ಆಗಸ್ಟ್ 2ಕ್ಕೆ ಪ್ರಜ್ವಲ್, ಆಗಸ್ಟ್ 9ಕ್ಕೆ ಶ್ರೀಮುರಳಿ ಸರ್ಪ್ರೈಸ್
Recommended Video
ಆಗಸ್ಟ್ ತಿಂಗಳಲ್ಲಿ ಸಾಕಷ್ಟು ಸರ್ಪ್ರೈಸ್ ಸುದ್ದಿಗಳಿವೆ. ಆಗಸ್ಟ್ 9 ರಂದು ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗ್ತಿದೆ. ಅದೇ ದಿನ ಕೋಮಲ್ ಅಭಿನಯದ ಕೆಂಪೇಗೌಡ 2 ತೆರೆಕಾಣುತ್ತೆ ಎಂದು ಪ್ರಕಟಿಸಿದೆ. ಆಗಸ್ಟ್ 15 ರಂದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ಬರಲಿದೆ.
ಇದೀಗ, ಆಗಸ್ಟ್ ತಿಂಗಳಿಗೆ ಮತ್ತೆರಡು ಸಂಭ್ರಮ ಸೇರಿಕೊಂಡಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಕಡೆಯಿಂದ ಪ್ರತ್ಯೇಕವಾಗಿ ಸರ್ಪ್ರೈಸ್ ಸಿಗಲಿದೆ.

ಹೌದು, ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಸಿನಿಮಾದ ಟ್ರೈಲರ್ ಆಗಸ್ಟ್ 2 ರಂದು ಬರ್ತಿದೆ. ಶಂಕರ್ ನಿರ್ದೇಶನದ ಈ ಚಿತ್ರವನ್ನ ರಾಮು ನಿರ್ಮಿಸಿದ್ದಾರೆ.
ಬಳಿಕ ಆಗಸ್ಟ್ 9 ರಂದು ಶ್ರೀಮುರಳಿ ನಟನೆಯ ಭರಾಟೆ ಚಿತ್ರದ ಮೊದಲ ಹಾಡು ಅಧಿಕೃತವಾಗಿ ಹೊರಬೀಳಲಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮೊದಲ ಹಾಡು ರಿಲೀಸ್ ಮಾಡುತ್ತಿದೆ ಚಿತ್ರತಂಡ.

ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಈಗಾಗಲೇ ಟೀಸರ್ ಹಾಗೂ ಮೇಕಿಂಗ್ ಮೂಲಕ ಭರಾಟೆ ಸಖತ್ ಸದ್ದು ಮಾಡ್ತಿದೆ. ಶ್ರೀಮುರಳಿ ಮತ್ತು ಶ್ರೀಲೀಲಾ ಈ ಚಿತ್ರದಲ್ಲಿ ನಟಿಸಿದ್ದು, ಬಹುದ್ಧೂರ್ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











