'ಇನ್ಸ್ ಪೆಕ್ಟರ್ ವಿಕ್ರಂ' ರಿಲೀಸ್ ಡೇಟ್ ಫಿಕ್ಸ್: ದರ್ಶನ್ ಪಾತ್ರದ ಬಗ್ಗೆ ಪ್ರಜ್ವಲ್ ಹೇಳಿದ್ದೇನು?
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಸ್ಯಾಂಡಲ್ ವುಡ್ ನಲ್ಲೀಗ ಒಂದೊಂದೆ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಚಿತ್ರಮಂದಿರದ ಅಂಗಳಕ್ಕೆ ಬರಲು ಸಜ್ಜಾಗುತ್ತಿದ್ದಾರೆ. ಸಂಕ್ರಾಂತಿ ಬಳಿಕ ಚಂದನವನದಲ್ಲಿ ಸಿನಿಮಾ ಸುಗ್ಗಿ ಪ್ರಾರಂಭವಾಗಿದೆ ಎಂದರೆ ತಪ್ಪಾಗಲ್ಲ.
ಇತ್ತೀಚಿಗಷ್ಟೆ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಈಗ ಪ್ರಜ್ವಲ್ ನಟನೆಯ ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹಾಡುಗಳ ಮೂಲಕ ಮೋಡಿ ಮಾಡುತ್ತಿದ್ದ ಈ ಸಿನಿಮಾ ಈಗ ಚಿತ್ರಮಂದಿರದ ಅಂಗಳಕ್ಕೆ ಬರ್ತಿದೆ. ಮುಂದೆ ಓದಿ...

ಇನ್ಸ್ ಪೆಕ್ಟರ್ ವಿಕ್ರಂ ನಲ್ಲಿ ದರ್ಶನ್
ಇನ್ಸ್ ಪೆಕ್ಟರ್ ವಿಕ್ರಂ ಸಿನಿಮಾ ಮುಂದಿನ ತಿಂಗಳು ಫೆಬ್ರವರಿ 5ರಂದು ಚಿತ್ರಮಂದಿರದ ಅಂಗಳಕ್ಕೆ ಬರ್ತಿದ್ದಾರೆ. ಈ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಇನ್ಸ್ಟಾ ಗ್ರಾಮ್ ಲೈವ್ ಬಂದು ಬಹಿರಂಗ ಪಡಿಸಿದ್ದಾರೆ. ವಿಶೇಷ ಎಂದರೆ ಇನ್ಸ್ ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದರ್ಶನ್ ಪಾತ್ರದ ಬಗ್ಗೆ ಪ್ರಜ್ವಲ್ ಹೇಳಿದ್ದೇನು?
ಚಿತ್ರದಲ್ಲಿ ದರ್ಶನ್ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಲೈವ್ ನಲ್ಲಿ ಅಭಿಮಾನಿಯೊಬ್ಬರು ದರ್ಶನ್ ಪಾತ್ರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಡಿ ಬಾಸ್ ಪಾತ್ರ ಹೇಗಿದೆ ಎಂದು ಕೇಳಿದ ಅಭಿಮಾನಿಗೆ ಉತ್ತರ ನೀಡಿದ ಪ್ರಜ್ವಲ್, 'ದರ್ಶನ್ ಜೊತೆ ತೆರೆಹಂಚಿರೊಳ್ಳುವುದಕ್ಕೆ ನಾನು ಲಕ್ಕಿ, ದರ್ಶನ್ ಅಣ್ಣನ ಪಾತ್ರದ ಇವಾಗ ಏನು ಹೇಳಲ್ಲ, ದೊಡ್ಡ ಪರದೆ ಮೇಲೆ ನೋಡಿ ಅವಾಗನೇ ಮಜಾ ಬರುತ್ತೆ. ಈಗ ಹೇಳಿದರೆ ಕುತೂಹಲ ಇರಲ್ಲ' ಎಂದು ಹೇಳಿದ್ದಾರೆ.

ಶಿವಣ್ಣ ಅವರ ಇನ್ಸ್ ಪೆಕ್ಟರ್ ವಿಕ್ರಂ ನೆನಪಿಸುತ್ತೆ
ಇನ್ನು ತನ್ನ ಪಾತ್ರದ ಬಗ್ಗೆ ಮಾತನಾಡಿದ ಪ್ರಜ್ವಲ್, ಈ ಸಿನಿಮಾ ಶಿವಣ್ಣ ಅವರ ಇನ್ಸ್ ಪೆಕ್ಟರ್ ವಿಕ್ರಮ್ ನೆನಪಿಸುತ್ತೆ. ತುಂಬಾ ಪೋಲಿ ಮತ್ತು ತುಂಬಾ, ಆದರೆ ಕೆಲಸದಲ್ಲಿ ನಿಷ್ಟಾವಂತನಾಗಿರುವ ಪೊಲೀಸ್ ಪಾತ್ರವಿದು ಎಂದಿದ್ದಾರೆ. ಇನ್ನು ಸಿನಿಮಾದಲ್ಲಿ ನಟ ರಘು ಮುಖರ್ಜಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದಿದ್ದಾರೆ.

ಜನವರಿ 26ಕ್ಕೆ ಟ್ರೈಲರ್ ರಿಲೀಸ್
ಅಂದಹಾಗೆ ಚಿತ್ರದ ಟ್ರೈಲರ್ ಇದೇ ತಿಂಗಳು ಜನವರಿ 26 ಗಣರಾಜ್ಯದಿನದ ಅಂಗವಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದಿಂದ ಟೀಸರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Recommended Video

ಜಾಕಿ ಖ್ಯಾತಿಯ ಭಾವನಾ ನಾಯಕಿ
ಚಿತ್ರದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ಜಾಕಿ ಸಿನಿಮಾ ಖ್ಯಾತಿಯ ನಟಿ ಭಾವನಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಭಾವನಾ ಮತ್ತು ಪ್ರಜ್ವಲ್ ಒಟ್ಟಿಗೆ ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಶ್ರೀ ನರಸಿಂಹ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











