'ಜಂಟಲ್ ಮನ್' ಸಿನಿಮಾ ರೆಕಾರ್ಡ್ ಮಾಡಿ ಫೇಸ್ ಬುಕ್ ನಲ್ಲಿ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ದೂರು
ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮನ್ ಸಿನಿಮಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿನಿಮಾ ರಿಲೀಸ್ ಆಗಿ ನಾಲ್ಕು ತಿಂಗಳುಗಳಾಗಿದೆ ಅಷ್ಟೆ. ಆಗಲೆ ಸಿನಿಮಾ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. ಕಿಡಿಗೇಡಿಗಳು ಸಿನಿಮಾವನ್ನು ರೆಕಾರ್ಡ್ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದಾರೆ.
Recommended Video
ಇತ್ತೀಚಿಗೆ ಸಿನಿಮಾ ಟಿವಿಯಲ್ಲಿ ಪ್ರಾಸವಾಗಿತ್ತು. ಸಂಪೂರ್ಣ ಸಿನಿಮಾವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಪ್ಪು ರಾಜರತ್ನ, ಅಭಿ ಗೌಡ ಎನ್ನುವವರ ಫೇಸ್ ಬುಕ್ ಖಾತೆಯಿಂದ ಸಿನಿಮಾ ಅಪ್ ಲೋಡ್ ಆಗಿದೆ. ಸಿನಿಮಾವನ್ನು ಶೇರ್ ಮಾಡುವುದು ಕಾನೂನು ಬಾಹಿರವಾಗಿದ್ದು, ಕಿಡಿಗೇಡಿಗಳ ವಿರುದ್ಧ ಗೂಂಡ ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸ ಬಹುದು.
ಜಂಟಲ್ ಮೆನ್ ಸಿನಿಮಾದ ನಿರ್ಮಾಪಕ ಗುರುದೇಶಪಾಂಡೆ ಸಿನಿಮಾ ಶೇರ್ ಮಾಡಿದ ಕಿಡಿಗೇಡಿಗಳ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡಲಿದ್ದಾರೆ. ಸಿನಿಮಾ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಶೇರ್ ಮಾಡಿದ್ದಾರೆ. ಎಲ್ಲರಿಗೂ ಈಗ ಸಂಕಷ್ಟ ಎದುರಾಗಿದೆ.

ಜಂಟಲ್ ಮನ್ ಜಡೇಶ್ ಕುಮಾರ್ ಹಂಪಿ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಮಿಂಚಿದ್ದಾರೆ. ಪ್ರಜ್ವಲ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ. ಇನ್ನೂ ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











