ಕರಪತ್ರ ಅಂಟಿಸುತ್ತಿದ ಹುಡುಗ ಸಿನಿಮಾ ಖಳನಾಯಕನಾದ ಕಥೆ

By Pavithra

ಸಿನಿಮಾರಂಗದಲ್ಲಿ ಶಾಶ್ವತ ನೆಲೆ ಗಿಟ್ಟಿಸಿಕೊಳ್ಳುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಇಲ್ಲಿ ನಟರಾಗಿ, ತಂತ್ರಜ್ಞರಾಗಿ ಗುರುತಿಸಿಕೊಳ್ಳಲು ಸಾಕಷ್ಟು ಸರ್ಕಸ್ ಮಾಡಬೇಕು. ವರ್ಷಗಳ ಕಾಲ ಸಿನಿಮಾ ಎನ್ನುವ ಪ್ರಪಂಚದಲ್ಲಿ ಮುಳುಗಿ ಜೀವಿಸಬೇಕು. ಆಗಲೇ ಅಲ್ಲಿಯ ಆಳ ಅಗಲ ತಿಳಿಯಲು ಸಾಧ್ಯ.

ಪ್ರೇಕ್ಷಕರ ಮುಂದೆ ಇಂದು ಕಲಾವಿದರಾಗಿ ಗುರುತಿಸಿಕೊಂಡಿರುವ ಪ್ರತಿಯೊಬ್ಬರಿಗೂ ಒಂದೊಂದು ಕಥೆಯಿದೆ. ಒಬ್ಬೊಬ್ಬರೂ ಒಂದೊಂದು ರೀತಿಯ ಕಷ್ಟ ಪಟ್ಟುಕೊಂಡು ಇಂದು ಅಭಿಮಾನಿಗಳ ಕೈನಲ್ಲಿ ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ. ಸದ್ಯ ನಾವು ಹೇಳ ಹೊರಟಿರೋದು ಸ್ಯಾಂಡಲ್ ವುಡ್ ನಲ್ಲಿ ಈಗ ತಾನೆ ಖಳನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ಕಲಾವಿದರ ಬಗ್ಗೆ.

ರಾತ್ರಿ ಸಮಯದಲ್ಲಿ ಗೋಡೆಗಳಿಗೆ ಕರಪತ್ರಗಳನ್ನು ಅಂಟಿಸುತ್ತಿದ್ದ ಹುಡುಗ ಈಗ ಸ್ಟಾರ್ ಗಳ ಸಿನಿಮಾಗಳಲ್ಲಿ ಖಳನಾಯಕನಾಗಿ ಅಭಿನಯ ಮಾಡುತ್ತಿದ್ದಾನೆ. ಕೈ ತುಂಬಾ ದೊಡ್ಡ ಸಿನಿಮಾಗಳು ಇಲ್ಲ ಎಂದರೂ ತನ್ನನ್ನು ಗುರಿತಿಸಿಕೊಳ್ಳುವಂತ ಪಾತ್ರಗಳು ಮಾತ್ರ ಹುಡುಕಿಕೊಂಡು ಬರುತ್ತಿವೆ. ಹಾಗಾದರೆ ಯಾರು ಆ ಕಲಾವಿದ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ನಟನಾಗಲು ಊರು ಬಿಟ್ಟ ಕಲಾವಿದ

ನಟನಾಗಲು ಊರು ಬಿಟ್ಟ ಕಲಾವಿದ

ನಟ ಪ್ರದೀಪ್. ಇತ್ತೀಚಿಗಿನ ದಿನಗಳಲ್ಲಿ 'ಪುಷ್ಪಕ ವಿಮಾನ', 'ಮಫ್ತಿ', 'ಉಗ್ರಂ' ಸಿನಿಮಾಗಳಲ್ಲಿ ನಾಯಕನ ಜೊತೆಯಲ್ಲಿ ಗುರುತಿಸಿಕೊಳ್ಳುವಂತಹ ಪಾತ್ರಗಳಲ್ಲಿ ಅಭಿನಯ ಮಾಡಿದ ಕಲಾವಿದ. ತಾನು ಸಿನಿಮಾ ನಟನಾಗಬೇಕೆಂದು ಊರು ಬಿಟ್ಟು ‌ಬಂದ ಪ್ರದೀಪ್ ಪೂಜಾರಿ, ಬೆಂಗಳೂರಿಗೆ ಬಂದು ಸಾಕಷ್ಟು ಕಷ್ಟ ಪಟ್ಟಿದ್ದಾರೆ.

