ರಿಷಬ್ ಶೆಟ್ಟಿಯನ್ನು ಮದುವೆಯಾಗುವ ಮುನ್ನ ಪ್ರಗತಿ ಶೆಟ್ಟಿ ಎಲ್ಲಿ ಕೆಲಸ ಮಾಡ್ತಿದ್ರು, ವಿದ್ಯಾರ್ಹತೆ ಏನು?

ಪ್ರಸ್ತುತ ಉತ್ತಮ ಚಿತ್ರಗಳ ಕುರಿತಾದ ಚರ್ಚೆ ಇದ್ದರೆ ಅಲ್ಲಿ ಕಡ್ಡಾಯವಾಗಿ ಕೇಳಿಬರುವ ಹೆಸರು ಕಾಂತಾರ. ಈ ಒಂದು ಚಿತ್ರದಿಂದ ಕನ್ನಡ ನೆಲದಲ್ಲಿ ಮಾತ್ರ ತಾನೊಬ್ಬ ಅದ್ಭುತ ನಿರ್ದೇಶಕ ಹಾಗೂ ನಟ ಎಂದು ಗುರುತಿಸಿಕೊಂಡಿದ್ದ ರಿಷಬ್ ಶೆಟ್ಟಿ ಇಡೀ ದೇಶದಾದ್ಯಂತ ಪ್ರಸಿದ್ಧರಾದರು. ಹೀಗೆ ರಿಷಬ್ ಶೆಟ್ಟಿ ಕುರಿತು ಸಿನಿ ರಸಿಕರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಲೂ ಸಹ ಆರಂಭಿಸಿದರು.

ಇನ್ನು ರಿಷಬ್ ಶೆಟ್ಟಿ ಕುಟುಂಬ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಹುಡುಕಲು ಆರಂಭಿಸಿದ ನೆಟ್ಟಿಗರಿಗೆ ರಿಷಬ್ ಶೆಟ್ಟಿ ಅವರದ್ದು ಲವ್ ಮ್ಯಾರೇಜ್ ಹಾಗೂ ಅವರ ಪತ್ನಿ ಸಹ ಇಂಡಸ್ಟ್ರಿಯಲ್ಲಿ ಫ್ಯಾಷನ್ ಡಿಸೈನರ್ ಆಗಿ ತೊಡಗಿಸಿಕೊಂಡಿದ್ದಾರೆ ಎಂಬುದು ಇಂಟರೆಸ್ಟಿಂಗ್ ವಿಷಯ ಎನಿಸಿತ್ತು. ಹೌದು, ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಹರಿಕಥೆ ಅಲ್ಲ ಗಿರಿಕಥೆ, ಬೆಲ್ ಬಾಟಮ್ ಹಾಗೂ ಕಾಂತಾರ ಸೇರಿದಂತೆ ಹಲವು ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.

Pragathi Shetty educational qualification and profession before married to Rishab Shetty

ಕಾಂತಾರ ಸಕ್ಸಸ್ ಬಳಿಕ ಹಲವು ಸಂದರ್ಶನಗಳಲ್ಲಿ ಭಾಗವಹಿಸಿದ ಪ್ರಗತಿ ಶೆಟ್ಟಿ ತಮ್ಮ ಹಾಗೂ ರಿಷಬ್ ಶೆಟ್ಟಿ ನಡುವಿನ ಪರಿಚಯ ಹೇಗಾಯಿತು ಎಂಬುದನ್ನು ಹಂಚಿಕೊಂಡಿದ್ದರು. ನಿನ್ನೆ ( ಫೆಬ್ರವರಿ 28 ) ಪ್ರಗತಿ ಶೆಟ್ಟಿ 31ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ದಿನದಂದೂ ಸಹ ಪ್ರಗತಿ ಬಗ್ಗೆ ಹಲವು ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ. ಪ್ರಗತಿ ಶೆಟ್ಟಿ ವಿದ್ಯಾರ್ಹತೆ ಏನು, ಎಲ್ಲಿ ಕೆಲಸ ಮಾಡಿದ್ದರು ಎಂದು ಹುಡುಕಿದ್ದು, ಅವುಗಳಿಗೆ ಉತ್ತರ ಈ ಕೆಳಕಂಡಂತಿದೆ..

ಪ್ರಗತಿ ಶೆಟ್ಟಿ ಮೂಲತಃ ಮಂದಾರ್ತಿಯವರಾಗಿದ್ದು, ಕಾಲೇಜು ವ್ಯಾಸಂಗ ಮಾಡಿದ್ದು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ. ಸಂದರ್ಶನದಲ್ಲಿ ಅವರೇ ಹೇಳಿಕೊಂಡಿರುವ ಪ್ರಕಾರ ಅವರು ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್‌ಸಿ ಮುಗಿಸಿದ ಬಳಿಕ ಕಾಲೇಜಿನಲ್ಲಿ ನಡೆದಿದ್ದ ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಹೀಗೆ ಬಿಎಸ್‌ಸಿ ಮುಗಿಸಿ ಬೆಂಗಳೂರಿಗೆ ಬಂದ ಪ್ರಗತಿ ಶೆಟ್ಟಿ ವಿಪ್ರೊದಲ್ಲಿ ಎರಡರಿಂದ ಮೂರು ವರ್ಷಗಳು ಹಾಗೂ ಐಬಿಎಂನಲ್ಲಿ ಎರಡೂವರೆ ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು.

