ನಿನ್ನೆ ಗಣೇಶ್.. ಈಗ ಪ್ರಜ್ವಲ್ ದೇವರಾಜ್; ಅದೇ ಪತ್ರ, ಅದೇ ಮನವಿ

ಪ್ರಜ್ವಲ್ ದೇವರಾಜ್ ನಟನೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. 'ಜಂಟಲ್‌ಮನ್' ಬಳಿಕ ಯಾವುದೇ ಸಿನಿಮಾ ಗೆಲ್ಲಲಿಲ್ಲ. ಸದ್ಯ ಕೈಯಲ್ಲಿ ಎರಡ್ಮೂರು ಸಿನಿಮಾಗಳಿವೆ. ಇನ್ನೆರಡು ದಿನಗಳಲ್ಲಿ 38ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಕೂಡ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಕನ್ನಡದ ಸ್ಟಾರ್ ನಟರು ಅಭಿಮಾನಿಗಳ ಜೊತ ಹುಟ್ಟುಹಬ್ಬ ಆಚರಣೆಗೆ ಯಾಕೋ ಹಿಂದೇಟು ಹಾಕುತ್ತಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಹೆಚ್ಚು ಜನ ಒಂದೆಡೆ ಸೇರಬಾರದು ಎನ್ನುವ ಕಟ್ಟುನಿಟ್ಟು ಇತ್ತು. ಆ ಸಮಯದಲ್ಲಿ ಕಲಾವಿದರು ಅಭಿಮಾನಿಗಳ ಜೊತೆ ಹುಟ್ಟುಹಬ್ಬಕ್ಕ ಬ್ರೇಕ್ ಹಾಕಿದ್ದರು. ಕೆಲವರು ಅದನ್ನೇ ಮುಂದುವರೆಸುತ್ತಿದ್ದಾರೆ. ಕಳೆದ ವರ್ಷ ಕೂಡ ಪ್ರಜ್ವಲ್ ಅಭಿಮಾನಿಗಳ ಸಮ್ಮುಖದಲ್ಲಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿರಲಿಲ್ಲ.

Prajwal Devaraj Skips grand Birthday Celebrations Urges Fans to Support Poor Students Instead

ನಟ ಗಣೇಶ್ ಕೂಡ ಎರಡು ದಿನದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿ ಮನವಿ ಮಾಡಿದ್ದರು. ಹುಟ್ಟುಹಬ್ಬದ ದಿನ ನಾನು ಮನೆಯಲ್ಲಿ ಇರುವುದಿಲ್ಲ. ಅಭಿಮಾನಿಗಳು ಮನೆ ಬಳಿ ಬರಬೇಡಿ ಎಂದಿದ್ದರು. ಇಂದು(ಜುಲೈ 2) ಗಣೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜುಲೈ 4ರಂದು ಪ್ರಜ್ವಲ್ ಹುಟ್ಟುಹಬ್ಬ ಬರ್ತಿದೆ. ಅದಕ್ಕೂ ಮುನ್ನ ಅಭಿಮಾನಿಗಳು ಮನೆ ಬಳಿ ಬರಬೇಡಿ ಎಂದು ಹೇಳಿ ಪ್ರಜ್ವಲ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

