ಪದ್ಮ ಪ್ರಶಸ್ತಿ ಸ್ವೀಕರಿಸಿದ ಮೋಹನ್ ಲಾಲ್, ಪ್ರಭುದೇವ ಹಾಗೂ ಶಂಕರ್ ಮಹದೇವನ್
ಕಳೆದ ಜನವರಿಯಲ್ಲಿ ಕೇಂದ್ರ ಸರ್ಕಾರವು 2019 ಸಾಲಿನ ಪದ್ಮ ಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಹಾಗೂ ಭಾರತ ರತ್ನ ಪ್ರಶಸ್ತಿಗಳನ್ನು ಘೋಷಣೆ ಮಾಡಿತ್ತು. ಇಂದು ಈ ಪ್ರಶಸ್ತಿಗಳ ಪ್ರಧಾನ ಸಮಾರಂಭ ನಡೆದಿದೆ.
ಚಿತ್ರರಂಗದ ಪೈಕಿ ನಟ, ನಿರ್ದೇಶಕ, ನೃತ್ಯಪಟು ಪ್ರಭುದೇವ, ಮಲೆಯಾಳಂ ನಟ ಮೋಹನ್ ಲಾಲ್ ಹಾಗೂ ಖ್ಯಾತ ಗಾಯಕ ಶಂಕರ್ ಮಹದೇವನ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.
ನವ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರಿಂದ ಭಾರತೀಯ ಚಿತ್ರರಂಗದ ಈ ಮೂರು ದಿಗ್ಗಜರು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪದ್ಮ ಭೂಷಣ ಪ್ರಶಸ್ತಿ ಪಡೆದು ಮಾತನಾಡಿರುವ ಮೋಹನ್ ಲಾಲ್ ''ನಾನು ಚಿತ್ರರಂಗಕ್ಕೆ ಬಂದು 41 ವರ್ಷಗಳಾಗಿವೆ. ಈ ಪ್ರಶಸ್ತಿಯನ್ನು ನಾನು ನನ್ನ ಚಿತ್ರರಂಗದ ಮಿತ್ರರಿಗೆ, ಹಾಗೂ ನನಗೆ ಪ್ರೋತ್ಸಾಹ ನೀಡಿದ ಕುಟುಂಬದವರಿಗೆ ಅರ್ಪಿಸುತ್ತಿದ್ದೇನೆ.'' ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಪ್ರದ್ಮಶ್ರೀ ಪಡೆದ ಖುಷಿಯನ್ನು ಪ್ರಭುದೇವ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ತಾಯಿಯ ಜೊತೆಗಿನ ಫೋಟೋ ಹಾಕಿ ಪ್ರಶಸ್ತಿಗೆ ಕಾರಣರಾದ ಎಲ್ಲರಿಗೆ ಧನ್ಯವಾದ ತಿಳಿಸಿದ್ದಾರೆ.


Click it and Unblock the Notifications