ಕರಪತ್ರ ಅಂಟಿಸಿ ಜೀವ ಕಳೆದ ಕಲಾವಿದ

ಕರಪತ್ರ ಅಂಟಿಸಿ ಜೀವ ಕಳೆದ ಕಲಾವಿದ

ಬೆಂಗಳೂರಿಗೆ ಬಂದ ಆರಂಭ ದಿನಗಳಲ್ಲಿ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡಿ ನಂತರ ರಾತ್ರಿ ‌ವೇಳೆಯಲ್ಲಿ ಕಾಂಪೌಂಡ್ಗಳಿಗೆ ಕರಪತ್ರಗಳನ್ನು ಅಂಟಿಸುತ್ತಾ ಜೀವನ ಸಾಗಿಸುತ್ತಿದ್ದರಂತೆ. ಆದರೆ ಸಿನಿಮಾ ಕಲಾವಿದನಾಗುವ ಹಠ ಮಾತ್ರ ಎಂದಿಗೂ ಬಿಡಲಿಲ್ಲ.

ಶ್ರೀ ಮುರಳಿ ಜೊತೆ ಹೆಚ್ಚು ಅಭಿನಯ

ಶ್ರೀ ಮುರಳಿ ಜೊತೆ ಹೆಚ್ಚು ಅಭಿನಯ

ಬೀದಿ ನಾಟಕಗಳನ್ನು ಮಾಡುತ್ತಾ ಬಣ್ಣದ ಬದುಕು ಶುರು ಮಾಡಿದ ಪ್ರದೀಪ್ ಪೂಜಾರಿ ಮೊದಲನೆಯದಾಗಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ "ಮಿಂಚಿನ ಓಟ" ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ನಂತರ 'ಗಿಲ್ಲಿ'. 'ಜೈ ಭಂಜರಂಗ ಬಲಿ'. 'ದೋಸ್ತಿ'. 'ಪುಷ್ಪಕ ವಿಮಾನ'. 'ಉಗ್ರಂ. ಬಿಲಿಡಂರ್'. 'ಮಪ್ತಿ'. 'ಅಯ್ಯೊರಾಮ'. ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಹಾಸ್ಯಕ್ಕೂ ಕೈ ಖಡಕ್ ಪಾತ್ರಕ್ಕೂ ಜೈ

ಹಾಸ್ಯಕ್ಕೂ ಕೈ ಖಡಕ್ ಪಾತ್ರಕ್ಕೂ ಜೈ

ಪ್ರದೀಪ್ ಪೂಜಾರಿ ಕೇವಲ ಖಳನಾಯಕನಾಗಿ ಮಾತ್ರವಲ್ಲದೆ ಹಾಸ್ಯ ನಟನಾಗಿಯೂ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 'ಪುಷ್ಪಕ ವಿಮಾನ' ಚಿತ್ರದಲ್ಲಿ ಪ್ರದೀಪ್ ಅಭಿನಯಕ್ಕೆ ಚಪ್ಪಾಳೆ ಮೂಲಕ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

ಸ್ಟಾರ್ ಸಿನಿಮಾಗಳಲ್ಲಿ ಪ್ರದೀಪ್

ಸ್ಟಾರ್ ಸಿನಿಮಾಗಳಲ್ಲಿ ಪ್ರದೀಪ್

ಈಗಾಗಲೇ 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ಪ್ರದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ', 'ಸೀತಾ ರಾಮ ಕಲ್ಯಾಣ', 8 'ಎಂ ಎಂ', 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರಗಳು ಬಿಡುಗಡೆ ಆಗಬೇಕಿವೆ.

More from Filmibeat

English summary
Kannada film actor Pradeep Poojary was doing the job of Paste the brochures to the walls before coming to the cinema. Presently, Pradeep Poojary is acting in a kannada big stars cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X