"ಪ್ರೀತಿಯ ಅಭಿಮಾನಿಗಳಿಗೆ ಒಂದು ವಿನಂತಿ. ಜುಲೈ 4ರಂದು ನನ್ನ ಜನ್ಮದಿನ. ನನಗೆ ನಿಮ್ಮ ಆಶೀರ್ವಾದ ಪಡೆಯಲು ಹಾಗೂ ನಿಮ್ಮನ್ನು ಭೇಟಿ ಮಾಡಲು ಒಂದು ವಿಶೇಷ ದಿನ. ಸ್ನೇಹಿತರೆ, ಈ ಹುಟ್ಟುಹಬ್ಬದ ದಿನ ಚಿತ್ರೀಕರಣದ ಕಾರಣ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ದಯಮಾಡಿ ಕ್ಷಮಿಸಿ. ನಿಮ್ಮನ್ನು ರಂಜಿಸುವುದಕ್ಕಿಂತ ದೊಡ್ಡ ಹಬ್ಬ ನನಗೆ ಮತ್ತೊಂದಿಲ್ಲ. ಆದ ಕಾರಣ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ನಿಮ್ಮ ಪ್ರಜ್ವಲ್‌ಗೆ ಆಶೀರ್ವದಿಸಬೇಕೆಂದು ಕೋರಿಕೊಳ್ಳುತ್ತೇನೆ" ಎಂದು ಪ್ರಜ್ವಲ್ ಬರೆದುಕೊಂಡಿದ್ದಾರೆ.

ಅಭಿಮಾನಿಗಳು ನೆಚ್ಚಿನ ನಟನ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಲೈಕ್ಸ್, ಕಾಮೆಂಟ್ ಮಾಡುತ್ತಿದ್ದಾರೆ. ಅಡ್ವಾನ್ಸ್ ಬರ್ತ್‌ಡೇ ವಿಶಸ್ ತಿಳಿಸಿದ್ದಾರೆ. ಈ ವರ್ಷ ಪ್ರಜ್ವಲ್ ನಟಿಸಿದ 'ಗಣ' ಹಾಗೂ 'ರಾಕ್ಷಸ' ಚಿತ್ರಗಳು ತೆರೆಗೆ ಬಂದಿತ್ತು. ಆದರೆ ಎರಡೂ ಸಿನಿಮಾಗಳು ಬಂದು ಹೋಗಿದ್ದು ಯಾರಿಗೂ ಗೊತ್ತಾಗಲಿಲ್ಲ. 'ಮಾಫಿಯಾ' ಎಂಬ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕಳೆದ ವರ್ಷ ಅವರು ನಟಿಸಿದ್ದ ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ.

ಗುರುದತ್ ಗಾಣಿಗ ನಿರ್ದೇಶನದಲ್ಲಿ 'ಕರಾವಳಿ' ಎಂಬ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದ ಪೋಸ್ಟರ್‌ಗಳು ಬಿಡುಗಡೆಯಾಗಿ ಗಮನ ಸೆಳೆದಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಚಿತ್ರದಲ್ಲಿ ಕಂಬಳ ಕ್ರೀಡೆಯ ಸುತ್ತಾ ಕಥೆ ಮಾಡಿದ್ದಾರೆ ಎನ್ನಲಾಗ್ತಿದೆ. 'ಜಾತರ', 'ಚೀತಾ' ಎಂಬ ಮತ್ತೆರಡು ಸಿನಿಮಾಗಳಲ್ಲಿ ಅಭಿಮಾನಿಗಳ ಪ್ರೀತಿಯ ಡೈನಾಮಿಕ್ ಪ್ರಿನ್ಸ್ ಮಿಂಚಿದ್ದಾರೆ.

'ಸಿಕ್ಸರ್' ಸಿನಿಮಾ ಮೂಲಕ ಪ್ರಜ್ವಲ್ ಚಿತ್ರರಂಗಕ್ಕೆ ಬಂದಿದ್ದರು. 'ಗೆಳೆಯ', 'ಮೆರವಣಿಗೆ', 'ಸಾಗರ್', 'ಚೌಕ', 'ಇನ್ಸ್‌ಪೆಕ್ಟರ್ ವಿಕ್ರಂ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಯಾವುದೇ ಸಿನಿಮಾ ಗೆದ್ದಿಲ್ಲ. ಸದ್ಯ ಒಂದೊಳ್ಳೆ ಬ್ರೇಕ್‌ಗಾಗಿ ಅವರು ಕಾಯುತ್ತಿದ್ದಾರೆ.

More from Filmibeat

English summary
Kannada actor Prajwal Devaraj, who turns 38 on July 4, has requested fans not to visit his home, citing film commitments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X