ರಾಗಿಣಿ ದ್ವಿವೇದಿ 'ಇ-ಮೇಲ್' ರಿವೀಲ್ ಮಾಡಿದ ಪ್ರಜ್ವಲ್ ದೇವರಾಜ್;

By ಫಿಲ್ಮಿಬೀಟ್ ಡೆಸ್ಕ್

ರಾಗಿಣಿ ದ್ವಿವೇದಿ ಚಿತ್ರರಂಗದಲ್ಲಿ ಹೊಸದಾಗಿ ಎರಡನೇ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ. ಈ ಬಾರಿ ರಾಗಿಣಿ ಸಿನಿಮಾಗಳನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ರಾಗಿಣಿ ನಟಿಸಿದ ಹೊಸ ಸಿನಿಮಾಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿವೆ.

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಸಿನಿಮಾ 'ಇ-ಮೇಲ್' ಹಲವು ದಿನಗಳಿಂದ ಸದ್ದು ಮಾಡುತ್ತಿದೆ. ಎಸ್ ಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ರಾಗಿಣಿ ದ್ವಿವೇದಿ ಲೀಡ್ ರೋಲ್‌ನಲ್ಲಿರುವ ಈ ಸಿನಿಮಾ ತಮಿಳು ಹಾಗೂ ಕನ್ನಡ ಎರಡೂ ಭಾಷೆಗಳಲ್ಲೂ ನಿರ್ಮಾಣ ಆಗಿದೆ.

Prajwal Devaraj Revealed Ragini Dwivedi Starrer Email movie first look

ಸದ್ಯಕ್ಕೀಗ ರಾಗಿಣಿಯ 'ಇ-ಮೇಲ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಸಿನಿಮಾದ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿ ಶುಭ ಹಾರೈಸಿದ್ದಾರೆ. 'ಇ-ಮೇಲ್' ಸಿನಿಮಾದ ಫಸ್ಟ್ ಲುಕ್‌ಗೆ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಇ-ಮೇಲ್' ಇದೊಂದು ಪಕ್ಕಾ ಮಹಿಳಾ ಪ್ರಧಾನ ಸಿನಿಮಾ. ಈ ಸಿನಿಮಾದಲ್ಲಿ ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ರೆ, ಇವರೊಂದಿಗೆ ಮುರುಗ ಅಶೋಕ್, ಮನೋಬಲ,'ಜೈಲರ್' ಸಿನಿಮಾದಲ್ಲಿ ನಟಿಸಿರೋ ಬಿಲ್ಲಿ, 'ಲೊಳ್ಳುಸಭಾ' ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ರಾಮ್ ಸನ್ನಿ, ನಯನಾ ಚೌಹಾನ್, ಶೈಲಜಾ, ಶ್ವೇತಾ, ತೇಜಸ್ವಿನಿ, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ, ಮುಂತಾದವರು 'ಇ-ಮೇಲ್' ಸಿನಿಮಾದಲ್ಲಿ ನಟಿಸಿದ್ದಾರೆ. ಬಹುತೇಕ ಕನ್ನಡ ಕಲಾವಿದರೆ ಈ ಚಿತ್ರದಲ್ಲಿ ನಟಿಸಿರೋದು ವಿಶೇಷ.

ಅಂದ್ಹಾಗೆ, ಎಸ್ ಆರ್ ಫಿಲಂ ಫ್ಯಾಕ್ಟರಿ ತಮಿಳಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಬ್ಯಾನರ್‌ನಲ್ಲಿ ಎಸ್ ಆರ್ ರಾಜನ್ 'ಇ-ಮೇಲ್' ಸಿನಿಮಾವನ್ನು ನಿರ್ಮಿಸಿದ್ದಷ್ಟೇ ಅಲ್ಲದೆ, ನಿರ್ದೇಶನ ಕೂಡ ಮಾಡಿದ್ದಾರೆ. ಈ ಚಿತ್ರದಲ್ಲಿ ಸುಮಧುರ ಹಾಡುಗಳಿದ್ದು ಜುಬಿನ್ ಹಾಗೂ 'ಐ ಲವ್ ಯು' ಚಿತ್ರದ ಖ್ಯಾತಿಯ ಕಿರಣ್ ತೊಟಂಬೈಲ್(ಕನ್ನಡ) ಸಂಗೀತ ನೀಡಿದ್ದಾರೆ. ಕನ್ನಡದ ಹಾಡುಗಳನ್ನು ಸಂತೋಷ್ ನಾಯಕ್ ಬರೆದಿದ್ದಾರೆ. ಮಾಸ್ ಮಾದ , ಬೀರ್ ಮಾಸ್ಟರ್ ಹಾಗೂ ಫಯಾಸ್ ಖಾನ್ ಸಾಹಸ ನಿರ್ದೇಶನ ಹಾಗೂ ಸೆಲ್ವಂ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಗೋವಾ ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ. ಸದ್ಯ 'ಇ-ಮೇಲ್' ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ಎರಡು ಭಾಷೆಗಳಲ್ಲಿ ಅಂದರೆ, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

More from Filmibeat

English summary
Prajwal Devaraj Revealed Ragini Dwivedi Starrer Email movie first look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X