ಪ್ರಜ್ವಲ್ ಹುಟ್ಟುಹಬ್ಬಕ್ಕೆ 'ಇನ್ಸ್ಪೆಕ್ಟರ್ ವಿಕ್ರಂ' ಟೀಸರ್ ಗಿಫ್ಟ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ ಚಿತ್ರ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಈಗಾಗಲೆ ದಾಖಲೆ ಮಟ್ಟದ ವ್ಯೂಸ್ ಪಡೆದುಕೊಂಡಿದೆ. ವಿಖ್ಯಾತ್ ನಿರ್ಮಿಸುತ್ತಿರುವ ಈ ಚಿತ್ರದ ಒಂದು ನಿಮಿಷದ ವಿಶೇಷ ಟೀಸರ್ ಜುಲೈ ಮೂರ ರಂದು ಮಧ್ಯರಾತ್ರಿ ಬಿಡುಗಡೆಯಾಗಲಿದೆ.

ಈ ಬಾರಿ ಪ್ರಜ್ವಲ್ ಅವರ ಜನ್ಮದಿನದ (ಜುಲೈ 4) ಪ್ರಯುಕ್ತ ಟೀಸರ್ ಬಿಡುಗಡೆಗೊಳಿಸುತ್ತಿರುವುದಾಗಿ ವಿಖ್ಯಾತ್ ತಿಳಿಸಿದ್ದಾರೆ. ಶ್ರೀ ನರಸಿಂಹ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ಗೆ ಜೋಡಿಯಾಗಿ ಜಾಕಿ ಖ್ಯಾತಿಯ ಭಾವನಾ ನಟಿಸಿದ್ದಾರೆ.ದರ್ಶನ್ ತೂಗುದೀಪ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಫ್ತಿ ಖ್ಯಾತಿಯ ಛಾಯಾಗ್ರಾಹಕ ನವೀನ್ ಕುಮಾರ್ ಚಿತ್ರದ ಸಿನೆಮಾಟೋಗ್ರಫಿ ನಿರ್ವಹಿಸಿದ್ದಾರೆ. ಪ್ರಜ್ವಲ್ ಬಳಿ ಈಗಾಗಲೆ ಸಾಲು ಸಾಲು ಸಿನಿಮಾಗಳಿವೆ. ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾ ಜೊತೆಗೆ ಜಂಟಲ್ ಮೆನ್, ರುದಿರಾ ಜೊತೆಗೆ ಪಿ ಸಿ ಶೇಖರ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದ ಜೊತೆಗೆ ಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲು ಕಾಣಿಸಿಕೊಳ್ಳುತ್ತಿದ್ದಾರೆ.

prajwal devaraj starrer inspector Vikram film special teaser will release on his birthday

ಸದ್ಯ ಅನೌನ್ಸ್ ಆಗಿರುವ ಸಿನಿಮಾದಲ್ಲಿ ಪ್ರಜ್ವಲ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರಜ್ವಲ್ ಗೋಸ್ಕರವೆ ತಯಾರಿಸಿದ ಕಥೆ ಇದಾಗಿದೆಯಂತೆ. ಈ ಚಿತ್ರದಲ್ಲಿ ಪ್ರಜ್ವಲ್ ಅವರ ಲುಕ್ ಸಂಪೂರ್ಣವಾಗಿ ಭಿನ್ನವಾಗಿರಲಿದೆಯಂತೆ. ಹುಟ್ಟುಹಬ್ಬದ ದಿನ ಟೈಟಲ್ ಬಹಿರಂಗ ಆಗುವ ಸಾಧ್ಯತೆ ಇದೆ.

More from Filmibeat

English summary
Kannada actor prajwal devaraj starrer inspector Vikram film special teaser will release on his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X