ಮೇಘನಾ ರಾಜ್‌ ಜೊತೆ ನಟಿಸಲು ಪ್ರಜ್ವಲ್‌ ಗ್ರೀನ್‌ ಸಿಗ್ನಲ್‌: ಫ್ಯಾನ್‌ ಫುಲ್‌ ಖುಷ್‌

ಕೆಲ ಸಮಯದಿಂದ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದ ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್ ಮತ್ತೆ ಬೆಳ್ಳಿ ತೆರೆ ಬರಲು ಸಜ್ಜಾಗಿದ್ದಾರೆ. ಪುತ್ರ ರಾಯನ್‌ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದ ಮೇಘನಾ ರಾಜ್‌, ಇತ್ತೀಚಿಗೆ ಕಿರುತೆರೆಯ 'ಡಾನ್ಸಿಂಗ್‌ ಚಾಂಪಿಯನ್‌' ರಿಯಾಲಿಟಿ ಶೋನ ತೀರ್ಪುಗಾರರಾಗಿ ಮತ್ತೆ ಕ್ಯಾಮರಾ ಮುಂದೆ ಕಾಣಿಸಿಕೊಂಡರು.

ಸ್ಯಾಂಡಲ್‌ವುಡ್‌ ಸೇರಿದಂತೆ ಇತರ ಭಾಷೆಗಳಲ್ಲೂ ಬಹು ಬೇಡಿಯ ನಟಿಯಾಗಿದ್ದ ಮೇಘನಾ ರಾಜ್‌ ಈವರೆಗೂ ಮಗನ ಆರೈಕೆಯಲ್ಲಿ ಸಮಯ ಕಳೆದಿದ್ದಾರೆ. ಇದೀಗ ಮೇಘನಾ ರಾಜ್‌ ಮತ್ತೆ ಬೆಳ್ಳಿ ತೆರೆಗೆ ಕಂಬ್ಯಾಕ್‌ ಮಾಡುತ್ತಿದ್ದಾರೆ. 2019ರಲ್ಲಿ ತೆರೆ ಕಂಡ ಕುರುಕ್ಷೇತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ಮೇಘನಾ ರಾಜ್‌, ದೊಡ್ಡ ವಿರಾಮದ ಬಳಿಕ ಇತ್ತೀಚಿಗೆ ಬಿಡುಗಡೆಯಾದ ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮೇಘನಾ ರಾಜ್‌ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ.

ಪನ್ನಗಾಭರಣ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ಮೇಘನಾ ರಾಜ್‌ ನಟಿಸುತ್ತಿರುವುದು ಗೊತ್ತೇ ಇದೆ. ಈ ಹಿಂದೆ ಡೈರೆಕ್ಟರ್‌ ಚೇತನ್‌, ನಟಿ ಮೇಘನಾ ಹಾಗೂ ನಿರ್ಮಾಪಕ ಪನ್ನಗಾಭರಣ ಸ್ಪೆಷಲ್ ಟೀ ಶರ್ಟ್ ಧರಿಸಿದ್ದ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ವಿಚಾರ ಹೊರಬಿದ್ದು ಕೆಲ ತಿಂಗಳುಗಳೇ ಕಳೆದಿದ್ದು, ಚಿತ್ರದ ಬಗ್ಗೆ ಹೊಸ ಅಪ್ಡೇಟ್‌ವೊಂದು ಹೊರಬಂದಿದೆ.

Prajwal Devaraj to play a special role in Meghana Raj Sarjas New Movie

ಪನ್ನಗಾಭರಣ ನಿರ್ಮಾಣದ, ಮೇಘನಾ ರಾಜ್‌ ನಟನೆಯ ಹೊಸ ಚಿತ್ರಕ್ಕೆ ಮತ್ತೊಬ್ಬ ವಿಶೇಷ ವ್ಯಕ್ತಿಯ ಎಂಟ್ರಿಯಾಗಿದೆ. ಮೇಘನಾ ರಾಜ್‌ ಹೊಸ ಚಿತ್ರದಲ್ಲಿ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ ಖಡಕ್ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ವಿಷಯ ಹೊರ ಬೀಳುತ್ತಿದ್ದಂತೆ ಮೇಘನಾ ರಾಜ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. ಮೇಘನಾ ರಾಜ್‌ ಕಂಬ್ಯಾಕ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಡಬ್ಬಲ್‌ ಧಮಾಕಾ ಸಿಕ್ಕಂತಾಗಿದೆ.

ವಿಶಾಲ್​ ನಿರ್ದೇಶನ ನಿದೇರ್ಶನದ ಮೇಘನಾ ರಾಜ್‌ ಹೊಸ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಿರ್ವಹಿಸುತ್ತಿರುವ ಬಗ್ಗೆ ಪ್ರಜ್ವಲ್‌ ದೇವರಾಜ್‌ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಸಿನಿಮಾ ಪ್ರಿಯರಿಗೆ ಬಹಳಷ್ಟು ನಿರೀಕ್ಷೆಯಿದ್ದು, ಚಿತ್ರದ ನಾಯಕ ನಟ ಯಾರಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ. ಇನ್ನು ಈ ಚಿತ್ರದ ಶೀರ್ಷಿಕೆ ಬಗ್ಗೆಯೂ ತೀವ್ರ ಕುತೂಹಲವಿದ್ದು, ಮೇಘನಾ ರಾಜ್‌ ಪತಿ ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬ( ಅಕ್ಟೋಬರ್‌ 17) ರಂದು ಚಿತ್ರತಂಡ ರಿವೀಲ್‌ ಮಾಡುವ ಸಾಧ್ಯತೆ ಇದೆ.

ಚಿರಂಜೀವಿ ಸರ್ಜಾ, ಪನ್ನಗಾಭರಣ ಹಾಗೂ ಪ್ರಜ್ವಲ್‌ ದೇವರಾಜ್ ಬಾಲ್ಯದಿಂದಲೂ ಉತ್ತಮ ಸ್ನೇಹಿತರು. ಈ ಮೂವರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಚಿರು ಅಗಲಿಕೆಯ ನಂತರ ನಟಿ ಮೇಘನಾ ರಾಜ್‌ ಅವರಿಗೆ ಪನ್ನಗಾಭರಣ ಹಾಗೂ ಪ್ರಜ್ವಲ್‌ ದೇವರಾಜ್ ಬೆನ್ನೆಲುಬಾಗಿದ್ದರು. ಹೀಗಾಗಿ ಚಿರು ಅವರ ಸ್ಥಾನದ ಬದಲಿಗೆ ಮೇಘನಾ ರಾಜ್‌, ಪನ್ನಗಾಭರಣ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಮಾನಿಗಳಿಗೆ ಇದು ಸಂತಸದ ವಿಚಾರವಾಗಿದ್ದು, ಚಿತ್ರದ ಬಗ್ಗೆ ಮುಂದಿನ ಅಪ್ಡೇಟ್‌ಗಾಗಿ ಕಾತುರರಾಗಿದ್ದಾರೆ.

More from Filmibeat

English summary
Sandalwood actor Prajwal Devraj to play special role in Meghana Raj's upcoming movie.
Read more about: sandalwood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X