ದರ್ಶನ್ ಕಂಡ್ರೆ ಪ್ರಜ್ವಲ್ ದೇವರಾಜ್ ಗಿದೆ ಅಸೂಯೆ, ಹೊಟ್ಟೆ ಕಿಚ್ಚು.!
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಡ್ರೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗೆ ಅಸೂಯೆ ಇದೆ. ಹೀಗಂತ ನಾವು ಹೇಳ್ತಿಲ್ಲ. ಖುದ್ದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.
''ದರ್ಶನ್ ಮತ್ತು ನನ್ನ ತಂದೆ (ದೇವರಾಜ್) ನಡುವೆ ಒಳ್ಳೆ ಒಡನಾಟ ಇದೆ. ದರ್ಶನ್ ಹಾಗೂ ನನ್ನ ತಂದೆಯ ಸ್ನೇಹ ಕಂಡರೆ ನನಗೆ ಕೆಲವೊಮ್ಮೆ ಅಸೂಯೆ ಆಗುತ್ತೆ. ದರ್ಶನ್ ನಮ್ಮ ಮನೆಯ ಸದಸ್ಯರೇ ಆಗಿಹೋಗಿದ್ದಾರೆ. ಅಪ್ಪನ ಜೊತೆಗಿನ ದರ್ಶನ್ ಆತ್ಮೀಯತೆ ನನಗೆ ಹೊಟ್ಟೆಕಿಚ್ಚು ತರಿಸುತ್ತದೆ'' ಅಂತ ನಗುನಗುತ್ತಲೇ ಪ್ರಜ್ವಲ್ ದೇವರಾಜ್ ಹೇಳಿದರು.
ಪ್ರಜ್ವಲ್ ದೇವರಾಜ್ ಹೀಗೆ ಹೇಳುವಾಗ ಅಕ್ಕ-ಪಕ್ಕದಲ್ಲಿ ದೇವರಾಜ್ ಮತ್ತು ದರ್ಶನ್ ಕೂಡ ನಗುತ್ತಿದ್ದರು.

ಅಸಲಿಗೆ, ಪ್ರಜ್ವಲ್ ದೇವರಾಜ್ ಇದನ್ನೆಲ್ಲ ಹೇಳಿದ್ದು ಇತ್ತೀಚೆಗಷ್ಟೆ ನಡೆದ 'ಜಂಟಲ್ ಮನ್' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ. ಈ ಕಾರ್ಯಕ್ರಮಕ್ಕೆ ನಟ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ದರ್ಶನ್ ಹಾಗೂ ತಮ್ಮ ತಂದೆ ದೇವರಾಜ್ ಜೊತೆಗಿನ ಸ್ನೇಹದ ಕುರಿತು ಪ್ರಜ್ವಲ್ ದೇವರಾಜ್ ಖುಷಿಯಿಂದ ಮಾತನಾಡಿದರು.
ಅಂದ್ಹಾಗೆ, 'ಜಂಟಲ್ ಮನ್' ಚಿತ್ರ ಇಂದು ಬಿಡುಗಡೆ ಆಗಿದೆ. ಸ್ಲೀಪಿಂಗ್ ಸಿಂಡ್ರೋಮ್ ರೋಗದಿಂದ ಬಳಲುತ್ತಿರುವ ನಾಯಕನ ಸುತ್ತ 'ಜಂಟಲ್ ಮನ್' ಕಥೆ ಹೆಣೆಯಲಾಗಿದೆ. ಈ ಚಿತ್ರಕ್ಕೆ ಗುರು ದೇಶಪಾಂಡೆ ಬಂಡವಾಳ ಹಾಕಿದ್ದರೆ, ಜಡೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











