twitter
    For Quick Alerts
    ALLOW NOTIFICATIONS  
    For Daily Alerts

    'ಕೃಷ್ಣ'ನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರಿಟ್ಟ 'ಅರ್ಜುನ': ಚಿರುಗೆ ಪ್ರಜ್ವಲ್ ನೋವಿನ ವಿದಾಯ

    |

    ಚಿರಂಜೀವಿ ಸರ್ಜಾಗೆ ಚಿತ್ರರಂಗದಲ್ಲಿ ನೂರಾರು ಗೆಳೆಯರು. ಅದರಲ್ಲಿಯೂ ಚಿತ್ರರಂಗದ ಅನೇಕ ಕಲಾವಿದರ ಮಕ್ಕಳು ಒಂದಿಲ್ಲೊಂದು ರೀತಿಯಲ್ಲಿ ಅವರೊಂದಿಗೆ ಒಡನಾಟ ಇರಿಸಿಕೊಂಡಿದ್ದವರು. ಅವರಲ್ಲಿ ಅನೇಕರು ಕಲಾವಿದರಾಗಿಯೂ ಬಣ್ಣ ಹಚ್ಚಿದರು. ಅವರ ಪೈಕಿ ಚಿರಂಜೀವಿಗೆ ಆತ್ಮೀಯರಾಗಿದ್ದವರಲ್ಲಿ ಪ್ರಜ್ವಲ್ ದೇವರಾಜ್ ಒಬ್ಬರು.

    Recommended Video

    ಮುದ್ದಿನ್ನ ಮೊಮ್ಮಗನ ಬಾಯಿಗೆ ಚಿನ್ನದ ಮೂಗುತಿ ಹಾಕಿದ ಅಜ್ಜಿ | Chirus Granny

    ಚಿರಂಜೀವಿ ಅವರಿಗಿಂತ ವಯಸ್ಸಿನಲ್ಲಿ ಕಿರಿಯವರಾದರೂ ಅವರಲ್ಲಿ ಸಹೋದರರ ಆಪ್ತತೆ ಇತ್ತು. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕೆಂಬ ಆಸೆಯನ್ನೂ ಹೊಂದಿದ್ದರು. ಆದರೆ ಕೊನೆಗೂ ಅದು ನೆರವೇರಲಿಲ್ಲ ಎಂಬ ನೋವು ಪ್ರಜ್ವಲ್ ಅವರಲ್ಲಿ ಉಳಿದುಕೊಂಡಿದೆ. ತಮಾಷೆಯಾಗಿ ಹರಟುತ್ತಿದ್ದೆವು, ನನ್ನಮ್ಮ ಮಾಡುತ್ತಿದ್ದ ಮಟನ್ ಅಡುಗೆಯೆಂದರೆ ಆತನಿಗೆ ಬಹಳ ಇಷ್ಟ ಎಂದು ಪ್ರಜ್ವಲ್ ಭಾವುಕರಾಗಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ....

    ನನಗೆ ಅಣ್ಣನಿದ್ದಂತೆ

    ನನಗೆ ಅಣ್ಣನಿದ್ದಂತೆ

    'ನಾವು ಚಿಕ್ಕಂದಿನಿಂದಲೂ ಜತೆಗೆ ಬೆಳೆದಿದ್ದವರು. ಇಬ್ಬರ ನಡುವೆ ನಾಲ್ಕೈದು ವರ್ಷದ ವ್ಯತ್ಯಾಸ. ಆದರೆ ಇಬ್ಬರಲ್ಲಿಯೂ ಆತ್ಮೀಯತೆ ಬೆಳೆದಿದ್ದು ಇಮ್ರಾನ್ ಸರ್ದಾರಿಯಾ ಅವರ ನೃತ್ಯ ಶಾಲೆಯಲ್ಲಿ. ದಶಕದ ಹಿಂದೆ ಕ್ಲಾಸ್‌ನಲ್ಲಿ ಚಿರು ಸೀನಿಯರ್ ಆಗಿದ್ದರೆ, ನಾನು ಅತಿ ಕಿರಿಯವನಾಗಿದ್ದೆ. ಚಿರು ನನಗೆ ಅಣ್ಣನಿದ್ದಂತೆ. ನಾವು ಯಾವಾಗಲೂ ಒಟ್ಟಿಗೆ ಸುತ್ತಾಡಲು ಹೋಗುತ್ತಿದ್ದೆವು. ಇಬ್ಬರೂ ಸಿನಿಮಾ ರಂಗಕ್ಕೆ ಕಾಲಿಟ್ಟ ಬಳಿಕ ಮತ್ತಷ್ಟು ಹತ್ತಿರವಾದೆವು.

