಅವರನ್ನ ಸೂಚಿಸಿದ್ದು ಯಾರು ಗೊತ್ತಾ?

  ಆದ್ರೆ ಪ್ರಭುದೇವ ಕಡೆಯಿಂದ ಗ್ರೀನ್ ಸಿಗ್ನಲ್ ಬರುವುದೊಂದೆ ಭಾಕಿ ಇದೆ. ಈಗಾಗಲೆ ಕಲಾವಿದರನ್ನು ಬದಾಯಿಸುವ ಮೂಲಕಗ ಗಾಳಿಪಟ ಪಾರ್ಟ್-2 ನಲ್ಲೂ ಗೋಲ್ಡನ್ ಸ್ಟಾರ್ ಗಣೇಶ್, ದಿಂಗತ್ ಅವರನ್ನೆ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ. ಇಬ್ಬರ ಜೊತೆಗೆ ಪವನ್ ಕುಮಾರ್ ಸಹ ಬಣ್ಣ ಹಚ್ಚುತ್ತಿದ್ದಾರೆ.

  ಪ್ರಭುದೇವ ಸದ್ಯ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಅಭಿನಯದ ದಬಾಂಗ್-3 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮೊದಲು ಪ್ರಭುದೇವ ಕನ್ನಡದಲ್ಲಿ 2002ರಲ್ಲಿ ರಿಲೀಸ್ ಆದ ಉಪೇಂದ್ರ ಮತ್ತು ಪ್ರಿಯಾಂಕಾ ಅಭಿನಯದ H2O ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

  ಈಗ ಮತ್ತೆ ಗಾಳಿಪಟ-2 ಚಿತ್ರಕ್ಕೆ ಕರೆತರುವ ಪ್ಲಾನ್ ಪ್ರಯತ್ನ ಮಾಡುತ್ತಿದ್ದಾರೆ ಭಟ್ರು. ಅಂದ್ಹಾಗೆ ಗಾಳಿಪಟ-2 ಚಿತ್ರ ಬಹುಭಾಷೆಯಲ್ಲಿ ತಯಾರಾಗುತ್ತಿದೆ. ಹಾಗಾಗಿ ನ್ಯಾಷನಲ್ ಸ್ಟಾರ್ ಚಿತ್ರದಲ್ಲಿದ್ದರೆ ಚಿತ್ರಕ್ಕೆ ಮತ್ತಷ್ಟು ಬಲಬಂದಾಗುತ್ತೆ. ಭಟ್ಟರ ಪ್ರಯತ್ನಕ್ಕೆ ಫಲ ಸಿಗುತ್ತಾ? ಪ್ರಭುದೇವ ಮತ್ತೆ ಕನ್ನಡಕ್ಕೆ ಬರ್ತಾರಾ ಎನ್ನುವುದು ಕಾದು ನೋಡಬೇಕು ಅಷ್ಟೆ.

  English summary
  Kannada director Yogaraj Bhat meets multi language star Prabhudeva. Prabhudeva likely to be part of yogaraj Bhat's Galipata-2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X