For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ ದಂಪತಿಗಳು ಹನಿಮೂನ್ ಗೆ ಎಲ್ಲಿ ಹೋದ್ರು ಗೊತ್ತಾ?

  By Suneetha
  |

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ತಮ್ಮ ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಅವರನ್ನು ಅದ್ಧೂರಿಯಾಗಿ ಮದುವೆಯಾದ ನಂತರ ಅವರು ಹನಿಮೂನ್ ಗೆ ಎಲ್ಲಿ ಹೋಗುತ್ತಾರೆ ಅಂತ ಎಲ್ಲರಿಗೂ ಪ್ರಶ್ನೆ ಅಗಿತ್ತು. ಅದಕ್ಕೆ ಪ್ರಜ್ವಲ್ ಅವರು ಉತ್ತರ ಕೂಡ ನೀಡಿದ್ದಾರೆ.

  ಹೌದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ತನ್ನ ಮುದ್ದಿನ ಮನದನ್ನೆಯ ಜೊತೆ ಹನಿಮೂನ್ ಗೆಂದು ಸೀದಾ ಯುರೋಪ್ ಗೆ ಹಾರಿದ್ದಾರೆ.

  ಈಗಾಗಲೇ ಯುರೋಪ್ ಗೆ ಫ್ಲೈ ಮಾಡಿರುವ ನೂತನ ವಧು-ವರರು, ಹೊರಡುವ ಮುಂಚೆ ಸ್ಯಾಂಡಲ್ ವುಡ್ ನ ತನ್ನ ಗೆಳೆಯರು ಅವಿನಾಶ್, ದಿಗಂತ್, ಗೋಲ್ಡನ್ ಸ್ಟಾರ್ ಗಣೇಶ್, ರವಿಶಂಕರ್, ಜಗ್ಗೇಶ್ ಮುಂತಾದವರೊಂದಿಗೆ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿ, ಸಣ್ಣ ಪಾರ್ಟಿ ಮಾಡುವ ಮೂಲಕ ಇನ್ನು ಖುಷಿ ಹೆಚ್ಚಿಸಿದ್ದಾರೆ.[ನವ ಬಾಳಿಗೆ ಕಾಲಿಟ್ಟ ಪ್ರಜ್ವಲ್ ದೇವರಾಜ್-ರಾಗಿಣಿ]

  ಈಗಾಗಲೇ ಡೈನಾಮಿಕ್ ಪ್ರಿನ್ಸ್ 'ಭುಜಂಗ' ಚಿತ್ರದ ಕೆಲಸಗಳನ್ನು ಸದ್ದಿಲ್ಲದೇ ಮುಗಿಸಿದ್ದು, ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದೆ. ಜೊತೆಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಜೊತೆ ಮಾಡುತ್ತಿರುವ ಹೊಸ ಪ್ರಾಜೆಕ್ಟ್ 'ದಿಲ್ ಕಾ ರಾಜ' ಸಿನಿಮಾದ ಶೂಟಿಂಗ್ ಕೂಡ ಪ್ರಜ್ವಲ್ ದೇವರಾಜ್ ಅವರು ಹನಿಮೂನ್ ನಿಂದ ಹಿಂತಿರುಗಿ ಬಂದಮೇಲೆ ನಡೆಯಲಿದೆ.[ಚಿತ್ರಗಳು; ಪ್ರಜ್ವಲ್ ದೇವರಾಜ್-ರಾಗಿಣಿ ಆರತಕ್ಷತೆಯಲ್ಲಿ ಗಣ್ಯರ ದಂಡು]

  ಡೈನಾಮಿಕ್ ಫ್ಯಾಮಿಲಿಯ ದೊಡ್ಡ ಕುಡಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಅವರೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ, ಗಣ್ಯರ ಸಮ್ಮುಖದಲ್ಲಿ ಅಕ್ಟೋಬರ್ 25 ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು.

  English summary
  Sandalwood's Dynamic Prince Prajwal Devaraj ties the knot with his long-time girlfriend and model-danseuse Ragini Chandran. Party time for Prajwal and his wife Ragini Chandran began a while a trip in South East Asia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X