    'ಚಿರು' ಜತೆ ಮೊದಲ ಚಿತ್ರದಲ್ಲಿ ನಟಿಸಿದ್ದ ಕೃತಿ ಕರಬಂಧ ಭಾವುಕ ಮಾತು'ಚಿರು' ಜತೆ ಮೊದಲ ಚಿತ್ರದಲ್ಲಿ ನಟಿಸಿದ್ದ ಕೃತಿ ಕರಬಂಧ ಭಾವುಕ ಮಾತು

    ಕೃಷ್ಣ-ಅರ್ಜುನರಾಗಿದ್ದೆವು

    ಕೃಷ್ಣ-ಅರ್ಜುನರಾಗಿದ್ದೆವು

    ನಾನು ಬಹಳ ಮೃದು ಸ್ವಭಾವದವನಾಗಿದ್ದು, ಕಠಿಣವಾಗಬೇಕು ಎಂದು ಅವರು ಸದಾ ಸಲಹೆ ನೀಡುತ್ತಿದ್ದರು. ಚಿತ್ರರಂಗದಲ್ಲಿ ಇಷ್ಟು ಒಳ್ಳೆತನ ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ಈ ಆತ್ಮೀಯತೆ ಕಾರಣದಿಂದ ನಾನು ತಮಾಷೆಯಾಗಿ ಅವರನ್ನು ಕೃಷ್ಣ ಎಂದು ಕರೆದರೆ ನಾನು ಅರ್ಜುನನಾಗಿದ್ದೆ. ಪನ್ನಗಾಭರಣ ನಮ್ಮಿಬ್ಬರನ್ನೂ ಹಾಕಿಕೊಂಡು ಸಿನಿಮಾ ಮಾಡಲು ಬಯಸಿದ್ದರು. ಅದಕ್ಕೆ 'ಕೃಷ್ಣ-ಅರ್ಜುನ' ಎಂದೇ ಹೆಸರಿಡಲು ತೀರ್ಮಾನಿಸಿದ್ದರು.

    ಹೊರ ಹೋದಾಗಲೆಲ್ಲ ಗುಂಪು ಇರುತ್ತಿತ್ತು

    ಹೊರ ಹೋದಾಗಲೆಲ್ಲ ಗುಂಪು ಇರುತ್ತಿತ್ತು

    ಚಿರು ಯಾವಾಗಲೂ ಮನೆಯಿಂದ ಹೊರ ಹೋಗಲು ಬಯಸುವವರಲ್ಲ. ಹಾಗೆ ಒಮ್ಮೆ ಹೊರಟರೆ ತನ್ನ ಸುತ್ತಲೂ ಗೆಳೆಯರ ತಂಡವನ್ನು ಸೇರಿಸಿಕೊಳ್ಳುತ್ತಿದ್ದರು. ನಾನು ಆ ಗುಂಪಿನ ಭಾಗವಾಗಿರುತ್ತಿದ್ದೆ. ನಾವೆಲ್ಲ ಒಂದೇ ಕುಟುಂಬದವರಂತೆ ಇದ್ದೆವು. ಚಿರು ಬಹಳ ಆರೋಗ್ಯವಂತರಾಗಿದ್ದರು.

    'ನಗುತಲಿರು..' ಎಂದು ಕೊನೆಯದಾಗಿ ಹೇಳಿದ್ದ ಚಿರು, ಅಳು ಉಳಿಸಿ ಹೋದರು'ನಗುತಲಿರು..' ಎಂದು ಕೊನೆಯದಾಗಿ ಹೇಳಿದ್ದ ಚಿರು, ಅಳು ಉಳಿಸಿ ಹೋದರು

    ಖುಷಿಯಾಗಿರುವಂತೆ ನೋಡಿಕೊಳ್ಳುತ್ತಿದ್ದರು

    ಖುಷಿಯಾಗಿರುವಂತೆ ನೋಡಿಕೊಳ್ಳುತ್ತಿದ್ದರು

    ಚಿರು ಜೀವನವನ್ನು ತುಂಬಾ ಪ್ರೀತಿಸುತ್ತಿದ್ದರು. ಹಾಗೆಯೇ ಯಾವಾಗಲೂ ನಗುತ್ತಾ, ಬಗೆ ಬಗೆಯ ಅಡುಗೆಗಳನ್ನು ಸೇವಿಸುತ್ತಾ ಖುಷಿಯಿಂದ ಇರುತ್ತಿದ್ದರು. ಇತ್ತೀಚೆಗಷ್ಟೇ ನನ್ನ ಅಮ್ಮ ಮಟನ್ ಚಾಪ್ಸ್ ಮಾಡಿ, ಅದು ಚಿರುಗೆ ಇಷ್ಟ ಎಂದು ಕಳುಹಿಸಿದ್ದರು. ಯಾವಾಗಲೂ ಉತ್ಸಾಹದಿಂದ ಪುಟಿಯುತ್ತಿದ್ದ ಚಿರು, ತಮ್ಮ ಜತೆಗಿರುವವರೂ ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತಿದ್ದರು ಎಂದು ಪ್ರಜ್ವಲ್ ನೆನಪಿಸಿಕೊಂಡಿದ್ದಾರೆ.

    'ಚಿರುನ ಕಷ್ಟಪಟ್ಟು ಪಡೆದಿದ್ದೆ' ಬಿಕ್ಕಿ ಬಿಕ್ಕಿ ಅಳುತ್ತಿರುವ ಮೇಘನಾ'ಚಿರುನ ಕಷ್ಟಪಟ್ಟು ಪಡೆದಿದ್ದೆ' ಬಿಕ್ಕಿ ಬಿಕ್ಕಿ ಅಳುತ್ತಿರುವ ಮೇಘನಾ

    English summary
    Prajwal Devaraj said he used to call Chiranjeevi Sarja as Krishna and himslef as Arjuna. They grew together like borthers.
    Monday, June 8, 2020, 23:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X