ಹೀಗೆ ಐಬಿಎಂನಲ್ಲಿ ಕೆಲಸ ನಿರ್ವಹಿಸುವಾಗ 2016ರಲ್ಲಿ ರಿಷಬ್ ಶೆಟ್ಟಿಯನ್ನು ಭೇಟಿಯಾದೆ ಎಂದು ಪ್ರಗತಿ ಶೆಟ್ಟಿ ಹೇಳಿಕೊಂಡಿದ್ದಾರೆ. ಇನ್ನು ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಮೊದಲ ಭೇಟಿ ತುಂಬಾ ಭಿನ್ನವಾಗಿದೆ. ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿ ರಿಕ್ಕಿ ಸಿನಿಮಾವನ್ನು ವೀಕ್ಷಿಸಲು ತೆರಳಿದ್ದ ಪ್ರಗತಿ ಶೆಟ್ಟಿ ಅದೇ ಮೊದಲ ಬಾರಿಗೆ ರಿಷಬ್ ಶೆಟ್ಟಿಯನ್ನು ಭೇಟಿಯಾಗಿದ್ದರು. ಈ ಕುರಿತಾಗಿ ಸಹ ಪ್ರಗತಿ ಶೆಟ್ಟಿ ತಿಳಿಸಿದ್ದರು.

Pragathi Shetty educational qualification and profession before married to Rishab Shetty

ಉಳಿದವರು ಕಂಡಂತೆ ಚಿತ್ರ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದ ಪ್ರಗತಿ ಶೆಟ್ಟಿ ರಿಕ್ಕಿ ನೋಡಲು ಚಿತ್ರಮಂದಿರಕ್ಕೆ ಬಂದು ಸ್ನೇಹಿತೆಯರು ಹೇಳಿದ ಕಾರಣಕ್ಕಾಗಿ ರಿಷಬ್ ಶೆಟ್ಟಿ ಬಳಿ ತೆರಳಿ ಮಾತನಾಡಿ ಸೆಲ್ಫಿ ತೆಗೆದುಕೊಂಡಿದ್ದರು. ಹೌದು, ಎಲ್ಲರೂ ರಕ್ಷಿತ್ ಶೆಟ್ಟಿ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಒಂಟಿಯಾಗಿ ನಿಂತಿದ್ದ ರಿಷಬ್ ಶೆಟ್ಟಿ ಬಳಿ ತೆರಳಿದೆವು ಹಾಗೂ ಅವರೂ ಸಹ ನಮ್ಮ ಊರಿನ ಕಡೆಯವರಾದ ಕಾರಣ ಅವರ ಬಳಿ ನಮ್ಮ ಊರಿನವರು ನೀವು, ಅಲ್ಲಿಂದ ಬಂದು ಚಿತ್ರರಂಗದಲ್ಲಿ ಇಷ್ಟೆಲ್ಲಾ ಮಾಡುತ್ತಿರುವುದು ಹೆಮ್ಮೆ ಎನಿಸುತ್ತೆ ಎಂದು ಹೇಳಿದ್ದೆ, ಅದೇ ಮೊದಲ ಬಾರಿಗೆ ಅವರ ಜತೆ ನಾನು ಮಾತನಾಡಿದ್ದು, ಅವರ ಹೆಸರೂ ಸಹ ತಿಳಿದಿದ್ದು ಎಂದು ಪ್ರಗತಿ ಶೆಟ್ಟಿ ತಿಳಿಸಿದರು.

ಇದಾದ ಬಳಿಕ ರಿಷಬ್ ಶೆಟ್ಟಿ ಪ್ರಗತಿ ಶೆಟ್ಟಿ ಆಡಿದ ಮಾತುಗಳನ್ನು ಮೆಚ್ಚಿಕೊಂಡು ಅವರ ಫೇಸ್‌ಬುಕ್ ಐಡಿ ಹುಡುಕಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಫ್ರೆಂಡ್ ಮಾಡಿಕೊಂಡಿದ್ದರು. ಹೀಗೆ ಸ್ನೇಹಕ್ಕೆ ತಿರುಗಿದ ಪರಿಚಯ ದಿನ ಕಳೆದಂತೆ ಪ್ರೀತಿಗೆ ತಿರುಗಿ ಒಂದೇ ವರ್ಷದಲ್ಲಿ ವಿವಾಹವೂ ಸಹ ಜರುಗಿತು. ಸದ್ಯ ಇಬ್ಬರೂ ಸಹ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದು, ಇಬ್ಬರು ಮಕ್ಕಳಿದ್ದಾರೆ.

More from Filmibeat

English summary
Pragathi Shetty educational qualification and profession before married to Rishab Shetty. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X