ತಮ್ಮನ ಬಳಿಕ ಅಣ್ಣನ ಸಿನಿಮಾಗೆ ಸಾಥ್ ನೀಡ್ತಾರೆ ದರ್ಶನ್
Recommended Video

ಒಂದು ಕಡೆ ನಟ ಪ್ರಜ್ವಲ್ ದೇವರಾಜ್ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಇತ್ತ ಅವರ ಸಹೋದರ ಪ್ರಣಮ್ ಕೂಡ ತಮ್ಮ ಸಿನಿ ಕೆರಿಯರ್ ಶುರು ಮಾಡಿದ್ದಾರೆ. ಅವರ ಮೊದಲ ಸಿನಿಮಾ 'ಕುಮಾರಿ 21 F' ಚಿತ್ರದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದ್ದು, ನಟ ದರ್ಶನ್ ಅದನ್ನು ರಿಲೀಸ್ ಮಾಡಿದ್ದಾರೆ.
ತಮ್ಮನ ಬಳಿಕ ಈಗ ಅಣ್ಣನ ಸಿನಿಮಾಗೆ ದರ್ಶನ್ ಸಾಥ್ ನೀಡಲಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಹೊಸ ಸಿನಿಮಾದ ಮುಹೂರ್ತ ನಾಳೆ ನಡೆಯಲಿದ್ದು, ಈ ಚಿತ್ರಕ್ಕೆ ದರ್ಶನ್ ಕ್ಲಾಪ್ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ.

ಪ್ರಜ್ವಲ್ ಅವರ ಹೊಸ ಸಿನಿಮಾಗೆ 'ಜಂಟಲ್ಮನ್' ಎಂಬ ಹೆಸರನ್ನು ಇಡಲಾಗಿದೆ. ಈ ಹಿಂದೆ ಈ ಚಿತ್ರಕ್ಕೆ 'ಕುಂಭಕರ್ಣ' ಅಥವಾ 'ಐ ಆಮ್ ಕುಂಬಿ' ಎಂಬ ಹೆಸರುಗಳು ಹರಿದಾಡಿದವು. ಇನ್ನು ಸಿನಿಮಾದ ಕಥೆ ಸ್ಲೀಪಿಂಗ್ ಬ್ಯೂಟಿ ಸಿಂಡೋಮ್ ಎಂಬ ಖಾಯಿಲೆಯ ಕುರಿತು ಇದೆ. ಅಂದಹಾಗೆ, ನಿರ್ದೇಶಕ ಗುರುದೇಶ ಪಾಂಡೆ ಜೊತೆ ಕೆಲಸ ಮಾಡಿದ್ದ ಜಡೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಾಳೆ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ ಇದ್ದು, ಅದೇ ದಿನ 'ಜಂಟಲ್ಮನ್' ಸಿನಿಮಾ ಮುಹೂರ್ತ ನಡೆಯಲಿದೆ. ನಾಳೆ ಬೆಳ್ಳಗೆ ಬನಶಂಕರಿಯ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿಯ ದೇವಸ್ಥಾನದಲ್ಲಿ ಚಿತ್ರದ ಪೂಜೆ ನಡೆಯಲಿದೆ.


Click it and Unblock the Notifications











