ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ 'ಗೋಕುಲ ಕೃಷ್ಣ' ಬಿಡುಗಡೆ

ಪ್ರಜ್ವಲ್ ದೇವರಾಜ್ ಅಭಿನಯದ 'ಗೋಕುಲ ಕೃಷ್ಣ' ಚಿತ್ರವು ನಾಳೆ, ಅಂದರೆ 19 ಅಕ್ಟೋಬರ್ 2012 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪ್ರಜ್ವಲ್ ಜೋಡಿಯಾಗಿ ಅನನ್ಯ ನಟಿಸಿದ್ದಾರೆ. 'ಗೋಕಲು ಕೃಷ್ಣ' ಚಿತ್ರವನ್ನು ಜಯ ಕಣ್ಣನ್ ನಿರ್ದೇಶಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಪಿ ಶೇಖರ್ ಗೌಡ. ಚಿತ್ರಕ್ಕೆ ಎಸ್ ಎ ರಾಜಶೇಖರ್ ಸಂಗೀತ ನೀಡಿರುವುದು ವಿಶೇಷ. ಚಿತ್ರವು 75 ಕ್ಕಿಂತ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆ ಕಾಣಲಿದೆ.

ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷತ ಚಿತ್ರ 'ಸಾಗರ್', ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. ಆ ಚಿತ್ರದಲ್ಲಿ ಪ್ರಜ್ವಲ್ ಅಭಿನಯ ಚೆನ್ನಾಗಿದ್ದರೂ ಚಿತ್ರದ ನಿರೂಪಣೆ ಜನರಿಗೆ ಇಷ್ಟವಾಗಲಿಲ್ಲ. ಒಟ್ಟಿನಲ್ಲಿ 'ಸಾಗರ್' ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಚಿತ್ರ ಎನಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಾಳೆ ಬಿಡುಗಡೆಯಾಗಲಿರುವ ಗೋಕುಲ ಕೃಷ್ಣ', ಪ್ರಜ್ವಲ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಪತ್ರಿಕಾ ಜಾಹೀರಾತಿನಲ್ಲಿ 'ನ್ಯೂ ಲುಕ್ ಇನ್ ದ ಹಿಸ್ಟರಿ ಆಫ್ ಲವ್' ಎಂಬ ಸ್ಲೋಗನ್ ಹೊಂದಿರುವ ಈ ಚಿತ್ರಕ್ಕೆ ಟ್ಯಾಗ್ ಲೈನ್ ಇಲ್ಲ. ಈ ಚಿತ್ರದಲ್ಲಿ ದೊಡ್ಡಣ್ಣ, ಜೈಜಗದೀಶ್, ಭವ್ಯ, ಸಾಧುಕೋಕಿಲ, ಸಂಗೀತ, ಸುರೇಶ್ಚಂದ್ರ ಮುಂತಾದ ಬಹಳಷ್ಟು ಹಿರಿಯ ಕಲಾವಿದರುಗಳು ನಟಿಸಿದ್ದಾರೆ. ಮಾಲೂರು ಶ್ರೀನಿವಾಸ್ ನೃತ್ತಯ ಸಂಯೋಜನೆ ಚಿತ್ರಕ್ಕಿದ್ದು ಡಿಫರೆಂಟ್ ಡ್ಯಾನಿ ಸಾಹಸವಿದೆ. ಎಸ್ ಎ ರಾಜಶೇಖರ್ ಸಂಗೀತದ ಹಾಡುಗಳು ಈಗಾಗಲೇ ಜನಮನ ಗೆದ್ದಿವೆ.

ಅಂದಹಾಗೆ, ಪ್ರಜ್ವಲ್ ದೇವರಾಜ್ ಸದ್ಯಕ್ಕೆ 'ದಿಲ್ ಕಾ ರಾಜಾ' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇತ್ತೀಚಿಗಷ್ಟೇ 'ಗಲಾಟೆ' ಮುಗಿಸಿರುವ ದೇವರಾಜ್, 'ಜಿದ್ದಿ' ಎಂಬ ಇನ್ನೊಂದು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಸದ್ಯಕ್ಕೆ ಪ್ರಜ್ವಲ್ ಅಕೌಂಟಿನಲ್ಲಿ ಆರೇಳು ಚಿತ್ರಗಳಿದ್ದು ಯಾವ ಚಿತ್ರ ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ನಾಳೆ ಪ್ರಜ್ವಲ್, ತಮ್ಮ ಅಭಿಮಾನಿಗಳಿಗೆ 'ಗೋಕುಲ ಕೃಷ್ಣ'ನಾಗಿ ದರ್ಶನ ನೀಡಲಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Dynamic Prince Prajwal Devaraj acted 'Gokula Krishna' titeld movie to release Tomorrow, on 19th October 2012. Jaya Kannan directed this movie is produced by P Shekar Gowda. Ananya is Heroine for this move and SA Rajshekar composed the Music. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X