For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಅರ್ಜುನ್ ಗೌಡ ಆಗಲಿರುವ ಪ್ರಜ್ವಲ್

  By Pavithra
  |

  ಅರ್ಜುನ್ ಅನ್ನವ ಹೆಸರು ಸದ್ಯ ಸಿನಿಮಾ ಪ್ರೇಮಿಗಳ ಕಿವಿಗೆ ಬಿದ್ದರೇ ಸಾಕು ಅರ್ಜುನ್ ರೆಡ್ಡಿ ಸಿನಿಮಾವನ್ನ ಕನ್ನಡದಲ್ಲಿ ಮಾಡುತ್ತಾರಾ? ಎನ್ನುವ ಪ್ರಶ್ನೆಗಳನ್ನ ಕೇಳುತ್ತಾರೆ. ಅರ್ಜುನ್ ರೆಡ್ಡಿ ಟೈಟಲ್ ಗೆ ಹತ್ತಿರವಾಗುವಂತ ಶೀರ್ಷಿಕೆಯಲ್ಲಿ ಕನ್ನಡದ ಸಿನಿಮಾ ಆರಂಭ ಆಗ್ತಿದೆ.

  ಅರ್ಜುನ್ ಗೌಡ ಎನ್ನುವ ಹೆಸರಿನಲ್ಲಿ ಚಿತ್ರ ಸೆಟ್ಟೇರಲು ತಯಾರಾಗಿದ್ದು ಅರ್ಜುನ್ ಆಗಿ ಪ್ರಜ್ವಲ್ ದೇವರಾಜ್ ಅಭಿನಯ ಮಾಡುತ್ತಿದ್ದಾರೆ. ಚುನಾವಣೆಯ ನಂತರ ಚಿತ್ರ ಸೆಟ್ಟೇರಲಿದ್ದು ನಿರ್ದೇಶಕ ಲಕ್ಕಿ ಶಂಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಂಪ್ಲೀಟ್ ಆಕ್ಷನ್ ಲವ್ ಸ್ಟೋರಿ ಇದಾಗಿರಲಿದ್ದು ಅರ್ಜುನ್ ರೆಡ್ಡಿ ಸಿನಿಮಾಗೂ ಅರ್ಜುನ್ ಗೌಡ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಅಂತರೆ ನಿರ್ದೇಶಕರು.

  ದರ್ಶನ್ ಮನೆಯಲ್ಲಿ ಸ್ಟಾರ್ ನಟರ ಜಾತ್ರೆ: ಕಾರಣವೇನು?ದರ್ಶನ್ ಮನೆಯಲ್ಲಿ ಸ್ಟಾರ್ ನಟರ ಜಾತ್ರೆ: ಕಾರಣವೇನು?

  ಚಿತ್ರದಲ್ಲಿ ಮುಗ್ಧ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಾಯಕಿಯ ಹುಡುಕಾಟ ಶುರುವಾಗಿದ್ದು ಕೋಟಿ ರಾಮು ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಜೈ ಆನಂದ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದು ಧರ್ಮ ವಿಶ್ ಅವರ ಸಂಗೀತ ಸಿನಿಮಾಗಿರಲಿದೆ. ವಿಶೇಷ ಎಂದರೆ ಪ್ರಜ್ವಲ್ ದೇವರಾಜ್ ಮೂರು ಗೆಟಪ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

  'ಲಾಕಪ್ ಡೆತ್', 'ಎಕೆ 47', 'ಕಲಾಸಿಪಾಳ್ಯ', 'ಶಕ್ತಿ' ಈ ಸಿನಿಮಾಗಳ ಸಾಲಿಗೆ ಅರ್ಜುನ್ ಗೌಡ ಕೂಡ ಸೇರಿಕೊಳ್ಳಲಿದ್ದು ಹೈ-ಬಜೆಟ್ ನಲ್ಲಿ ಚಿತ್ರವನ್ನ ನಿರ್ಮಾಣ ಮಾಡಲು ನಿರ್ಮಾಪಕರು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಆಕ್ಷನ್ ಸೀನ್ ಗಳು ಇರಲಿದೆಯಂತೆ. ಇದೇ ತಿಂಗಳ ಅಂತ್ಯದ ಒಳಗೆ ಸಿನಿಮಾ ಮುಹೂರ್ತ ಮಾಡಿ ಶೂಟಿಂಗ್ ಕೂಡ ಆರಂಭ ಮಾಡಲಿದ್ದಾರೆ.

  ಪುಷ್ಪಕ ವಿಮಾನ ಏರಿದ ಪ್ರಜ್ವಲ್ ದೇವರಾಜ್ಪುಷ್ಪಕ ವಿಮಾನ ಏರಿದ ಪ್ರಜ್ವಲ್ ದೇವರಾಜ್

  English summary
  Kannada Prajwal Devaraj is acting as hero in Arjun Gowda movie.The movie is directed by Lucky Shankar. Ramu is producing a movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X