'ಮಾಫಿಯಾ' ಲೋಕದಲ್ಲಿ ಡೈನಾಮಿಕ್ ಪ್ರಿನ್ಸ್: ಪ್ರಜ್ವಲ್-ಅದಿತಿ ಸಿನಿಮಾಗೆ ಮುಹೂರ್ತ ಫಿಕ್ಸ್

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ನಟಿಸುತ್ತಿರುವ ಸಿನಿಮಾ 'ಮಾಫಿಯಾ'. ಇದು ಪ್ರಜ್ವಲ್ ದೇವರಾಜ್ ವೃತ್ತಿ ಬದುಕಿನಲ್ಲೇ ನಿರ್ಮಾಣ ಆಗಿರುವ ದುಬಾರಿ ಸಿನಿಮಾ ಅನ್ನೋ ಮಾತಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದರಿಂದ ದುಬಾರಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.

ಅಂದ್ಹಾಗೆ 'ಮಾಫಿಯಾ' ಆಕ್ಷನ್ ಪ್ರಿಯರಿಗೆ ಸಖತ್ ಕಿಕ್ ಕೊಡುತ್ತೆ ಅನ್ನೋ ಭರವಸೆಯನ್ನು ಮೂಡಿಸಿದೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ಪೋಸ್ಟರ್‌ಗಳು ಕೂಡ ಹೊಸ ಭರವಸೆಯನ್ನು ಮೂಡಿಸಿವೆ. ಹಾಗೇ 'ಮಾಫಿಯಾ' ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಕೂಡ ಖಡಕ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ‌. ಇದು ಈ ಸಿನಿಮಾ ಪ್ರಜ್ವಲ್ ನಟನೆಯ ಮೂವತ್ತೈದನೇ ಸಿನಿಮಾ ಕೂಡ ಹೌದು.

Prajwal Devaraj and Aditi Prabhudeva movie Mafia

ಇನ್ನು ಈ ಸಿನಿಮಾವನ್ನು ಬೆಂಗಳೂರು ಕುಮಾರ್ ಫಿಲಂಸ್ ಬ್ಯಾನರ್‌ನಲ್ಲಿ ಕುಮಾರ್ ಬಿ ನಿರ್ಮಿಸಿದ್ದಾರೆ. ಇಷ್ಟು ದಿನ ಸದ್ದಿಲ್ಲದೆ 'ಮಾಫಿಯಾ'ದೊಳಗೆ ಮುಳುಗಿ ಹೋಗಿದ್ದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮಾಸ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವುದಕ್ಕೆ ಸಜ್ಜಾಗಿದ್ದಾರೆ. ಹೌದು, ಈ ಸಿನಿಮಾ ಜುಲೈ 26ರಂದು ಅದ್ಧೂರಿಯಾಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಇನ್ನು ಪ್ರಜ್ವಲ್ ದೇವರಾಜ್ ಜೊತೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಈ ಮಾಸ್ ಸಬ್ಜೆಕ್ಟ್ ಅನ್ನು ಲೋಹಿತ್ ಹೆಚ್ ನಿರ್ದೇಶಿಸಿದ್ದಾರೆ. ಬಹು ನಿರೀಕ್ಷಿತ 'ಮಾಫಿಯಾ' ಸಿನಿಮಾ ಆರಂಭದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದ ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

ಆಕ್ಷನ್ ಜಾನರ್ ಕಥಾಹಂದರ ಹೊಂದಿರುವ 'ಮಾಫಿಯಾ' ಸಿನಿಮಾವನ್ನು ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ದುಬಾರಿ ವೆಚ್ಚದ ಈ ಸಿನಿಮಾದಲ್ಲಿ ಸುಮಾರು ಐದು ಸಾಹಸ ದೃಶ್ಯಗಳು ಇವೆ. ಈ ಆಕ್ಷನ್ ಸೀಕ್ವೆನ್ಸ್‌ಗಾಗಿ ಪ್ರಜ್ವಲ್ ದೇವರಾಜ್ ಸಾಕಷ್ಟು ಶ್ರಮವಹಿಸಿದ್ದಾರೆ.

ಈ ಸಿನಿಮಾದಲ್ಲಿ ಬರುವ ನಾಲ್ಕು ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಎಸ್ ಪಾಂಡಿಕುಮಾರ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ರಜ್ವಲ್ ದೇವರಾಜ್ ಹಲವು ತಿಂಗಳುಗಳಿಂದ ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಇದು 35ನೇ ಸಿನಿಮಾ ಆಗಿದ್ದರಿಂದ ನಿರೀಕ್ಷೆ ಹೆಚ್ಚಿದೆ. ಥಿಯೇಟರ್‌ಗಳಿಗೆ ಸಿನಿಮಾನೂ ಬರುತ್ತಿಲ್ಲ. ಪ್ರೇಕ್ಷಕರೂ ಬರುತ್ತಿಲ್ಲ ಅನ್ನೋ ಸಮಯದಲ್ಲಿ 'ಮಾಫಿಯಾ' ರಿಲೀಸ್ ಮುಂದಾಗಿದೆ. ಹೀಗಾಗಿ ಪ್ರಜ್ವಲ್ ದೇವರಾಜ್ ಸಿನಿಮಾ ಏನಾದರೂ ಮೋಡಿ ಮಾಡುತ್ತಾ ಎಂದು ಎದುರು ನೋಡುತ್ತಿದ್ದಾರೆ.

More from Filmibeat

English summary
Prajwal Devaraj and Aditi Prabhudeva starrer Mafia movie releasing on July 26th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X