ವಿಷ್ಣು ಅಭಿಮಾನಿಯಾದ ಪ್ರಜ್ವಲ್: 'ವೀರಂ' ಶೀರ್ಷಿಕೆ ಬಿಡುಗಡೆ ಮಾಡಿದ ದರ್ಶನ್
Recommended Video
ಡಾ ವಿಷ್ಣುವರ್ಧನ್ ಅವರು ಹುಟ್ಟುಹಬ್ಬದ ಪ್ರಯುಕ್ತ ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಹೊಸ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡೈನಾಮಿಕ್ ಅವರ ಮುಂದಿನ ಚಿತ್ರಕ್ಕೆ ವೀರಂ ಎಂದು ಹೆಸರಿಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟೈಟಲ್ ಹಾಗೂ ಫಸ್ಟ್ ಟೀಸರ್ ರಿಲೀಸ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ, ಪ್ರಜ್ವಲ್ ಕೈ ಮೇಲೆ ವಿಷ್ಣು ದಾದಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಈ ಚಿತ್ರವನ್ನ ಖಾದರ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಇದು ಇವರಿಗೆ ಮೊದಲ ಸಿನಿಮಾ. ಖಾದರ್ ಕುಮಾರ್ ಕೂಡ ವಿಷ್ಣುವರ್ಧನ್ ಅವರ ಅಭಿಮಾನಿ ಎನ್ನುವುದು ಗಮನಾರ್ಹ.

ಈ ಹಿಂದೆ ಹರಿಪ್ರಿಯಾ ಮತ್ತು ಸುಮಲತಾ ನಟಿಸಿದ್ದ ಡಾಟರ್ ಆಫ್ ಪಾರ್ವತಮ್ಮ ಚಿತ್ರ ನಿರ್ಮಿಸಿದ್ದ ದಿಶಾ ಎಂಟರ್ ಟೈನ್ ಮೆಂಟ್ ಸಂಸ್ಥೆ ವೀರಂ ಚಿತ್ರಕ್ಕೆ ಬಂಡವಾಳ ಹಾಕಿದೆ.
ನರಸಿಂಹ ಗೌಡ ನಿರ್ದೇಶನದ 'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾ ಹಾಗೂ ಲಕ್ಕಿ ಶಂಕರ್ ನಿರ್ದೇಶನದ 'ಅರ್ಜುನ್ ಗೌಡ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ ಜಂಟಲ್ ಮ್ಯಾನ್ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದಾದ ಬಳಿಕ ರಾಮ್ ನಾರಾಯಣ್ ಮತ್ತು ಪಿಸಿ ಶೇಖರ್ ಅವರ ಚಿತ್ರಗಳಲ್ಲೂ ಅಭಿನಯಿಸಲಿದ್ದಾರೆ.


Click it and Unblock the Notifications











